ಕಂದಾಯ ಇಲಾಖೆಯಲ್ಲಿ ತ್ವರಿತಗತಿಯಲ್ಲಿ ಪ್ರಕರಣಗಳ ವಿಲೇವಾರಿ : ಜಿಲ್ಲಾಧಿಕಾರಿಗಳ ಗುರುದತ್ತ ಹೆಗಡೆ

Source: SO News | By Laxmi Tanaya | Published on 29th November 2023, 10:21 PM | State News | Don't Miss |

ಧಾರವಾಡ : ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಕಂದಾಯ ಇಲಾಖೆಯಲ್ಲಿ ಕಳೆದ 6 ತಿಂಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ವಿವಿಧ ಪ್ರಕಟಣಗಳ ವಿಲೇವಾರಿಯನ್ನು ಮಾಡಲಾಗುತ್ತಿದೆ. ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

 ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು. ತ್ವರಿತಗತಿಯಲ್ಲಿ ಕಂದಾಯ ನ್ಯಾಯಾಲಯದ ಪ್ರಕರಣಗಳ ಇತ್ಯರ್ಥ, ಭೂಮಿ ಮ್ಯುಟೇಶನ್, ಭೂಮಿ ತಂತ್ರಾಂಶ, ಪೈಕಿ ಪಹಣಿ ಪೋಡಿ,ಇ-ಆಫಿಸ್ ಭೂ ಸರ್ವೇನೊಂದಣಿ ಮುಂತಾದ ವಿಭಾಗಗಳಲ್ಲಿ ಉತ್ತಮ ಬದಲಾವಣೆಗಳಾಗಿದ್ದು ತ್ವರಿತಗತಿಯಲ್ಲಿ ಪ್ರಕರಣಗಳ ವಿಲೇವಾರಿಯಾಗುತ್ತಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ಜಿಲ್ಲೆಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ತಹಶೀಲದಾರರ ನ್ಯಾಯಾಲಯಗಳಲ್ಲಿ ಒಂದು ವರ್ಷ ಮೇಲ್ಪಟ್ಟು ಬಾಕಿ ಇರುವ 22 ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ವಿಲೇವಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸ್ವೀಕೃತವಾದ ಒಟ್ಟು 848 ಪ್ರಕರಣಗಳ ಪೈಕಿ 742 ಪ್ರಕರಣಗಳನ್ನು ಕಾಲಕಾಲಕ್ಕೆ ವಿಚಾರಣೆ ಕೈಕೊಂಡು ಇತ್ಯರ್ಥಪಡಿಸಲಾಗಿದೆ.  ಪ್ರಸ್ತುತ ಜಿಲ್ಲೆಯಲ್ಲಿ 107 ಪ್ರಕರಣಗಳು ಬಾಕಿ ಇದ್ದು, ವಿಲೇವಾರಿಗೊಳಿಸಲು ಕ್ರಮ ಕೈಕೊಳ್ಳಲಾಗುತ್ತಿದೆ.  ಎಲ್ಲ ಕಂದಾಯ ನ್ಯಾಯಾಲಯ ಪ್ರಕಣಗಳ ವಿಚಾರಣೆಯನ್ನು ವಾರದ ಪ್ರತಿ ಮಂಗಳವಾರ ಹಾಗೂ ಗುರುವಾರ 2 ದಿನ ಕೈಕೊಂಡು 3 ತಿಂಗಳ ಅವಧಿಯೊಳಗಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

