ಹಿರಿಯ ನಾಗರಿಕರ ಕ್ರೀಡಾಕೂಟ: ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ:ಮಹೇಂದ್ರ ಸಿಂಘೀ*

Source: so news | Published on 4th October 2019, 11:57 PM | Sports News | Don't Miss |

 

ಹುಬ್ಬಳ್ಳಿ: ಆಧುನಿಕ ಜಗತ್ತಿನಲ್ಲಿ ವಯಸ್ಸಾದ ತಂದೆ ತಾಯಿ ಹಾಗೂ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳಿಸುವ ಪರಿಪಾಠ ಬೆಳೆಯುತ್ತಿದೆ. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ ಎಂದು ಮಹಾವೀರ ಲಿಂಬ್ ಸೆಂಟರ್ ಮಹೇಂದ್ರ ಸಿಂಘೀ ಹೇಳಿದರು. 
ಬಿ.ವ್ಹಿ.ಬಿ ಇಂಜಿನೀಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
ದೇಶದಲ್ಲಿ ಪಾಶ್ಚ್ಯಾತ್ಯ ಸಂಸ್ಕøತಿ ಹೆಚ್ಚಾಗುತ್ತಿದ್ದು. ಈ ಪದ್ದತಿ ಬದಲಾಗಬೇಕು. ಹಿರಿಯರು, ತಂದೆ ತಾಯಿಯರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು. ವಯಸ್ಸಾದರೂ ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡ ಹಿರಿಯರನ್ನು ನೋಡಿದರೆ ಸಂತೋಷವಾಗತ್ತದೆ ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ಹಾಗೂ ಹಿರಿಯ ನಾಗರಿಕರ ಕೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಬಿ.ಎ.ಪಾಟೀಲ, ಸರ್ಕಾರ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕಾನೂನುಗಳನ್ನು ರೂಪಿಸಿದೆ. ಹಿರಿಯರ ಸಹಾಯಕ್ಕಾಗಿ ವಿಷೇಶ ಪ್ರಾವಧಾನಗಳನ್ನು ನೀಡಲಾಗಿದೆ. ಇವುಗಳ ಬಗ್ಗೆ ಹಲವು ಜನರಿಗೆ ಮಾಹಿತಿ ಇಲ್ಲ. ಸರ್ಕಾರದ ಸೌಲಭ್ಯಗಳನ್ನು ಹಿರಿಯ ನಾಗರಿಕರಿಗೆ ತಲುಪಿಸಲು ಸಂಘ ಪ್ರಯತ್ನಿಸಲಾಗುತ್ತಿದೆ. ಸರ್ಕಾರ ಹಿರಿಯ ನಾಗರಿಕ ಕುಂದು ಕೊರೆತೆಗಳ ಅಧ್ಯಯನಕ್ಕಾಗಿ ಆಯೋಗ ಹಾಗೂ ಮಂಡಳಿ ನೇಮಕ ಮಾಡಬೇಕು. ಹಿರಿಯ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸರಲು ಏಕಗವಾಕ್ಷಿ ಯೋಜನೆ ತೆರಯಬೇಕು ಎಂದು ಹೇಳಿದರು. 
ಈ ಸಂದರ್ಭದಲ್ಲಿ ಅಂದ ಮಕ್ಕಳ ಶಿಕ್ಷಣ ಸಂಸ್ಥೆಯ ಐ.ಕೆ. ಲಕ್ಕುಂಡಿ, ಕಿಮ್ಸ್ ವೈದ್ಯಾಧಿಕಾರಿ ಡಾ.ಸುನಿಲ್ ಕೊಕ್ಲೇ, ಬಿ.ವ್ಹಿ.ಬಿ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಕುರಡಗೋಡಿ, ರಮಾ ನೀಲಪ್ಪ ಗೌಡರು, ಮಹಾವಿರ ಕುಂದೂರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. 
ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ.ಎಂ.ಅಮರನಾಥ ಸ್ವಾಗತಿಸಿದರು. ಉಪಸ್ಥತರಿದ್ದರು. ಹಿರಿಯರಾದ ವನಿತಾ ಹೆಗಡೆ ಪ್ರಾರ್ಥನಿಸಿದರು. 

