ಖ್ಯಾತ ವಿದ್ವಾಂಸ ಮೌಲಾನಾ ಮುಹಮ್ಮದ್ ಫಾರೂಕ್ ಖಾನ್ ನಿಧನ

Source: SOnews | By Staff Correspondent | Published on 28th June 2023, 10:01 PM | National News |

ಲಕ್ನೋ : ಪ್ರಸಿದ್ಧ ಧಾರ್ಮಿಕ ವಿದ್ವಾಂಸ, ಹಿರಿಯ ಲೇಖಕ ಹಾಗು ಜಮಾಅತೆ ಇಸ್ಲಾಮಿ ಹಿಂದ್ ನ ಹಿರಿಯ ಸದಸ್ಯ ಮೌಲಾನಾ ಮುಹಮ್ಮದ್ ಫಾರೂಕ್ ಖಾನ್ ಬುಧವಾರ ನಿಧನರಾಗಿದ್ದಾರೆ.

ಮೌಲಾನಾ ಅವರು ಇಂದು ಬೆಳಿಗ್ಗೆ ಬಕ್ರೀದ್ ಆಚರಿಸಲೆಂದು ಲಕ್ನೋದಲ್ಲಿರುವ ತಮ್ಮ ಮಗನ ಬಳಿಗೆ ಹೋಗಿದ್ದರು.  ಅವರು ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಪವಿತ್ರ ಕುರಾನ್‌ ಅನುವಾದಕ ಮತ್ತು ವ್ಯಾಖ್ಯಾನಕಾರರಾಗಿದ್ದರು. ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಏಳು ಸಂಪುಟಗಳಿರುವ ಕಲಾಂ ನಬುವತ್ ಎಂಬ ಮೇರು ಕೃತಿಯನ್ನು ರಚಿಸಿದ್ದಾರೆ.  

ಮೌಲಾನಾ ಮುಹಮ್ಮದ್ ಫಾರೂಕ್ ಖಾನ್, ಪ್ರಖ್ಯಾತ ಇಸ್ಲಾಮಿಕ್ ವಿದ್ವಾಂಸ, ಕವಿ ಮತ್ತು ಬರಹಗಾರ. 1932 ರಲ್ಲಿ ​ಉತ್ತರ ಪ್ರದೇಶದ ಸುಲ್ತಾನ್‌ಪುರದ ಕರ್ಪಿ ಗ್ರಾಮದಲ್ಲಿ ಜನಿಸಿದರು. ಅವರು ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಅಜಂಗಢದಲ್ಲಿ ತಮ್ಮ ಬೋಧನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಬರವಣಿಗೆ ಶುರು ಮಾಡಿದರು. ಪವಿತ್ರ ಕುರಾನ್ ನ ಹಿಂದಿ ಭಾಷೆಯ ಅನುವಾದ ಅವರ ಮೊದಲ ಕೃತಿ . ಅವರ ನಾಲ್ಕು ಸಂಪುಟಗಳ ​ಕಲಾಮೆ ನಬುವತ್ ಎಂಬ ಹದೀಸ್ (ಪ್ರವಾದಿ ಮುಹಮ್ಮದ್ ಅವರ ಆಚರಣೆಗಳು) ವ್ಯಾಖ್ಯಾನ ಸಂಕಲನವು ವ್ಯಾಪಕ ಮೆಚ್ಚುಗೆ ಪಡೆದಿದೆ.  ಇದಲ್ಲದೇ ದಾವಾ, ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಮತ್ತು ಧರ್ಮಗಳ ತುಲನಾತ್ಮಕ ಅಧ್ಯಯನದಂತಹ ಹಲವಾರು ವಿಷಯಗಳ ಕುರಿತಾದ ಹಲವಾರು ಮಹತ್ವದ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಇಸ್ಲಾಮೀ ಸಾಹಿತ್ಯದ ಹಲವು ಪ್ರಮುಖ ಗ್ರಂಥಗಳನ್ನು ರಚಿಸಿದ ಹೆಗ್ಗಳಿಕೆ ಅವರದ್ದು.

ಅರೇಬಿಕ್ ಮತ್ತು ಉರ್ದುವಿನಿಂದ ಅನೇಕ ಪುಸ್ತಕಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಅವರ ಕವನ ಸಂಕಲನಗಳೂ ಉರ್ದು ಮತ್ತು ಹಿಂದಿಯಲ್ಲಿ ಪ್ರಕಟವಾಗಿವೆ.​ ಅವರು ಈ ಹಿಂದೆ ಜಮಾಅತೆ ಇಸ್ಲಾಮಿ ಹಿಂದ್ ನ ಕೇಂದ್ರ ಪ್ರತಿನಿಧಿಗಳ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...