 ಭೂಮಿ ತಂತ್ರಾಂಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಮೀನುಗಳ ಪರಭಾರೆ ಕಾಯ್ದೆ(ಪಿ.ಟಿ.ಸಿ.ಎಲ್), ನಾನ್ ಪಿ.ಟಿ.ಸಿ.ಎಲ್ ಹಾಗೂ ಸರಕಾರಿ ಜಮೀನುಗಳ ವಿವರಗಳನ್ನು ಗೇಣಿ ಮತ್ತು ಪಹಣಿ ಪತ್ರಿಕೆಗಳಲ್ಲಿ ದಾಖಲಿಸಲು ಈಗಾಗಲೇ ಕ್ರಮ ಕೈಕೊಳ್ಳಲಾಗಿದೆ.  ಈ ವಿಷಯವಾಗಿ ಭೂಮಿ ತಂತ್ರಾಂಶದಲ್ಲಿ ಪಿ.ಟಿ.ಸಿ.ಎಲ್. ಜಮೀನುಗಳನ್ನು ಪ್ಲ್ಯಾಗ್ ಮಾಡುವದರಿಂದ ಪಿ.ಟಿ.ಸಿ.ಎಲ್. ಕಾಯ್ದೆ ಉಲ್ಲಂಘನೆಯಾಗುವ ಸಂಭವವನ್ನು ತಪ್ಪಿಸಬಹುದಾಗಿದೆ.  ಇದರಿಂದಾಗಿ ಸರಕಾರಿ ಜಮೀನುಗಳಲ್ಲಿ ಆಗುವ ಒತ್ತುವರಿಯನ್ನು ತಡೆಗಟ್ಟಬಹುದಾಗಿದೆ ಎಂದರು.

ಭೂಮಿ ತಂತ್ರಾಂಶದಲ್ಲಿ ನೋಟೀಸ್ ರಹಿತ ಹಕ್ಕು ದಾಖಲಾತಿಗಳ ವಿಲೇವಾರಿಯಲ್ಲಿ ಶೇ.99.71% ರಷ್ಟು ಪ್ರಗತಿ ಸಾಧಿಸಲಾಗಿದೆ.  ನೋಟೀಸು ಸಹಿತ ಹಕ್ಕು ದಾಖಲಾತಿಗಳ ವಿಲೇವಾರಿಯಲ್ಲಿ ಶೇ.96.78% ರಷ್ಟು ಪ್ರಗತಿ ಸಾಧಿಸಲಾಗಿದೆ.   ತಕರಾರು ಸ್ವೀಕೃತವಾದ ಹಕ್ಕುದಾಖಲಾತಿಗಳ ವಿಲೇವಾರಿಯಲ್ಲಿ ಶೇ. 85.24% ರಷ್ಟು ಪ್ರಗತಿ ಸಾಧಿಸಲಾಗಿದೆಯೆಂದರು.

 ಆಡಳಿತದಲ್ಲಿ ಇ_ಆಫೀಸ್ ಆನ್ಲೈನ್ ತಂತ್ರಾಂಶದಿಂದಾಗಿ ಪ್ರತಿನಿತ್ಯ ಕಚೇರಿಗೆ ಸ್ವೀಕೃತವಾಗುವ ಎಲ್ಲ ಪತ್ರಗಳನ್ನು ಇ_ಆಫೀಸ್ ಮೂಲಕವೇ ಸ್ವೀಕೃತಿ ಹಾಗೂ ವಿಲೇವಾರಿ ಮಾಡಲಾಗುತ್ತಿದೆ.  ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಹಾಗೂ ಎಲ್ಲ ತಹಶೀಲದಾರ ಕಚೇರಿಗಳಲ್ಲಿ ಇ_ಆಫೀಸ್ ತಂತ್ರಾಂಶವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗಿದೆ.  ಈಗಾಗಲೇ ಈ ತಂತ್ರಾಂಶ ಬಂದಾಗಿನಿಂದ ಜಿಲ್ಲೆಯಲ್ಲಿ ಈ ಆಫೀಸ್ ತಂತ್ರಾಂಶದ ಮೂಲಕ ಅರ್ಜಿದಾರರಿಂದ ಅಥವಾ ಕಚೇರಿಗಳಿಂದ ಒಟ್ಟು 29,713 ಅರ್ಜಿ ವಿಲೇವಾರಿ ಮಾಡಲಾಗಿದೆ.   ಇದರಿಂದಾಗಿ ಕಚೇರಿಯಲ್ಲಿನ ಕಡತಗಳನ್ನು ಪಾರದರ್ಶಕವಾಗಿ ಶೀಘ್ರ ವಿಲೇವಾರಿ ಮಾಡುವಲ್ಲಿ ಸಹಕಾರಿಯಾಗಿದೆ.   ಇದರಿಂದಾಗಿ ಸಾರ್ವಜನಿಕರಿಗೂ ಸಹಿತ ತಮ್ಮ ಅರ್ಜಿಯ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು. 

