ಸಂಭ್ರಮದ 71 ನೇ ಗಣರಾಜ್ಯೋತ್ಸವ ಆಚರಣೆ ಸಂವಿಧಾನ ಸಾಮಾನ್ಯರಿಗೂ ಸಮಾನ ಅವಕಾಶ ನೀಡಿದೆ : ಸಚಿವೆ ಶಶಿಕಲಾ ಜೊಲ್ಲೆ

Source: S.O. News Service | By MV Bhatkal | Published on 26th January 2020, 7:05 PM | Coastal News | Don't Miss |

ಕಾರವಾರ ಡಾ. ಬಿ.ಆರ್. ಅಂಬೇಡ್ಕರವರ ನೇತೃತ್ವದಲ್ಲಿ ರಚಿಸಿದ ಸಂವಿಧಾನದಿಂದಾಗಿಯೇ ಸಾಮಾನ್ಯ ವ್ಯಕ್ತಿ ಸೇರಿದಂತೆ ಮಹಿಳೆಯರು ಕೂಡ ಇಂದು ರಾಜಕೀಯದಲ್ಲಿ ಪ್ರವೇಶಿಸಿ ಉನ್ನತ ಸ್ಥಾನಮಾನ ಅಲಂಕರಿಸಲು ಸಾಧ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್  ಜೊಲ್ಲೆ ಹೇಳಿದರು. 
  
ರವಿವಾರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 71 ನೇ ಗಣರಾಜ್ಯೋತ್ಸವದÀ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ,  ವಿಶ್ವದಲ್ಲಿಯೇ ಭಾರತದ ಸಂವಿಧಾನ ಅತಿ ದೊಡ್ಡ  ಸಂವಿಧಾನವಾಗಿದ್ದು, ವಿವಿಧತೆಯಲ್ಲಿ ಏಕತೆ ಸಾಧಿಸಲು ಸಹಕಾರಿಯಾಗಿರುವುದರಿಂದ ದೇಶದ ಪ್ರತಿಯೊಬ್ಬ ನಾಗರಿಕನು ಸಂವಿಧಾನಕ್ಕೆ ಬದ್ದವಾಗಿರುವುದು ನಮ್ಮೇಲ್ಲರ ಕರ್ತವ್ಯವಾಗಿದದೆ ಎಂದರು    
ಜಿಲ್ಲೆಯಲ್ಲಿ ಕಳೆದ ಆಗಸ್ಟ್ ಮತ್ತು ಅಕ್ಟೋಬರ ತಿಂಗಳಲ್ಲಿ ಸಂಭವಿಸಿದ ಪ್ರವಾಹವನ್ನು ನಮ್ಮ ಜಿಲ್ಲಾಡಳಿತ ಉತ್ತಮವಾಗಿ ಎದುರಿಸಿ,  ರಕ್ಷಣಾ ಕಾರ್ಯಾಚರಣೆ ಮೂಲಕ 9,013 ಜನರನ್ನು ಪ್ರವಾಹದಿಂದ ರಕ್ಷಿಸಿದೆ.  ಪ್ರವಾಹದಲ್ಲಿ ಮೃತಪಟ್ಟ 4 ಜನರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 20 ಲಕ್ಷ ರೂಪಾಯಿ ಪರಿಹಾರ ತಕ್ಷಣ ವಿತರಿಸಿದರೆ, 322 ಜಾನುವಾರು ಹಾನಿಗೆ 62.1 ಲಕ್ಷ ಪರಿಹಾರ ವಿತರಿಸಲಾಗಿರುತ್ತದೆ. 
ಅದೇ ರೀತಿ ಹಾನಿಗೀಡಾದ ಮನೆಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಣ ಮಾಡಿ ಸದರಿ ಮನೆಗಳ ನವನಿರ್ಮಾಣ ಹಾಗೂ ದುರಸ್ಥಿಗಾಗಿ ಒಟ್ಟಾರೆಯಾಗಿ ಇದುವರೆವಿಗೂ 19.23 ಕೋಟಿ ರೂಪಾಯಿಗಳನ್ನು ಸಂಸ್ತ್ರರಿಗೆ ಮಂಜೂರು ಮಾಡಲಾಯಿತು ಅಲ್ಲದೇ  ಬೆಳೆ ಹಾನಿಗೆ ಇದುವರೆಗೂ 1743 ರೈತ ಫಲಾನುಭವಿಗಳಿಗೆ ರೂ.13.88 ಕೋಟಿ ರೂ.ಗಳನ್ನು ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಿದೆ.  ಜಿಲ್ಲೆಯ ಕರಾವಳಿಯ ಜನರ ಜೀವನಾಡಿಯಾಗಿರುವ ಮೀನುಗಾರಿಕೆಯು ಸಹ ಪ್ರವಾಹದ ಸಮಯದಲ್ಲಿ ಸ್ಥಬ್ಧವಾದಾಗ,  ಪರಿಹಾರದ ನಿಟ್ಟಿನಲ್ಲಿ 168 ದೋಣಿಗಳಿಗೆ ರೂ. 41.62 ಲಕ್ಷ ಹಾಗೂ 460 ಬಲೆಗಳಿಗೆ ರೂ. 57.17 ಲಕ್ಷ ಮಂಜೂರು ಮಾಡಲಾಗಿದೆ ಎಂದರು. 
ಆಕರ್ಷಕ ಪರೇಡ್: ಧ್ವಜಾರೋಹಣ ಬಳಿಕ ಸಚಿವರು ತೆರೆದ ಜೀಪ್‍ನಲ್ಲಿ ಎಲ್ಲಾ ತುಕಡಿಗಳ ಗೌರವ ವಂದನೆ ಸ್ವೀಕರಿಸಿದರು. 16 ವಿವಿಧ ತುಕಡಿಗಳ ಪಥಸಂಚಲನ ಆಕರ್ಷಣೀಯವಾಗಿತ್ತು.
ಪದ್ಮಶ್ರೀ ವಿಜೇತೆ ವೃಕ್ಷ ಮಾತೆಗೆ ಸನ್ಮಾನ: ದೇಶದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಿಸಿ ಗೌಡ ಅವರಿಗೆ  ಜಿಲ್ಲಾಡಳಿತದ ಪರವಾಗಿ ಸಚಿವೆ ಸನ್ಮಾನಿಸಿ ಅಭಿನಂದಿಸಿದರು.
ಪಥಸಂಚಲನ ವಿಜೇತರಿಗೆ ಬಹುಮಾನ: ಪಥಸಂಚಲನದಲ್ಲಿ ಸೆಂಟ್ ಜೊಸೆಫ್ ಎನ್.ಸಿ.ಸಿ ನೇವಲ್ ಪ್ರಥಮ, ಯುವಜನ ಮತ್ತು ಕ್ರೀಡಾ ಇಲಾಖೆ ದ್ವಿತೀಯ, ಸರಕಾರಿ ಪಾಲಿಟೆಕಿಕ್ ಕಾಲೇಜು ತೃತಿಯ ಸ್ಥಾನದಲ್ಲಿ ಬಹುಮಾನ ಪಡೆದವು.   
ಮೆಚ್ಚುಗೆ ಗಳಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು: ಶಾಲಾ ಮಕ್ಕಳ ದೇಶಿಯ ಜನಪದ ನೃತ್ಯ ರೂಪಕಗಳು, ವಂದೆ ಮಾತರಂ ದೇಶ ಭಕ್ತಿ ಗೀತೆಯ ನೃತ್ಯರೂಪಕಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆಯುವ ಮೂಲಕ ಮೆಚ್ಚುಗೆ ಗಳಿಸಿದವು. 
ಸರ್ವೋತ್ತಮ ಸೇವಾ ಪ್ರಶಸ್ತಿ: ಜಿಲ್ಲೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಹತ್ತು ಜನ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಸಚಿವರು ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದರು. ಅಂಕೋಲಾ ತಾಲೂಕಿನ ಅಚವೆ ಚನಗಾರ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ. ಲಲಿತಾ ಯು.ಹೆಚ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ಪುರುಷೋತ್ತಮ,  ಶಿರಸಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯ ಸತೀಶ ಹೆಗಡೆ, ಕುಮಟಾ ಲೋಕೋಪಯೋಗಿ ಇಲಾಖೆಯ ಶಶಿಕಾಂತ ಜನಾರ್ಧನ ಕೋಳೇಕರ, ಕಾರವಾರ ಭೂಮಾಪನ ಇಲಾಖೆಯ ಉಪನಿರ್ದೇಶಕ ರಾಜು ಪೂಜಾರಿ, ಜೋಯಿಡಾ ತಹಶೀಲ್ದಾರ ಕಚೇರಿಯ ಪ್ರಕಾಶ ಡಿ ಗೌಡ, ಕಾರವಾರ ಅರಣ್ಯ ಇಲಾಖೆಯ ರಾಘವೇಂದ್ರ ಎಮ್ ನಾಯ್ಕ, ಧಾರ್ಮಿಕ ದತ್ತಿ ಇಲಾಖೆಯ ರಾಧಾ ಬಿ. ಶಿರಸಿಕರ, ಭಟ್ಕಳ ಸಹಾಯಕ ಆಯುಕ್ತರ ಕಚೇರಿಯ ರಾಜು ಕೃಷ್ಣಾ ನಾಯ್ಕ ಹಾಗೂ ಕಾರವಾರ ಕಂದಾಯ ಇಲಾಖೆಯ ಪ್ರಭಾಕರ ನಾಯ್ಕ  ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕಿ ರೂಪಾಲಿ ನಾಯ್ಕ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮಿಳಾ ನಾಯ್ಕ,  ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ.  ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜು,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಶನ್ ಹಾಗೂ ಕಾರವಾರ ಉಪವಿಭಾಗಾಧಿಕಾರಿ ಎಂ ಪ್ರೀಯಾಂಗಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

 

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...