ಷಬ್‌-ಎ-ಬರಾತ್‌ ದಿನದಂದು ಸಾಮೂಹಿಕ ಪ್ರಾರ್ಥನೆ, ಖಬರ್‌ಸ್ತಾನ್‌ಗಳ ಭೇಟಿಗೆ ನಿರ್ಭಂದ

Source: sonews | By Staff Correspondent | Published on 6th April 2020, 6:25 PM | State News |

ಬೆಂಗಳೂರು :ಮುಂದಿನ ಏಪ್ರಿಲ್‌ 9 ರಂದು ಮುಸ್ಲಿಂ ಸಮುದಾಯದ ಪವಿತ್ರವಾದ ರಾತ್ರಿ ಎಂದು ಆಚರಿಸಲಾಗುವ ಷಬ್‌-ಎ-ಬರಾತ್‌ ಇದ್ದು, ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಖಬರ್‌ಸ್ತಾನ್‌ಗಳಿಗೆ ಭೇಟಿ ನೀಡುವುದನ್ನು ಅಮಾನತುಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಔಕಾಫ್‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾಹುದ್ದೀನ್‌ ಜೆ ಗದ್ಯಾಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಸ್ಲಾಮಿಕ್‌ ಕ್ಯಾಲೆಂಡರ್‌ ಪ್ರಕಾರ ಷಬ್‌-ಎ ಬರಾತ್‌ ಅನ್ನು ಒಂದು ಪವಿತ್ರವಾದ ರಾತ್ರಿ ಎಂದು ಆಚರಿಸಲಾಗುತ್ತದೆ. ಜಗತ್ತಿನ ಎಲ್ಲ ಭಾಗದ ಮುಸ್ಲಿಮರು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುವ ಈ ಸಂದರ್ಭದಲ್ಲಿ ಇಡೀ ರಾತ್ರಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಸೇರಿ ಪ್ರಾರ್ಥಿಸಲಾಗುತ್ತದೆ. ಈ ವರ್ಷ  ಷಬ್‌ ಎ ಬರಾತ್‌ ಏಪ್ರಿಲ್‌ 9, 2020ರಂದು ಬಂದಿದೆ. ಆದರೆ ಕೋವಿಡ್‌ 19 ವ್ಯಾಪಕವಾಗಿ ವ್ಯಾಪಿಸುತ್ತಿರುವುದರಿಂದ ಕರ್ನಾಟಕ ಸರ್ಕಾರವು ನೀಡಿರುವ ವಿವಿಧ ಆದೇಶಗಳಾನುಸಾರ ನಿರ್ದೇಶನಗಳನ್ನು ಸಾಮೂಹಿಕ ಪ್ರಾರ್ಥನೆಗಳನ್ನು ಅಮಾನತುಮಾಡಿದೆ.

ಕರ್ನಾಟಕದ ಇಮಾರತ್‌-ಎ-ಶರಿಯಾ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದು, ಎಲ್ಲಾ ಮುಸಲ್ಮಾನ ಬಾಂಧವರು ಷಬ್‌ ಎ ಬರತ್‌ ದಿನ ಇವುಗಳನ್ನು ಅನುಸರಿಸಲು ತಿಳಿಸಲಾಗಿದೆ. ಈಗಾಗಲೇ ಖಬರಸ್ತಾನ್‌ಗಳು/ದರ್ಗಾ ಸಮಿತಿಗಳು ಈ ಕುರಿತು ನೋಟಿಸ್‌ ನೀಡಿದ್ದಾರೆ. ಆದರೂ ಮಸೀದಿ, ಖಬರಸ್ತಾನ್‌ ಮತ್ತು ದರ್ಗಾಗಳ ಆಡಳಿತ ಮಂಡಳಿಗಳಿಗೆ ಮತ್ತೊಮ್ಮೆ ಒತ್ತಿ ಹೇಳುವ ಅಗತ್ಯವಿದೆ.



ಈ ಮೂಲಕ ನಿರ್ದೇಶಿಸುವುದೇನೆಂದರೆ ಎಲ್ಲ ಆಡಳಿತ ಮಂಡಳಿಗಳು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬಾರದು ಮತ್ತು ಕಬರಸ್ತಾನ್‌/ದರ್ಗಾಗಳ ಆಡಳಿತ ಮಂಡಳಿಗಳೂ ಏಪ್ರಿಲ್‌ 9, 2020ರಂದು ಇರುವ ಷಬ್‌ ಎ ಬರಾತ್‌ ನಂದು ಸಾಮೂಹಿಕ ಪ್ರಾರ್ಥನೆಯನ್ನು ಅಮಾನತು ಮಾಡಬೇಕು.

ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ಧಾರ್ಮಿಕ ಆಚರಣೆಗಳನ್ನು ಖಬರಸ್ತಾನ್‌/ದರ್ಗಾಗಳಿಗೆ ಅವಕಾಶ ಮಾಡಿಕೊಡಬಾರದು ಮತ್ತು ಖಬರಸ್ತಾನ್‌/ದರ್ಗಾಗಳ ಪ್ರವೇಶ ದ್ವಾರಗಳ ಮುಚ್ಚಿರಬೇಕು ಎಂದು ಈ ಮೂಲಕ ಸೂಚಿಸಲಾಗುತ್ತಿದೆ.

ಖಬರಸ್ತಾನ/ದರ್ಗಾಗಳ ಆಡಳಿತ ಮಂಡಳಿಗಳು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಲಾಗಿದೆ.

ರಾಜ್ಯದಲ್ಲಿರುವ ಎಲ್ಲಾ ಜಿಲ್ಲಾಮಟ್ಟದ ವಕ್ಫ್‌ ಸಲಹಾ ಸಮಿತಿಗಳ ಎಲ್ಲ ವಕ್ಫ್‌ ಅಧಿಕಾರಿಗಳು ಆದೇಶವನ್ನು ಪಾಲಿಸಬೇಕಾಗಿ ಮತ್ತು ಎಲ್ಲ ವಕ್ಫ್‌ ಆಡಳಿತ ಮಂಡಳಿಗೆ ತಿಳಿಸುವುದರ ಜೊತೆಗೆ ಆದೇಶ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ರೀತಿಯ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...