 *ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡ ಹಿರಿಯ ನಾಗರಿಕರು* 

100 75 ಮೀಟರ್ ಓಟ, ನಡಿಗೆ, ಶಾಟ್ ಪುಟ್, ಕ್ರಿಕೆಟ್ ಬಾಲು ಎಸೆತ ಕ್ರೀಡೆಗಳನ್ನು ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾತ್ತು. ಉತ್ಸಾಹದಿಂದ ಹಿರಿಯ ನಾಗರಿಕರು ಕ್ರೀಡೆಯಲ್ಲಿ ಪಾಲ್ಗೊಂಡರು. 
60 ರಿಂದ 70 ವಯೋ ಗುಂಪಿನವರಿಗಾಗಿ ಏರ್ಪಡಿಸಿದ್ದ, ಪುರಷರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಕೆ.ಬಿ.ಹುಬ್ಬಳ್ಳಿ ಪ್ರಥಮ, ಈರಪ್ಪ ಕಾಡಪ್ಪನವರ ದ್ವಿತೀಯ,  ಜಿ.ಸಿ ಅರಳಿ ತೃತಿಯ ಸ್ಥಾನ ಗಳಿಸಿದರು. ಶಾಟ್ ಪುಟ್ ಎಸತದಲ್ಲಿ ಎಂ.ಎಂ. ಕುರಗೋಡಿ ಪ್ರಥಮ, ಈರಪ್ಪ ಕಾಡಪ್ಪನವರ ದ್ವಿತೀಯ, ಎಂ.ಎ.ಕಪ್ಪಸೂರ ತೃತೀಯ ಸ್ಥಾನಗಳಿಸಿದರು. 
71 ರಿಂದ 80 ವಯೋ ಗುಂಪಿನವರಿಗಾಗಿ ಏರ್ಪಡಿಸಿದ್ದ ಪುರುಷರ 75 ಮೀಟರ್ ಓಟದ ಸ್ಪರ್ಧೆಯಲ್ಲಿ ಎಸ್.ಎಂ.ಸಲಕಿ ಪ್ರಥಮ, ಜಿ.ಸಿ.ಮೋರೆ ದ್ವಿತೀಯ, ಎ.ವಿ.ಶೇಖ್ ತೃತಿಯ ಸ್ಥಾನ ಗಳಿಸಿದರು. ಶಾಟ್‍ಪುಟ್ ಎಸತದಲ್ಲಿ ಎಂ.ಸಿ.ರವದಿ ಪ್ರಥಮ, ಗುಡ್ಡದ ಮಠ ದ್ವೀತಿಯ, ಎಂ.ವಿ.ಶೇಖ್ ತೃತೀಯ ಸ್ಥಾನ ಗಳಿಸಿದರು.
81 ವಯೋಮಾನದವರಿಗೆ ಏರ್ಪಡಿಸಿದ 200 ಮೀಟರ್  ನಡಿಗೆ ಸ್ಪರ್ಧೇಯಲ್ಲಿ ಪಿ.ಎನ್.ಸಣ್ಣಮನಿ ಪ್ರಥಮ, ಪಿ.ಬಿ.ಹಿರೇಮಠ ದ್ವಿತೀಯ, ಮಲ್ಲಪ್ಪ ಬಿ ಗಂಗಣ್ಣನವರ ತೃತೀಯ ಸ್ಥಾನಗಳಿಸಿದರು. ಕ್ರಿಕೆಟ್ ಬಾಲ್ ಎಸತದಲ್ಲಿ ಪಿ.ಬಿ.ಹಿರೇಮಠ, ಪಿ.ಎನ್.ಸಣ್ಣಮನಿ ,ಆರ್.ಟಿ. ದೊಡ್ಡಮನಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು. 