 ಕಳೆದ 6 ತಿಂಗಳಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ 27 ಸಾವಿರ ಕಡತಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಲಾಗಿರುತ್ತದೆ . ಅದರಂತೆ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಕಳೆದ 3 ತಿಂಗಳಿಂದ ಕಡತಗಳನ್ನು ವಿಲೇವಾರಿ ಮಾಡಿರುತ್ತದೆ. ಅದರಂತೆ ಜಿಲ್ಲೆಯ ಎಲ್ಲ 8 ತಹಶೀಲದಾರ ಕಾರ್ಯಾಲಯಗಳಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ ಜಿಲ್ಲೆಯಲ್ಲಿ ಒಟ್ಟು 29,713 ಕಡತಗಳನ್ನು ವಿಲೇವಾರಿ ಮಾಡಿರುತ್ತದೆ ಎಂದರು.

 ಜಿಲ್ಲೆಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ  ಅಟಲ್  ಜನಸ್ನೇಹಿ ಕೇಂದ್ರದ ಮುಖಾಂತರ 42 ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದ್ದು, ಈ ಪೈಕಿ 22 ಸೇವೆಗಳಿಗೆ ಎಲ್ಲಾ ಹಂತಗಳಲ್ಲಿ ಅರ್ಜಿಯ ಸ್ಥಿತಿ-ಗತಿಯ ಕುರಿತು ಸಾರ್ವಜನಿಕರಿಗೆ ಎಸ್. ಎಂ.ಎಸ್. ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ.  ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಯ ವಿಲೇವಾರಿ ಮಾಹಿತಿ / ಪ್ರಮಾಣ ಪತ್ರಗಳನ್ನು ಪಿ.ಡಿ.ಎಫ್. ಮುಖಾಂತರ ಡೌನಲೋಡ ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆಂದು ತಿಳಿಸಿದರು.

 ಕಂದಾಯ ಸಚಿವರ ನಿರ್ದೇಶನದಂತೆ, ಜಿಲ್ಲೆಯಲ್ಲಿ ಪೈಕಿ ಪಹಣಿ ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ 15 ದಿನಗಳ ವಿಶೇಷ ಅಭಿಯಾನದ ಮೂಲಕ ತ್ವರಿತ ವಿಲೇವಾರಿಗೆ ಕ್ರಮ ಕೈಕೊಳ್ಳಲಾಗಿದೆ.  ಗೇಣಿ ಮತ್ತು ಪಹಣಿ ಪತ್ರಿಕೆಗಳ ಅಂಕಣ 3 ಹಾಗೂ 9 ರಲ್ಲಿನ ವ್ಯತ್ಯಾಸವನ್ನು ಸರಿಪಡಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಕೊಳ್ಳಲಾಗಿದೆ. 

 ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಯಾವುದೇ ಪೆÇೀಡಿ ಶುಲ್ಕ ಪಡೆಯದೇ ಕಳೆದ 6 ತಿಂಗಳ ಅವಧಿಯಲ್ಲಿ ಒಟ್ಟು 940 ಸರ್ವೇ ನಂಬರಗಳಿಗೆ  ಸಂಬಂಧಿಸಿದಂತೆ 2469 ಹೊಸದಾಗಿ ಪಹಣಿಗಳನ್ನು ಸೃಜಿಸಲಾಗಿರುತ್ತದೆ.  ಈ ಮೊದಲು ಒಂದು ವರ್ಷದಿಂದ ಆಗದೇ ಇರುವ ಕೆಲಸ ಈಗ ಬಹಳ ಕಡಿಮೆ ಅವಧಿಯಲ್ಲಿ ಆಗುತ್ತಿರುವದರಿಂದಾಗಿ ಸಾರ್ವಜನಿಕರೂ ಕೂಡಾ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.   ಜಿಲ್ಲೆಯಲ್ಲಿ ಹದ್ದುಬಸ್ತ ಅಳತೆ ಪ್ರಕರಣಗಳನ್ನು  ದೀರ್ಘಾವಧಿಯ ಬದಲಾಗಿ 2 ತಿಂಗಳ ಅವಧಿಯಲ್ಲಿ ಲಭ್ಯ ಇರುವ ಭೂಮಾಪಕರಿಂದ ಇತ್ಯರ್ಥಪಡಿಸಲು ಕ್ರಮಕೈಕೊಳ್ಳಲಾಗಿದೆ. ಹಾಗೆಯೇ ಮೋಜಣಿ ತಂತ್ರಾಂಶದಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ಒಟ್ಟು 13262 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆಯೆಂದರು.  

 ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಈ ಮೊದಲು ದಸ್ತಾವೇಜುಗಳನ್ನು ನೋಂದಣಿ ಮಾಡುವಲ್ಲಿ ವಿಳಂಬ ಆಗುತ್ತಿರುವದನ್ನು ತಡೆಗಟ್ಟಲು ಪ್ರಸ್ತುತ ಕಾವೇರಿ 2.0 ತಂತ್ರಾಂಶದಲ್ಲಿ ಕೇವಲ 10 ನಿಮಿಷದಲ್ಲಿ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯನ್ನು ಮಾಡುವದರಿಂದ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.    ಕಳೆದ 6 ತಿಂಗಳ ಅವಧಿಯಲ್ಲಿ ಸರಾಸರಿ 30 ಸಾವಿರ ದಸ್ತಾವೇಜುಗಳನ್ನು ನೋಂದಣಿ ಮಾಡಲಾಗಿದ್ದು, 132 ಕೋಟಿ ರೂ. ರಾಜಸ್ವ ಸಂಗ್ರಹವಾಗಿರುತ್ತದೆಯೆಂದು ತಿಳಿಸಿದರು. 

 ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ  ಈವರೆಗೆ ಒಟ್ಟು 648 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ. 

 ಜಿಲ್ಲೆಯಲ್ಲಿ ಗುರ್ತಿಸಿದ ಒಟ್ಟು 18 ಕಂದಾಯ ಗ್ರಾಮಗಳಲ್ಲಿ ಈಗಾಗಲೇ 10 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.   ಈಗಾಗಲೇ ಅಧಿಸೂಚನೆಯಾಗಿರುವ  ಗ್ರಾಮಗಳ ಪೈಕಿ ಒಟ್ಟು 1001 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿರುತ್ತದೆ.  ಇನ್ನುಳಿದ 8 ಗ್ರಾಮಗಳ ಅಂತಿಮ ಅಧಿಸೂಚನೆ ಪ್ರಕ್ರಿಯೆಗಳನ್ನೂ ಸಹ ಶೀಘ್ರವಾಗಿ ಕೈಕೊಂಡು, ಉಳಿದ ಗ್ರಾಮಗಳ ಜನರಿಗೂ  ಸಹಿತವಾಗಿ ಹಕ್ಕುಪತ್ರ ವಿತರಿಸುವ ಕ್ರಮ ಕೈಕೊಳ್ಳಲಾಗುವದೆಂದು ಅವರು ತಿಳಿಸಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...