ಮಣಿಪುರದ 3 ಜಿಲ್ಲೆಗಳಲ್ಲಿ ಸ್ವಯಂ ಆಡಳಿತ; ಬುಡಕಟ್ಟು ನಾಯಕರ ವೇದಿಕೆ ಘೋಷಣೆ

Source: Vb | By I.G. Bhatkali | Published on 17th November 2023, 9:22 AM | National News |

ಹೊಸದಿಲ್ಲಿ: ಮಣಿಪುರದ ಕುಕಿ-ಝ ಸಮುದಾಯದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ ಎಫ್)ಯು ಮೂರು ಜಿಲ್ಲೆಗಳಲ್ಲಿ ಸಮುದಾಯದ ಸದಸ್ಯರು 'ಸ್ವಯಂ ಆಡಳಿತ'ವನ್ನು ಹೊಂದಿರುತ್ತಾರೆ ಎಂದು ಘೋಷಿಸಿದೆ.

ತೆಂಗನೌಪಾಲ್, ಕಾಂಗ್‌ಪೊಕಿ ಮತ್ತು ಚುರಾಚಂದ್ರಪುರ ಜಿಲ್ಲೆಗಳಲ್ಲಿಯ ಕುಕಿ-ರೋ ಜನರು ಸ್ವಯಂ ಆಡಳಿತದ ವ್ಯಾಪ್ತಿಗೊಳಪಡುತ್ತಾರೆ ಮತ್ತು ಸಮುದಾ ಯವು ಮೈಕೈ ಮಣಿಪುರ ಸರಕಾರದಿಂದ ಯಾವುದೇ ನಿರೀಕ್ಷೆಯನ್ನು ಹೊಂದಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಐಟಿಎಲ್ ಎಫ್ ಪ್ರಧಾನ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಅವರು, "ಕೇಂದ್ರವು ನಮ್ಮನ್ನು ಗುರುತಿಸದಿದ್ದರೂ ನಾವು ಲೆಕ್ಕಿಸುವುದಿಲ್ಲ, ಕಳೆದ ಒಂದು ತಿಂಗಳಿನಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕೇಂದ್ರ ಸರಕಾ ರದ 'ಆಯ್ದ ನ್ಯಾಯ'ವು ವೇದಿಕೆಯು ಸ್ವಯಂ ಆಡಳಿತವನ್ನು ಘೋಷಿಸುವಂತೆ ಮಾಡಿದೆ'' ಎಂದರು.

ತನ್ನ ಬೇಡಿಕೆಗಳು ಎರಡು ವಾರಗಳಲ್ಲಿ ಈಡೇರದಿದ್ದರೆ ಕೇಂದ್ರ ಸರಕಾರವು ಗುರುತಿಸಲಿ ಅಥವಾ ಗುರುತಿಸದಿರಲಿ, ತಾನು ಸ್ವಯಂ ಸರಕಾರವನ್ನು ಸ್ಥಾಪಿಸುವುದಾಗಿ ಐಟಿಎಲ್‌ಎಫ್ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿದ್ದವು. ಕುಕಿ-ಝೂ ಸಮುದಾಯವು ಪ್ರತ್ಯೇಕ ಮುಖ್ಯಮಂತ್ರಿಯನ್ನು ಹೊಂದಿರಲಿದೆ, ಇಂಫಾಲದಿಂದ ಅನಿವಾರ್ಯವಾಗಿ ಹೊರಗೆ ತೆರಳಿ ಈಗ ಮರಳಲು ಸಾಧ್ಯವಾಗದಿರುವ ಸಮುದಾಯದ ಅಧಿಕಾರಿಗಳಿಗೆ ಹೊಣೆಗಾರಿಕೆಗಳನ್ನು ವಹಿಸಲಾಗುವುದು ಎಂದು ಟಾಂಬಿಂಗ್ ತಿಳಿಸಿದರು. ಇಂಫಾಲದಲ್ಲಿ ಮೈತೈ ಸಮುದಾಯವು ಬಹುಸಂಖ್ಯಾತವಾಗಿದೆ.

ಕಳೆದ ತಿಂಗಳು ಸಂಸತ್‌ನಲ್ಲಿ ಕೇಂದ್ರ ಗೃಹಸಚಿವ ಅಮಿತ್‌ಶಾ ಅವರು ಕುಕಿ-ಝೂ ಜನರನ್ನು 'ಹೊರಗಿನವರು' ಎಂದು ಉಲ್ಲೇಖಿಸಿದ್ದರು ಎಂದೂ ಟಾಂಬಿಂಗ್ ಬೆಟ್ಟು ಮಾಡಿದರು. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವು ಭುಗಿಲೆದ್ದಿದ್ದ ಮೇ 3ರಿಂದಲೂ ಐಟಿಎಲ್‌ಎಫ್ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಜೊತೆ ಹಲವಾರು ಸುತ್ತುಗಳ ಮಾತುಕತೆ ನಡೆಸಿದೆಯಾದರೂ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...