ರಕ್ಷಾ ಬಂಧನ ರಾಷ್ಟ್ರಪತಿ, ಮೋದಿ ಶುಭಾಶಯ

Source: ANI | Published on 4th August 2020, 12:22 AM | National News | Don't Miss |


ನವದೆಹಲಿ:ಕೋವಿಡ್ ೧೯- ರ ಸಂಕಷ್ಟ ದ ಸಮಯದಲ್ಲೂ ದೇಶದಾಂತ್ಯ ಇಂದು ಆಚರಿಸಲ್ಪಡುತ್ತಿರುವ ರಕ್ಷಾ ಬಂಧನ್ ಸಂಬಂದ ದೇಶದ ಜನತೆಗೆ ರಾಷ್ಟ್ರ ಪತಿ ರಾಮ್ ನಾಥ್ ಕೋವಿದ್ ಪ್ರದಾನಿ ನರೇಂದ್ರ ಮೋದಿ, ಸೇರಿದಂತೆ ಹಲವಾರು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.
ರಾಖಿ ಎಂಬುದು ಪ್ರೀತಿ ಮತ್ತು ನಂಬಿಕೆಯ ಪವಿತ್ರ ದಾರವಾಗಿದ್ದು, ಸಹೋದರಿಯರನ್ನು ಸಹೋದರರೊಂದಿಗೆ ವಿಶೇಷ ಬಂಧದಲ್ಲಿ ಬಂದಿಸುತ್ತದೆ ಈ ದಿನ, ಮಹಿಳೆಯರ ಗೌರವ ಮತ್ತು ಘನತೆಯನ್ನು ಭದ್ರಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ ”ಎಂದು ರಾಷ್ಟ್ರ ಪತಿ ರಾಮ್ ನಾಥ್ ಕೋವಿದ್ ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಾ ಬಂದನ್ ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವ ಹಬ್ಬವಾಗಿದ್ದು ರಕ್ಷಾ ಬಂಧನಕ್ಕೆ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 
ಉಪ ರಾಷ್ಟ್ರ ಪತಿ ವೆಂಕಯ್ಯ ನಾಯ್ಡು ಅವರು ಮಹಿಳೆಯರ ಸಬಲೀಕರಣಕ್ಕೆ ಕರೆ ನೀಡಿದ್ದು ಇದರಿಂದ ಅವರು “ಅವರ ನಿಜವಾದ ಸಾಮರ್ಥ್ಯವನ್ನು ತಲುಪಬಹುಬಹುದು. ಸಹೋದರ-ಸಹೋದರಿಯರನ್ನು ಒಟ್ಟಿಗೆ ಬಂಧಿಸುವ ಪ್ರೀತಿ ಮತ್ತು ಪ್ರೀತಿಯ ಬಲವಾದ ಸಂಬಂಧಗಳನ್ನು ಪುನರುಚ್ಚರಿಸುತ್ತದೆ ”ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.
ಅವರು ಮುಂದುವರೆದು ಈ ಶುಭ ಸಂದರ್ಭದಲ್ಲಿ, ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಸಾಂಪ್ರದಾಯಿಕವಾಗಿ ನೀಡಿರುವ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯಲು ಮತ್ತು ಮಹಿಳೆಯರಿಗೆ ಅವರ ನಿಜವಾದ ಸಾಮರ್ಥ್ಯವನ್ನು ತಲುಪಲು ಅಧಿಕಾರ ನೀಡುವಂತೆ ನಾವು ಪ್ರಯತ್ನ ಪಡೋಣ. ಈ ಹಬ್ಬವು ದೇಶದಲ್ಲಿ ಹೆಚ್ಚಿನ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ ”ಎಂದು ಅವರು ಹೇಳಿದ್ದಾರೆ.
ಇನ್ನೂ ಹೆಚ್ಚಿನ ನಾಯಕರು ಪ್ರೀತಿ ಮತ್ತು ಗೌರವಕ್ಕಾಗಿ ರಕ್ಷಾ ಬಂಧನ್ ಆಚರಿಸುತ್ತಿದ್ದು ದೇಶದ ಜನತೆಗೆ ಶುಭಾಶಯಗಳನ್ನು ಟ್ವೀಟ್ ಮಾಡಿದ್ದಾರೆ

Read These Next

ತಬ್ಲಿಗಿ ವೈರಸ್, ಪಾಕಿಸ್ತಾನಿ ಪಿಶಾಚಿಗಳು: ಕನ್ನಡ ಮಾಧ್ಯಮಗಳ 'ದ್ವೇಷ ಪ್ರೇಮ'ದ ಹಲವು ಮುಖಗಳು

ವಕೀಲರು, ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನೊಳಗೊಂಡ ಸಂಘಟನೆ ‘ದಿ ಕ್ಯಾಂಪೇನ್ ಅಗೇನ್‌ಸ್ಟ್ ಹೇಟ್ ಸ್ಪೀಚ್’ (ಸಿಎಎಚ್‌ಎಸ್) ...

ಬಿಜೆಪಿ ಮಿತ್ರಪಕ್ಷಗಳಿಂದ ವಿವಾದಿತ ಕೃಷಿ ಮಸೂದೆ ವಿರೋಧಿಸಿ ’ಚಕ್ಕಾಜಾಮ್’ ಪ್ರತಿಭಟನೆಗೆ ಕರೆ

ಚಂಡೀಗಢ: ಸಂಸತ್ತಿನಲ್ಲಿ ಅಂಗೀಕಾರ ಪಡೆದ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್ ರಾಜ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷ ...