ತೊಂದರೆಗೊಳಗಾದ ಕಾರ್ಮಿಕರಿಗೆ ಶೀಘ್ರ ಪರಿಹಾರ- ಸಚಿವ ಶಿವರಾಮ ಹೆಬ್ಬಾರ

Source: uni | Published on 8th July 2020, 12:48 AM | State News | Don't Miss |

ಹಾಸನ: ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಕ್ಷೌರಿಕರು, ಅಗಸರು, ಕಟ್ಟಡ ಕಾರ್ಮಿಕರು, ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣ ಕೆಲಸ ಮಾಡಿದ ಕಾರ್ಮಿಕರಿಗೆ ಹಾಗೂ ಜೋಳ ಬೆಳೆಗಾರರಿಗೆ ಮುಖ್ಯ ಮಂತ್ರಿ ಬಿಡುಗಡೆ ಮಾಡಿರುವ ಅನುದಾನ  ಪ್ಯಾಕೇಜ್‍ಗಳನ್ನು ಫಲಾನುಭವಿಗಳಿಗೆ ಶೀಘ್ರವಾಗಿ ತಲುಪಿಸುವಂತೆ ಕಾರ್ಮಿಕ ಹಾಗೂ ಸಕ್ಕರೆ  ಸಚಿವ ಅರಬೈಲ್ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ. 
ಜಿಲ್ಲಾಧಿಕಾರಿಯವರ  ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ತಡೆಗಟ್ಟಲು ಯಾವುದೇ ಕೊರತೆಯಾಗದಂತೆ ಎಲ್ಲಾ ಇ.ಎಸ್.ಐ. ಆಸ್ಪತ್ರೆ ಹಾಗೂ ವಿವಿಧ ಆಸ್ಪತ್ರೆಗಳಿಗೆ ಔಷಧಗಳನ್ನು  ಪೂರೈಸಲಾಗಿದೆ ಎಂದರು. 
ಮುಖ್ಯಮಂತ್ರಿಯವರು ಕಟ್ಟಡ  ಕಾರ್ಮಿಕರಿಗೆ ತಲಾ 5,000ರೂ. ನಂತೆ 14 ಲಕ್ಷ ಕಟ್ಟಡ  ಕಾರ್ಮಿಕರಿಗೆ 800 ಕೋಟಿ ರೂ.ಗಳ ಅನುದಾನ ವಿತರಿಸಲಾಗಿದೆ.2.40 ಲಕ್ಷ ಕ್ಷೌರಿಕರು ಹಾಗೂ 70 ಸಾವಿರ ಅಗಸರು ಒಟ್ಟಾರೆ 3 ಲಕ್ಷ ಫಲಾನುಭವಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದು,ಹಲವರ ಆಧಾರ್  ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಐ.ಎಫ್.ಎಸ್.ಸಿ. ಕೋಡ್ ದೊರೆಯದಿರುವ ಕಾರಣ ಡಿ.ಬಿ.ಟಿ. ಮೂಲಕ ವರ್ಗಾವಣೆ ಮಾಡಲಾಗಿಲ್ಲ ಎಂದರು.
ಈ ಎರಡು ಸಮುದಾಯಗಳಿಗೆ ಹಣ ದೊರೆಯುವುದು ಸ್ವಲ್ಪ ವಿಳಂಬವಾಗಿದ್ದು, ಒಂದು ವಾರದೊಳಗೆ ಈ ಎಲ್ಲಾ ಫಲಾನುಭವಿಗಳಿಗೆ ಹಣ ದೊರೆಯುವಂತೆ  ಮಾಡಲಾಗುತ್ತದೆ  ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವರು ತಿಳಿಸಿದರು

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...