ಹತ್ರಾಸ್ ನೈಜಾಂಶ ಅರಿಯಲು ಸುಪ್ರಿಮಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಪಿಎಫ್ಐ ಆಗ್ರಹ

Source: SO News | Published on 8th October 2020, 11:11 PM | Coastal News | Don't Miss |

ಶಿರಸಿ : ಪಿಎಪ್ಐ ವಿರುದ್ಧದ ದ್ವೇಷದ ಅಭಿಯಾನವನ್ನ ಕೂಡಲೇ ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ  ಶಿರಸಿಯಲ್ಲಿ ಪಿಎಪ್ಐ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.

ಶಿರಸಿಯ ಸಹಾಯಕ ಆಯುಕ್ತರಿಗೆ ಮನವಿ ನೀಡಿದ ಕಾರ್ಯಕರ್ತರು ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವನ್ನ ಉತ್ತರಪ್ರದೇಶ ಸರ್ಕಾರದ ಮಾಡುತ್ತಿದೆ. ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರು ಅಸುರಕ್ಷಿತರಾಗಿದ್ದಾರೆ. ತನ್ನ ಸ್ವಯಂ ಅಸಮರ್ಥತೆಯ ಕಾರಣದಿಂದ ಎದುರಿಸುತ್ತಿರುವ ಜಾಗತಿಕ ಮುಜುಗರದಿಂದ ಹೇಗಾದರೂ ಪಾರಾಗಬೇಕೆಂದು ಯುಪಿ ಸರ್ಕಾರದ ಹತಾಷೆಯನ್ನ ತೋರಿಸುತ್ತಿದೆ.

ಪಾಪ್ಯುಲರ್ ಪ್ರಂಟ್ ನೆಲದ ಕಾನೂನನ್ನು ಗೌರವಿಸಿಕೊಂಡು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ನಂಬಿಕೆ ಇರಿಸಿಕೊಂಡಿರುವ ಸಂಘಟನೆಯಾಗಿದೆ. ಸಂಘಟನೆಯ ನಡೆಸಿಕೊಂಡು ಬಂದಿರುವ  ಕಾನೂನಾತ್ಮಕ ಹೋರಾಟಗಳು ಇದನ್ನ ಸಾಬೀತುಪಡಿಸುತ್ತಿವೆ. ನಿರಾಧಾರ ಆರೋಪಗಳ ಮೂಲಕ ಯುಪಿ ಸರ್ಕಾರ ಮತ್ತು ಪೊಲೀಸರು ಪಾಪ್ಯುಲರ್ ಪ್ರಂಟನ್ನ ಬೇಟೆಯಾಡುವುದಕ್ಕೆ ತಕ್ಷಣ ತಡೆ ನೀಡಬೇಕು.

ಹತ್ರಾಸ್ ಅತ್ಯಾಚಾರ  ಸಂತ್ರಸ್ತೆಗೆ ನ್ಯಾಯ ದೊರಕಿಸಲು ಮತ್ತು ಘಟನೆಯ ನೈಜಾಂಶವನ್ನ ಜನರು ಅರಿಯುವಂತಾಗಲು ಸುಪ್ರಿಮಕೋರ್ಟ್ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...