ಭಟ್ಕಳ: ಸಾಹಿಲ್‌ಆನ್ ಲೈನ್ ಮೀಡಿಯಾ ಸಂಸ್ಥೆಯಿಂದ ಡಾ.ಖಲೀಲುರ್ರಹ್ಮಾನ್ ಗೆ ಸನ್ಮಾನ

Source: S O News service | By Staff Correspondent | Published on 22nd July 2016, 3:17 PM | Coastal News | State News | Gulf News | Don't Miss |



ಭಟ್ಕಳ: ಇಲ್ಲಿನ ಸಾಹಿಲ್ ಆನ್ ಲೈನ್ ಮೀಡಿಯಾ ಸಂಸ್ಥೆಯಿಂದ ಭಟ್ಕಳ ಪ್ರಮುಖ ಮುಸ್ಲಿಮ್ ಮುಖಂಡ ಅನಿವಾಸಿ ಭಾರತೀಯ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಭಟ್ಕಳ ಮೀಡಿಯಾ ಸೂಸೈಟಿಯ ಅಧ್ಯಕ್ಷರೂ ಆಗಿರುವ ಡಾ. ಸೈಯ್ಯದ್ ಎಸ್.ಎಂ.ಖಲೀಲುರ್ರಹ್ಮಾನ್ ರನ್ನು ಅವರ ಸ್ವಗೃಹದಲ್ಲಿ ಸನ್ಮಾಸಿ ಗೌರವಿಸಲಾಯಿತು. 
ಇತ್ತಿಚೆಗೆ ದುಬೈಯಲ್ಲಿ ಐರ್ಲೆಂಡ್ ವಿಶ್ವವಿದ್ಯಾಲಯವೂ ಭಟ್ಕಳದ ಮೂಲದ ಅನಿವಾಸಿ ಭಾರತೀಯ ಹಾಗೂ ದುಬೈಯ ಪ್ರಮುಖ ಕಂಪನಿಗಳಲ್ಲಿ ಲೆಕ್ಕಪರಿಶೋಧಕರಾಗಿರುವ  ಎಸ್.ಎಂ. ಸೈಯ್ಯದ್ ಖಲೀಲುರ್ರಹ್ಮಾನ್ ರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಈ ಹಿನ್ನೆಯಲ್ಲಿ ಸಾಹಿಲ್ ಆನ್ ಲೈನ್ ಅಂತರ್ಜಾಲ ತಂಡದ ಸದಸ್ಯರ ನಿಯೋಗವು ಕೋಲಾ ಪ್ಯಾರಡೈಸ್ ಬಳಿಯ ಅವರ ಸ್ವಗೃಹಕ್ಕೆ ಹೋಗಿ ಅವರನ್ನು ಸ್ಮರಣಿಕೆಯನ್ನು ಶಾಲು ಹಾಕಿ ಸನ್ಮಾಸಲಾಯಿತು. 
ನಿಯೋಗದಲ್ಲಿ ಸಾಹಿಲ್ ಆನ್ ಲೈನ್ ಮೀಡಿಯಾ ಸೂಸೈಟಿಯ ನಿರ್ದೇಶಕ ಖಮರ್ ಸಾದಾ, ಪ್ರಧಾನ ಸಂಪಾದಕ ಇನಾಯತುಲ್ಲಾ ಗವಾಯಿ, ಕನ್ನಡ ತಾಣದ ಉಪಸಂಪಾದಕ ಎಂ.ಆರ್. ಮಾನ್ವಿ, ವ್ಯವಸ್ಥಾಪಕ ಮುಬಶ್ಶಿರ್ ಹುಸೇನ್ ಹಲ್ಲಾರೆ, ಮಾರ್ಕೇಟಿಂಗ್ ವಿಭಾಗದ ಯಾಹ್ಯಾ ಹಲ್ಲಾರೆ, ಕ್ಯಾಮರಾಮೆನ್ ಮಂಜು ಮುಟ್ಟಳ್ಳಿ, ಅಮೀನ್ ಝುಹೈಬ್, ಖಮರುಝ್ಝಮಾ, ಮು‌ಅಯೆಮಿನ್ ಸೇರಿಂದತೆ ಮುಂತಾದವರು ಉಪಸ್ಥಿತರಿದ್ದು. (ಫೋಟೊ: ೨೨-ಬಿಕೆ‌ಎಲ್-೦೨-ಎಸ್.ಎಂ.ಖಲೀಲ್ ಸನ್ಮಾನ)
 

Read These Next

ಜೂನ್ 29ರಿಂದ ಜುಲೈ 9 ರವರೆಗೆ  ಅಳ್ವೆಕೋಡಿ  ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಟಾ ಸುವರ್ಣ ಮಹೋತ್ಸವ

ಭಟ್ಕಳ: ಜಿಲ್ಲೆಯ ಪ್ರಸಿದ್ಧ ಅಲ್ವೇಕೋಡಿ  ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಟಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಜೂನ್ 29ರಿಂದ ...

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ರಾಜ್ಯಾದ್ಯಂತ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.73.40ರಷ್ಟು ಉತ್ತೀರ್ಣತೆ ದಾಖಲಾಗಿದೆ. ...

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ; 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ಈ ವರ್ಷದ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ 94 ರಷ್ಟು ಪ್ರಥಮ ಹಾಗೂ ದಕ್ಷಿಣ ಕಾಂಡ ಶೇ 92.12 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.