ಮಹಿಳೆಯರ ಕ್ರೀಡಾ ಸ್ಪರ್ಧೆಗಳಲ್ಲಿ 60 ರಿಂದ 70 ವಯೋ ಗುಂಪಿನ 400 ಮೀಟರ್ ನಡಿಗೆಯಲ್ಲಿ ಭವಾನಿ ಬಂಡಾರಿ ಪ್ರಥಮ,  ವನಿತಾ ಹೆಗಡೆ ದ್ವಿತೀಯ, ವಿಮಲಾ ಎಸ್ ಜಾಧವ್ ತೃತೀಯ ಸ್ಥಾನ ಗಳಿಸಿದರು. ಕ್ರಿಕೆಟ್ ಬಾಲ್ ಎಸತ ಸ್ಪರ್ಧೆಯಲ್ಲಿ ಭವಾನಿ ಬಂಡಾರಿ, ಪಾರ್ವತಿ ಸಂಕದಾಳ, ದೌಶಾದೇವಿ ಕುಸುಗಲ್ ಜಯಗಳಿಸಿದರು. 71 ರಿಂದ 80 ವಯೋಮಾನದ ಗುಂಪಿನ 200 ಮೀಟರ್ ನಡಿಗೆಯಲ್ಲಿ ಅನುಸೂಯಾ ಪ್ರಥಮ, ಕಮಲಾಕ್ಷೀ, ದ್ವೀತಿಯ, ಎಸ್.ಎಂ.ಗೀತಾ ತೃತೀಯ ಸ್ಥಾನ ಗಳಿಸಿದರು. ಕ್ರಿಕೆಟ್ ಬಾಲ್ ಎಸತ ಸ್ಪರ್ಧೆಯಲ್ಲಿ ಕಮಲಾಕ್ಷ್ಮಿ ಹಿರೇಗೌಡರ, ಕೃಷ್ಣಾಬಾಯಿ ಕುಲಕರ್ಣಿ, ರಂಗರೇಜ ಜಯ ಗಳಿಸಿದರು. 
ಏಕಪಾತ್ರಾಭಿನಯ ಮತ್ತು ಜಾನಪದ ಗೀತೆಯಂತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿತ್ತು.

*ಮಲೇಷಿಯಾದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಹಿರಿಯ ನಾಗರಿಕರು* 

ಇಂದು ಜರುಗಿದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಜಿಲ್ಲೆಯ ಮೂವರು ಹಿರಿಯ ನಾಗರಿಕರು ಮಲೇಷಿಯಾದ ಸಾರ್ವಾಕ್ ರಾಜ್ಯದ ರಾಜಧಾನಿ, ಕುಚಿಂಗ್ ನಗರದಲ್ಲಿ, ಮಲೇಷಿಯಾ ಮಾಸ್ಟರ್ ಅಥ್ಲೆಟಿಕ್ಸ ಅಸೋಷಿಯೇಷನ್ ವತಿಯಿಂದ, ಡಿಸೆಂಬರ್ 2 ರಿಂದ 6 ರವರೆಗೆ ಆಯೋಜಿಸಲಾಗಿರುವ 21ನೇ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
83 ವರ್ಷದ ಎಂ.ಬಿ.ಗಂಗಣ್ಣ ರನ್ನಿಂಗ್ ಹಾಗೂ ಜಾವಲಿನ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 84 ವರ್ಷದ ಪಿ.ಬಿ.ಹಿರೇಮಠ ಶಾಟ್ ಪುಟ್, ಡಿಸ್ಕಸ್ ಥ್ರೋ ಹಾಗೂ ರನ್ನಿಂಗ್ ವಿಭಾಗದಲ್ಲಿ ಸ್ಪರ್ಧಿಸುವರು. 80 ವರ್ಷದ ಶಿವಪ್ಪ ಎಂ ಸಲಕಿ 10 ಹಾಗೂ 5 ಕಿ.ಮೀ. ನಡಿಗೆ, 5 ಕಿ.ಮೀ. ಹಾಗೂ 1500 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಜೊತೆಗೆ ಯೋಗಾಸನವನ್ನು ಪ್ರದರ್ಶಿಸುವರು.

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...