ಶ್ರೀಮತಿ ಗೀತಾ ಭೂತೆ ಸ್ಮರಣಾರ್ಥ ದೇಶಭಕ್ತಿ ಸಮೂಹಗಾಯನ ಸ್ಪರ್ಧೆ

Source: S.O. News Service | Published on 21st September 2019, 9:35 PM | State News | Don't Miss |

ಬೆಳಗಾವಿ:ಸಾಗರ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ದಿವಂಗತ ಪ್ರಾಚಾರ್ಯ ಶ್ರೀಮತಿ ಗೀತಾ ಭೂತೆ ಸ್ಮರಣಾರ್ಥ ಅಂತರಮಹಾವಿದ್ಯಾಲಯ ದೇಶಭಕ್ತಿ ಸಮೂಹಗಾಯನ ಸ್ಪರ್ಧೆ ಅಪೂರ್ವ್ ಉತ್ಸಾಹದಿಂದ ಜರುಗಿತು. ಪ್ರಮುಖ ಅತಿಥಿಯಾಗಿ ಡಾ. ಎ. ಎಲ್. ಕುಲಕರ್ಣಿ ಹಾಗೂ ಶ್ರೀಮತಿ ಪದ್ಮಾ ಕುಲಕರ್ಣಿ ಉಪಸ್ಥಿತರಿದ್ದರು. ಇವರು ವ್ಯಕ್ತಿಮತ್ವ ವಿಕಾಸ ಹಾಗೂ ದೇಶಭಕ್ತಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪ್ರಾಚಾರ್ಯ ಆರ್. ವ್ಹಿ. ಹಲಬ ಸ್ವಾಗತಿಸಿದರು. ಸಂಗೀತ ಉಪನ್ಯಾಸಕರಾದ ವಿನಾಯಕ ಮೋರೆ ಪ್ರಾಸ್ತಾವಿಕ ಹಾಗೂ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮದ ಪ್ರಾರಂಭ ಪ್ರಾರ್ಥನೆ ಹಾಗೂ ಸ್ವಾಗತಗೀತೆಯೊಂದಿಗೆ ನಡೆಯಿತು.  ಪ್ರಾಚಾರ್ಯ ಆರ್. ವ್ಹಿ. ಹಲಬ ಇವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಪ್ರಮುಖ ಅತಿಥಿಯ ಹಸ್ತದಿಂದ ದೀಪಪ್ರಜ್ವಲನೆ ಮಾಡಲಾಯಿತು. ಡಾ. ಅಪರ್ಣಾ ಕುಲಕರ್ಣಿ, ಉಜ್ವಲಾ ಸತ್ಯನಾಈಕ ಹಾಗೂ ರುಪಾಲಿ ಗುರವ ಇವರು ಪರೀಕ್ಷಕರಾಗಿ ಕಾರ್ಯವನ್ನು ನಿರ್ವಹಿಸಿದರು. 
 ಸ್ಪರ್ಧೆಯಲ್ಲಿ ಜೈನ್ ಮಹಿಲಾ ಮಂಡಳ ಎಸ್. ಬಿ. ಪಾಟೀಲ ಬಿ.ಇಡಿ ಮಹಾವಿದ್ಯಾಲಯ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನ ಕೆ.ಎಲ್.ಇ. ಬಿ.ಇಡಿ ಮಹಾವಿದ್ಯಾಲಯ ಹಾಗೂ ತೃತೀಯ ಸ್ಥಾನ ಎಮ್.ಎನ್.ಆರ್.ಎಸ್. ಬಿ.ಇಡಿ ಮಹಾವಿದ್ಯಾಲಯ ಪಡೆದುಕೊಂಡಿತು. ಸಮಾಧಾನಕರ ಸ್ಥಾನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಮತ್ತು ಎ. ಎಮ್. ಶೇಖ ಬಿ. ಇಡಿ. ಮಹಾವಿದ್ಯಾಲಯ ಪಡೆದುಕೊಂಡಿತು. ಪದವಿ ವಿಭಾಗದಲ್ಲಿ ಜಿ. ಎಸ್. ಎಸ್. ಮಹಾವಿದ್ಯಾಲಯ ಪ್ರಥಮ ಸ್ಥಾನ, ಭಾಉರಾವ ಕಾಕತಕರ ಪದವಿ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಹಾಗೂ ಮಿರಜಿ ಪದವಿ ಮಹಾವಿದ್ಯಾಲಯಕ್ಕೆ ತೃತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಜೆತರಿಗೆ ಪ್ರಮುಖ ಅತಿಥಿ ಡಾ. ಅರವಿಂದ ಕುಲಕರ್ಣಿ ಹಾಗೂ ಶ್ರೀಮತಿ ಪದ್ಮಾ ಕುಲಕರ್ಣಿ ಇವರ ಹಸ್ತದಿಂದ ಗೌರವಿಸಲಾಯಿತು. .ಉಪನ್ಯಾಸಕರಾದ ಕಲ್ಪನಾ ಧಾಮಣೆಕರ ಇವರು ಸ್ಪರ್ಧೆಯ ನಿಯಮ ತಿಳಿಸಿದರು. ಉಪನ್ಯಾಸಕರಾದ ಟೀ. ಎಮ್. ನೌಕುಡಕರ ವಂದಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.  

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...