ಅಂತಾರಾಷ್ಟಿಯ ಯೋಗ ದಿನದ ಪೂರ್ವಭಾವಿ ಸಭೆ

Source: so news | By Manju Naik | Published on 18th June 2019, 10:02 PM | State News | Don't Miss |

ಧಾರವಾಡ : ಅಂತಾರಾಷ್ಟಿಯ ಯೋಗ ದಿನಾಚರಣೆ ಕುರಿತು ಧಾರವಾಡ ಶಹರ ವಲಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯೊಪಾಧ್ಯಾಯರ ಮತ್ತು ದೈಹಿಕ ಶಿಕ್ಷಕರ ಸಭೆ ಇತ್ತಿಚೆಗೆ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿತು. 
ಡಯಟ್‌ನ ಹಿರಿಯ ಉಪನ್ಯಾಸಕರಾದ ಡಾ.ಗುರುನಾಥ ಹೂಗಾರ ಮಾತನಾಡಿ ವಿಶ್ವಕ್ಕೆ ಯೋಗದ ಕೊಡುಗೆ ನೀಡಿದ ಭಾರತ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು. ಯೋಗವು ಒಂದು ಜೀವನ ಪದ್ಧತಿಯಾಗಿದ್ದು, ಮಾನಸಿಕ ಹಾಗೂ ದೈಹಿಕ ಸ್ವಾಸ್ತö್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನುಷ್ಯನ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಮಧ್ಯೆ ಸಾಮರಸ್ಯ ಉಂಟು ಮಾಡಿ ಸಂತಸದಾಯಕ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ನುಡಿದರು.
ಕ್ಷೆÃತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ, ಜೂನ್ 20 ಮತ್ತು 21 ರಂದು ನಡೆಯುವ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಆಯೋಜಿಸಲು ಮಾರ್ಗದರ್ಶನ ನೀಡಿದರು. ಕ್ಷೆÃತ್ರ ಸಮನ್ವಯಾಧಿಕಾರಿ ಅಶೋಕ ಡೊಂಬರಕೊಪ್ಪ, ಬಿಆರ್.ಪಿಗಳಾದ ಎಸ್.ಬಿ ಮುತವಾಡ ಹಾಗೂ ಡಿ.ವಿ.ಸಜ್ಜನ , ಸಿಆರ್‌ಪಿಗಳಾದ ವಿ.ಬಿ.ಹೊಸಕೇರಿ, ವಾಯ್.ಎಚ್.ಪಾಟೀಲ, ಎಸ್.ಎನ್.ಸಿದಿಯಮ್ಮನವರ ಮತ್ತು ಯು.ಎಲ್.ಮರಾಠೆ ಅವರಿಗೆ ತಂಡಗಳ ಹಂಚಿಕೆ ಮಾಡಿ ಮುಖೋಪಾಧ್ಯಾಯರಿಗೆ ಜವಾಬ್ದಾರಿ ನೀಡಲಾಯಿತು.

Read These Next

ಕಾರು ಪಲ್ಟಿ : ಪ್ರಯಾಣಿಕರು ಗಾಯ

ಮುಂಡಗೋಡ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿ 6 ಜನರು ಗಾಯಗೊಂಡ ಘಟನೆ ತಾಲೂಕಿನ ...

ವಿದ್ಯೆ ಮತ್ತು ಡಿಗ್ರಿಗಳಿಂದ ಶಾಂತಿ ನೆಮ್ಮದಿ ದೊರೆಯದು-ಬ್ರಹ್ಮಾನಂದಾ ಸರಸ್ವತಿ ಸ್ವಾಮಿಜಿ

ಭಟ್ಕಳ: ವಿದ್ಯೆಯು ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುವಂತಾದಾಗ ಮಾತ್ರ ಆ ವಿದ್ಯೆಗೆ ಬೆಲೆ ಬರುತ್ತದೆ. ಆದರೆ ಇಂದಿನ ವಿದ್ಯೆ, ...