ಮುಂದಿನ ವರ್ಷ 5 ಶೇ. ಬೆಳವಣಿಗೆಯಾದರೂ ನಮ್ಮ ಅದೃಷ್ಟ; ರಘುರಾಮ್ ರಾಜನ್

Source: Vb | By I.G. Bhatkali | Published on 16th December 2022, 10:15 AM | National News |

ಹೊಸದಿಲ್ಲಿ: ಮುಂದಿನ ವರ್ಷ ದೇಶವು 5 ಶೇ. ಬೆಳವಣಿಗೆಯನ್ನು ಸಾಧಿಸಿದರೂ ನಮ್ಮ ಅದೃಷ್ಟ ಎಂದು ನನಗೆ ಅನಿಸುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಮುಂದಿನ ವರ್ಷವು ಪ್ರಸಕ್ತ ವರ್ಷಕ್ಕಿಂತಲೂ ಹೆಚ್ಚು ಕಠಿಣವಾಗಿರುತ್ತದೆ ಎಂದು ಮಾಜ ಗವರ್ನರ್ ಅಭಿಪ್ರಾಯಪಟ್ಟರು. “ಯುದ್ಧ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಕಾರಣಗಳಿಂದಾಗಿ ಮುಂದಿನ ವರ್ಷವು ತುಂಬಾ ಕಠಿಣವಾಗಿರುತ್ತದೆ. ಜಗತ್ತಿನಲ್ಲಿ ಅಭಿವೃದ್ಧಿಯು ಕುಂಠಿತವಾಗುತ್ತದೆ. ಸರಕಾರಗಳು ಬಡ್ಡಿದರವನ್ನು ಏರಿಸುತ್ತವೆ ಹಾಗೂ ಅದು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ'' ಎಂದು ಅವರು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೊ ಯಾತ್ರೆ'ಯಲ್ಲಿ ರಾಹುಲ್ ಗಾಂಧಿ ಜೊತೆಗೆ ನಡೆಯುತ್ತಿದ್ದ ವೇಳೆ ಮಾತನಾಡಿದ ಅವರು, ''ಭಾರತದ ಮೇಲೂ ದುಷ್ಪರಿಣಾಮಗಳು ಆಗುತ್ತವೆ. ಭಾರತದ ಬಡ್ಡಿ ದರಗಳು ಹೆಚ್ಚಿವೆ. ಆದರೆ, ಭಾರತೀಯ ರಫ್ತುಗಳಲ್ಲಿ ಸಲ್ಪ ಹಿಂಜರಿಕೆಯಾಗಿದೆ' ಎಂದು ಅವರು ಹೇಳಿದರು. 

“ಭಾರತದ ಹಣದುಬ್ಬರವೆಂದರೆ, ವಸ್ತುಗಳ ಹಣದುಬ್ಬರವಾಗಿದೆ, ತರಕಾರಿಗಳ ಹಣದುಬ್ಬರವಾಗಿದೆ. ಅದು ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ'' ಎಂದು ಅವರು ಹೇಳಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...