ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಫ್.ಬೆಂಡಿಗೇರಿ ನಿಧನ

Source: sonews | By Staff Correspondent | Published on 10th May 2019, 7:50 PM | Coastal News | Don't Miss |

ಮುಂಡಗೋಡ : ತಾಲೂಕಿನ ಕಾಂಗ್ರೆಸ್ ಹಿರಿಯ ಮುಖಂಡ, ಮುಸ್ಲಿಂ ಧುರಿಣ ಹಾಜಿ ಬಿ.ಎಫ್.ಬೆಂಡಿಗೇರಿ(91) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು  ಶುಕ್ರವಾರ ಬೆಳಗಿನ ಜಾವ  2.30 ಕ್ಕೆ  ನಿಧನರಾಗಿದ್ದಾರೆ. 

ಮೃತರ ಅಂತಿಮ ದರ್ಶನವನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಸಚಿವ ಎಚ್,ಕೆ.ಪಾಟೀಲ, ಎ.ಎಮ್ ಹಿಂಡಸಗೇರಿ ಶಾಸಕ ಶಿವರಾಮ ಹೆಬ್ಬಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾಜಿ ಶಾಸಕ ವಿ.ಎಸ್.ಪಾಟೀಲ ಪಡೆದು ಕಂಬನಿ ಮಿಡಿದಿದ್ದಾರೆ.

ಬುಡನ್‍ಸಾಬ ಫಕ್ರೂಸಾಬ ಬೆಂಡಿಗೇರಿ ಜಿಲ್ಲೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಇವರು ಕಾಂಗ್ರೆಸ್ ನ ತಾಲೂಕಾ ಅಧ್ಯಕ್ಷರಾಗಿ ಸುಮಾರು 42 ವರ್ಷ ಸೇವೆ ಸಲ್ಲಿಸಿದ್ದಾರೆ. ಮುಂಡಗೋಡಿನ ದಸ್ತಗಿರಿಯಾ ದಾರೂಲ ಉಲೂಮ್ ಮದರಸಾ ಹಾಗೂ ಹಾನಗಲ್ ನ ಆಲಾ ಹಜರತ್ ಮಕ್ಬೂಲ ಶಾ ಖಾದ್ರಿ ಕಮೀಟಿಯ ಹಾಗೂ ಉತ್ತರಕನ್ನಡ ಜಿಲ್ಲೆಯ ತಾಮೀರ ಕೋ.ಕ್ರೇಡಿಟ್ ಸೋಸೈಟಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಅನಾರೋಗ್ಯದಲ್ಲಿಯೂ ಅಲ್ಹಾನ ಸ್ಮರಣೆ ಐದು ಹೊತ್ತಿನ ನಮಾಜ ಬಿಡುತ್ತಿರಲಿಲ್ಲ. ಕೈ, ಬಾಯಿ ಸ್ವಚ್ಚ ಇರುವ ವ್ಯಕ್ತಿಯಾಗಿದ್ದರಿಂದ ಹಾಗೂ ನೇರ ನುಡಿಯವರಾದ ಇವರ ಮುಂದೆ  ಮಾತನಾಡಲು ಹಿರಿಯ ರಾಜಕಾರಿಗಳು ಸಹ ಹಿಂಜರಿಯುತ್ತಿದ್ದರು. ಇವರನ್ನು ಕೆಲವರು ಮುಂಡಗೋಡಿನ ಹುಲಿ ಎಂದು ಸಂಭೋದಿಸುತ್ತಿದ್ದರು. ಆಶ್ರಯ ಕಮೀಟಿಯ ಅಧ್ಯಕ್ಷರಾಗಿದ್ದಾಗ ಯೋಗ್ಯ ಫಲಾನುಭವಿಗಳನ್ನು ಗುರುತಿಸಲು ಸ್ಥಳಕ್ಕಾಗಿಮಿಸಿ  ಪರಿಶೀಲಿಸಿ ಮನೆಗಳನ್ನು ನೀಡುತ್ತಿದ್ದರಿಂದ ಇಂದಿನವರೆಗೂ ಗ್ರಾಮಗಳಲ್ಲಿ ಇವರ ಗುಣಗಾನ ಕೇಳಿಸುತ್ತಿದೆ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್‍ರವರು ಎಮ್.ಎಲ್.ಎ(ಶಾಸಕ)ಸ್ಥಾನಕ್ಕೆ ಸ್ಪರ್ಧಿಸುವಂತೆ ಹಲವಾರು ಬಾರಿ ಹೇಳಿದರು ಸ್ಪರ್ಧೇ ಮಾಡಲಿಲ್ಲ. ಎಸ್.ಬಂಗರಾಪ್ಪ ಹಾಗೂ ವಿರಪ್ಪ ಮೂಯ್ಯಲಿ ಮುಖ್ಯಮಂತ್ರಿ ಯಾಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವಂತೆ ಕೇಳಿಕೊಂಡರು ಯಾವುದೇ ಸ್ಥಾನಮಾನಕ್ಕೆ ಒಪ್ಪಿಕೊಳ್ಳದೇ ಪಕ್ಷವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಾಗಿದರು. ವಿವಿಧ ಪಕ್ಷಗಳು ಅವರನ್ನು ತಮ್ಮತ್ತ ಸೇಳೆದುಕೊಳ್ಳಲು ಪ್ರಯತ್ನ ಪಟ್ಟು ಆಮೀಷ ಒಡ್ಡಿದರು ಅವರು ಯಾವುದೆ ಆಮೀಷಕ್ಕೆ ಒಳಗಾಗದೇ  ಕಟ್ಟಾ ಕಾಂಗ್ರೆಸಿಗ ಎಂದು ಹೆಸರುವಾಸಿಯಾಗಿದ್ದರು ಸರ್ವ ಧರ್ಮಿಯರನ್ನು ಸಮಾನವಾಗಿ ನೋಡುತ್ತಿದ್ದರಿಂದ ಎಲ್ಲ ಸಮಾಜದವರು ಅವರನ್ನು ಗೌರವದಿಂದ ಕಾಣುತ್ತಿದ್ದರು. ಇವರ ನಿಧನದಿಂದ  ಮುಂಡಗೋಡ ತಾಲೂಕ ಜನತೆ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ದೇವರಾಜ ಅರಸ್ ವಿರಪ್ಪ ಮೂಯ್ಯಿಲಿ, ಎಸ್.ಬಂಗಾರಪ್ಪ, ಮಾರ್ಗರೇಟ್ ಅಳ್ವಾ, ಎಚ್.ಕೆ.ಪಾಟೀಲ, ಎಸ್.ಎಂ.ಯಾಹ್ಯಾ ಆಪ್ತರಲ್ಲಿ ಗುರುತಿಸಿಕೊಂಡಿದ್ದರು. ಮೃತರಿಗೆ ಮೂರು ಗಂಡು ಹಾಗೂ ಏಳು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಸ್ನೇಹಿತರನ್ನು  ಅಗಲಿದ್ದಾರೆ.

ಮೃತರ ಅಂತಿಮ ದರ್ಶನ ಪಡೆಯಲು ಶುಕ್ರವಾರ ಬೆಳಗಿನ ಜಾವದಿಂದಲೇ ಜನರು ತಂಡೋಪತಂಡವಾಗಿ ಆಗಿಮಿಸುತ್ತಿದ್ದರು. ಅಂತಿಮ ಯಾತ್ರೆಯಲ್ಲಿ ಮುಂಡಗೋಡ ಜನತೆ ಸೇರಿದಂತೆ ಜಿಲ್ಲೆಯ ಇತರೆ ತಾಲೂಕಿನ ಜನತೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರು ಪಾಲ್ಗೊಂಡಿದ್ದರು. ಜಿಲ್ಲೆಯ ತಾಮೀರ ಕೋ ಕ್ರೇಡಿಟ್ ಸೊಸೈಟಿಯ ಎಲ್ಲಾ ಬ್ರಾಂಚ್ ನ ಸಿಬ್ಬಂದಿಗಳು ಪಾಲ್ಗೊಂಡಿದ್ದರು

ತಮ್ಮ 'ಶೇರ್ ಕೊ ಗಂವಾಲಿಯಾ. ಐಸಾ ಆದಾಮಿ ಫಿರ್ ಮಿಲನೆಕಾ ಮುಶ್ಕಿಲ್' ಇಂತಹ ದಿನಗಳಲ್ಲಿ ಕೈ ಬಾಯಿ ಸ್ವಚ್ಚ ಇದ್ದವ ರಾಜಕೀಯ ರಂಗದಲ್ಲಿ  ಸಿಗುವುದು ಅಪರೂಪ. -ಆರ್.ವಿ ದೇಶಪಾಂಡೆ 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...