ಬೀಜ ವಿತರಣೆಗೆ ಕೃಷಿ ಇಲಾಖೆಯಿಂದ ಚಾಲನೆ;ಕೃಷಿ ಕಾರ್ಯಕ್ಕೆ ದಿನಗಣನೆ

Source: sonews | By Staff Correspondent | Published on 15th May 2019, 9:46 PM | Coastal News | Don't Miss |

ಭಟ್ಕಳ: ರಾಜ್ಯದಲ್ಲಿ ಮುಂಗಾರು ಕಾಲಿಡಲು ಇನ್ನೇನು ೨-೩ವಾರಗಳಷ್ಟೆ ಬಾಕಿ ಇದ್ದು ಕರಾವಳಿಗೆ ಮುಂಗಾರು ಜೂನ್ ೪-೫ ಕ್ಕೆ ಆಗಮಿಸುವ ಸಾಧ್ಯತೆ ಇದೆ  ಎನ್ನಲಾಗಿದೆ. ಈ ಮಧ್ಯೆ ಭಟ್ಕಳ ಕೃಷಿ ಇಲಾಖೆ ರೈತರಿಗೆ ಬೀಜ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳ ೧೫೦ಕ್ಕೂ ಹೆಚ್ಚು ರೈತರು ಕೃಷಿ ಇಲಾಖೆಯಿಂದ ಬೀಜವನ್ನು ಪಡೆದುಕೊಂಡು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದಾರೆ ಎನ್ನುವ ಮಾಹಿತಿ ದೊರಕಿದೆ.

೪೦೦ ಕಿಂಟಾಲ್ ಎಂಒ೪, ೧೨೦ ಕಿ. ಎಮ್ಟಿಯು ೧೦೦೧, ೧೦ಕಿ. ಜಯಾ ತಳಿಯ ಬೀಜವನ್ನು ಭಟ್ಕಳದ ಕೃಷಿ ಇಲಾಖೆಯಲ್ಲಿ ದಾಸ್ತಾನು ಮಾಡಿಟ್ಟುಕೊಳ್ಳಲಾಗಿದ್ದು, ತಾಲೂಕಿನಲ್ಲಿ ಎಮ್‌ಒ೪ ಬೀಜಕ್ಕೆ ಅತಿ ಹೆಚ್ಚಿನ ಬೇಡಿಕೆ ಇದ್ದು ರೈತರಿಗೆ ಯಾವುದೇ ಕೊರತೆಯಾಗದಂತೆ ಎಲ್ಲ ರೀತಿಯ ಕ್ರಮಕೈಗೊಂಡಿದ್ದೇವೆ. ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಲಭ್ಯವಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ್ ನಾಯ್ಕ ತಿಳಿಸಿದ್ದಾರೆ.

ಭಟ್ಕಳ ತಾಲೂಕಿನಲ್ಲಿ ವರ್ಷಂಪ್ರತಿ ಕೃಷಿ ಭೂಮಿಯಲ್ಲಿ ಕೊರತೆ ಉಂಟಾಗುತ್ತಿದ್ದು ಆತಂಕಕಾರಿ ಬೆಳವಣೆಗೆಯಾಗಿದೆ. ಈ ವರ್ಷ ೨೫೦೦ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ೫೦೦-೭೦೦ ಹೆಕ್ಟೇರ್ ಕೃಷಿ ಭೂಮಿ ಕಡಿಮೆಯಾಗಿದ್ದು ಇಲ್ಲಿನ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಜನವಸತಿ ಪ್ರತಿದೇಶಗಳು ಬೆಳೆಯುತ್ತಿದ್ದು ಗದ್ದೆಗಳಲ್ಲಿ ಮನೆ ಮಾಡಿಕೊಂಡು ವಾಸಿಸಲು ಆರಂಭಿಸಿರುವ ರೃತ ಕಟ್ಟಡಗಳ ನಿರ್ಮಾಣದಿಂದಾಗಿ ಕೃಷಿ ಭೂಮಿ ನಾಶವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೃಷಿ ಇಲಾಖೆ ನಿರ್ದೇಶಕರು, ಹಿಂದಿನ ಅಂಕಿಅಂಶಗಳಲ್ಲಿ ಭಾರಿ ಬದಲಾವಣೆಯಾಗಿದ್ದು, ಈ ವರ್ಷ ಮುಬೈಲ್ ಆಪ್ ಬಳಸಿಕೊಂಡು ಭೂಮಿಯ ಖಚಿತ ಮಾಹಿತಿಯನ್ನು ಲೆಕ್ಕ ಹಾಕಿ ಸರ್ಕಾರಕ್ಕೆ ವರದಿ ನೀಡಲಿದ್ದೇವೆ ಎಂದಿದ್ದಾರೆ.

ಆತಂಕ ಸೃಷ್ಟಿಸಿದ ರಣಬಿಸಿಲು : ಈ ಬಾರಿಯ ರಣಬಿಸಿಲಿಗೆ ಕೃಷಿ ಗದ್ದೆಗಳೆಲ್ಲ ಒಣಗಿ ಹೋಗಿದ್ದು ಮರಳು ದಿಬ್ಬದಂತೆ ಕಾಣಿಸುತ್ತಿವೆ. ಬೇಗ ಮಳೆ ಬಂದು ರೈತನ ಮೊಗದಲ್ಲಿ ಮಂದಹಾಸ ಮೂಡುವಂತಾಗಲಿ ಎಂದು ರೈತನ ಮಕ್ಕಳು ಆಗಸದತ್ತ ಮೊಖ ಮಾಡುತ್ತಿದ್ದಾರೆ. ಇಲ್ಲಿನ ಜಲಮೂಲ ದಿನೆ ದಿನೆ ಕಡಿಮೆಯಾಗುತ್ತಿದ್ದು ಸರಿಯಾದ ಸಮಯಕ್ಕೆ ಮಳೆ ಬಾರದೇ ಹೋದರೆ ಮುಂದೇನು? ಎಂಬ ಚಿಂತೆ ರೈತನ ಮೊಗದಲ್ಲಿ ಕಾಣುತ್ತಿದೆ. ಕಳೆದ ವರ್ಷ ಮೊದಲ ಮೂರು ತಿಂಗಳು ಮಳೆ ಬಿದ್ದ ಕಾರಣ ಸ್ವಲ್ಪ ಚೇತರಿಸಿಕೊಂಡಿದ್ದ ರೈತ ನಂತರದ ದಿನಗಳಲ್ಲಿ ಕಡಿಮೆಯಿಂದಾಗಿ ನೀರಿನ ಕೊರತೆಯನ್ನು ಅನುಭವಿಸಿದ್ದ ಈಗ ಮತ್ತೇ ಮುಂಗಾರು ವಿಳಂಬವಾದರೆ ಗತಿ ಏನು ಎಂಬುದು ರೈತನ ಬವಣೆ ಹೆಚ್ಚಾಗಲು ಕಾರಣವಾಗಿದೆ. ಸಧ್ಯಕ್ಕೆ ತಾಲೂಕಿನ ರೈತಾಪಿ ಜನರು ಆಗಸದೆಡೆ ಮೊಖ ಮಾಡಿಕೊಂಡಿದ್ದು ಮಳೆರಾಯನ ಕೃಪೆಗಾಗಿ ಕೈ ಎತ್ತಿ ಪ್ರಾರ್ಥಿಸುತ್ತಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...