ಸುಪ್ರೀಮ್ ತೀರ್ಪು ಗೌರವಿಸುತ್ತೇವೆ; ತೀರ್ಪಿನಿಂದ ಸಂತೋಷವಾಗಿಲ್ಲ-ಜಿಲಾನಿ

Source: sonews | By Staff Correspondent | Published on 9th November 2019, 2:07 PM | National News | Don't Miss |

ನವದೆಹಲಿ: ಸರ್ವೊಚ್ಚ ನ್ಯಾಯಾಲಯದ ತೀರ್ಪು ನಮ್ಮ ನಿರೀಕ್ಷೆಯಂತೆ ಇರಲಿಲ್ಲ. ಆದರೆ ಜನತೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ಝಫ್ರಾಯ್ಬ್ ಜಿಲಾನಿ ತಿಳಿಸಿದ್ದಾರೆ.

ಈ ತೀರ್ಪಿನ ಬಗ್ಗೆ ಬಾಬರಿ ಆ್ಯಕ್ಷನ್ ಕಮಿಟಿ ಸಭೆ ನಡೆಸಿದ ನಂತರವಷ್ಟೇ ತೀರ್ಪಿನ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನದ ಬಗ್ಗೆ ಚಿಂತಿಸಲಾಗುವುದೆಂದು ತಿಳಿಸಿದ್ದಾರೆ.

ಇಡೀ ಮುಸ್ಲಿಮ್ ಸಮುದಾಯದಲ್ಲಿ ಪ್ರತಿಭಟನೆಯಾಗಲಿ ಅಥವಾ ಯಾವುದೇ ಸಭೆ ನಡೆಸದಂತೆ ಮುಸ್ಲಿಮ್ ಪರ್ಸನಲ್ ಬೋರ್ಡ್ ವಿನಂತಿಸಿದೆ. ಮಸೀದಿಯ ಬದಲಿಗೆ ಯಾವುದೇ ಪರ್ಯಾಯ ಜಾಗದ ಅಗತ್ಯ ನಮಗಿರಲಿಲ್ಲ. ನಾವು ಈ ತೀರ್ಪಿನ ಮರು ಪರಿಶೀಲನೆಯ ಬಗ್ಗೆ ಈಗ ತೀರ್ಮಾನ ನಡೆಸಿಲ್ಲ. ಸಭೆಯ ನಂತರ ಹೆಚ್ಚಿನ ಮಾಹಿತಿ ನೀಡುತ್ತೇವೆಂದು ಹೇಳಿದ್ದಾರೆ.

ಈ ತೀರ್ಪಿನಿಂದ ನಮ್ಮ ಹಕ್ಕು ಚ್ಯುತಿಯಾಗಿದೆ. ಈ ತೀರ್ಪಿನಲ್ಲಿ ಯಾವುದೇ ಪ್ರಭಾವವಿದೆಯೆಂದು ಖಂಡಿತ ಹೇಳುವುದಿಲ್ಲ. ನಾವು ತೀರ್ಪನ್ನು ಗೌರವಿಸುತ್ತೇವೆ. ಆದರೆ ನಮ್ಮ ನಿರೀಕ್ಷೆಯಂತೆ ಈ ತೀರ್ಪು ಬಂದಿಲ್ಲ ಆದ್ದರಿಂದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

Read These Next

ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟ ; ಉತ್ತರ ಕನ್ನಡದ ಜಿಲ್ಲೆಯ  ಆರ್ತಿ ಕಿರಣ ಶೇಟ್  ಆಯ್ಕೆ

ನವದೆಹಲಿ: ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟ ಮಾಡಿದ್ದು. ಉತ್ತರ ...

ವೆಲ್ಫೇರ್ ಪಾರ್ಟಿಯಿಂದ ಸಂವಿಧಾನ ಉಳಿಸಿ ಪೌರತ್ವ ಉಳಿಸಿ ಅಭಿಯಾನದ ಪೋಸ್ಟರ್ ಬಿಡುಗಡೆ

ಭಟ್ಕಳ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜ.23ರಿಂದ 30ರ ವರೆಗೆ ಸಂವಿಧಾನ ಉಳಿಸಿ ಪೌರತ್ವ ಉಳಿಸಿ ರಾಷ್ಟ್ರೀಯ  ಅಭಿಯಾನ ನಡೆಸುತ್ತಿದ್ದು ...

ಘನತ್ಯಾಜ್ಯ ಘಟಕಕ್ಕೆ ಪರಿಸರ ರಕ್ಷಣಾ ಸಮಿತಿ ಸದಸ್ಯೆ ಭೇಟಿ ; ಭಟ್ಕಳದ ‘ಕಪಡಾ ಬ್ಯಾಂಕ್ ಕಾರ್ಯಕ್ಕ ಮೆಚ್ಚುಗೆ

ಭಟ್ಕಳ: ನಗರದ ಸಾಗರ ರಸ್ತೆಯಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಸುಪ್ರೀಮ್ ಕೋರ್ಟ್‍ನಿಂದ ನಿಯೋಜಿತ ಪರಿಸರ ರಕ್ಷಣಾ ನೀತಿ ಸಮಿತಿ ಸದಸ್ಯೆ ...