ಹೊಸದಿಲ್ಲಿ: ಸತತ 9ನೇ ದಿನವೂ ತೈಲ ತುಟ್ಟಿ ರಾಜಸ್ಥಾನು ಪೆಟ್ರೋಲ್ ಶತಕ

Source: VB | By JD Bhatkali | Published on 18th February 2021, 5:28 PM | National News |

ಹೊಸದಿಲ್ಲಿ: ತೈಲ ಬೆಲೆಗಳು ಸತತವಾಗಿ 9ನೇ ದಿನವೂ ಏರಿಕೆಯಾಗಿದ್ದು, ರಾಜಸ್ಥಾನದಲ್ಲಿ ಬುಧವಾರ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 100 ರೂ. ಗಡಿಯನ್ನು ದಾಟಿದೆ.

ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ಲೀಟರ್‌ಗೆ ತಲಾ 25 ಪೈಸೆ ಏರಿಕೆಯಾಗಿದೆ. ಮಹಾರಾಷ್ಟ್ರ ಮಧ್ಯಪ್ರದೇಶ ಮತ್ತಿತರ ರಾಜ್ಯಗಳ ಕೆಲವು ಸ್ಥಳಗಳಲ್ಲಿ ಪೆಟ್ರೋಲ್ ದರವು 100 ರೂ. ಸನಿಹಕ್ಕೆ ತಲುಪಿದೆ.

ದೇಶದಲ್ಲಿ ಪೆಟ್ರೋಲ್ ದರವು 100 ರೂ.ಗೆ ತಲುಪಿರುವುದು ಇದೇ ಮೊದಲ ಸಲವಾಗಿದೆ. ರಾಜಸ್ಥಾನದ ಶ್ರೀಗಂಗಾ ನಗರದಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 100.13 ರೂ. ಆಗಿದ್ದು, ಇದು ದೇಶದಲ್ಲೇ ಅತ್ಯಧಿಕವಾಗಿದೆ ಮತ್ತು ಅಲ್ಲಿ ಡೀಸೆಲ್ ದರ ಲೀಟರ್‌ಗೆ ೨3.13 ರೂ.ಗೆ ತಲುಪಿದೆ.

ಸ್ಥಳೀಯ ತೆರಿಗೆಗಳು ಹಾಗೂ ಸರಕುಸಾಗಣೆ ಶುಲ್ಲಗಳು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನವಾಗಿರುವುದರಿಂದ ತೈಲ ದರಗಳಲ್ಲಿಯೂ ವ್ಯತ್ಯಾಸವುಂಟಾಗುತ್ತದೆ. ರಾಜಸ್ಥಾನವು ದೇಶದಲ್ಲೇ ಪೆಟ್ರೋಲ್‌ಗೆ ಅತ್ಯಧಿಕ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ವಿಧಿಸುವ ರಾಜ್ಯವಾಗಿದೆ.

ಶೇ.2ರಷ್ಟು ಕಡಿತಗೊಳಿಸಿದ್ದರೂ, ಅಲ್ಲಿ ತೈಲ ದರ ದಾಖಲೆಯ ಏರಿಕೆಯನ್ನು ಕಂಡಿದೆ. ಬುಧವಾರ ತೈಲ ದರದಲ್ಲಿ ಆಗಿರುವ ಹೆಚ್ಚಳದಿಂದಾಗಿ ಪೆಟ್ರೋಲ್ ದರವು ದಿಲ್ಲಿಯಲ್ಲಿ ಪ್ರತಿ ಲೀಟರ್ ಗೆ 89.4 ರೂ. ಆಗಿದೆ ಹಾಗೂ ಡೀಸೆಲ್ ದರವು 79.95 ರೂ. ಆಗಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 96 ರೂ.ಗೆ ತಲುಪಿದ್ದು, ಡೀಸೆಲ್ ದರ 86.98 ರೂ. ಆಗಿದೆ. ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 99.90 ರೂ. ಹಾಗೂ ಡೀಸೆಲ್ 90.35 ರೂ. ಆಗಿದೆ.

Read These Next

ಗೋಕರ್ಣ ಮಹಾಬಲೇಶ್ವರ ದೇವಾಲಯದ ಹೊಣೆ ಇನ್ಮುಂದೆ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಗೆ. ರಾಮಚಂದ್ರಪುರ ಮಠಕ್ಕೆ ಹಿನ್ನಡೆ.

ನವದೆಹಲಿ : ‌ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣದ ಪುರಾಣ ಪ್ರಸಿದ್ದ ಶ್ರೀ ಮಹಾಬಲೇಶ್ವರ ದೇವಾಲಯವನ್ನ ಸುಪ್ರೀಂಕೋರ್ಟ್ ನಿವೃತ್ತ ...

ಪಶ್ಚಿಮಬಂಗಾಳ: ರೋಡ್‌ ಶೋನಲ್ಲಿ ಸೇರಿದ ಭಾರೀ ಜನಸ್ತೋಮ; ಇಷ್ಟೊಂದು ಜನ ಸೇರಿದ್ದು ನೋಡಿರಲೇ ಇಲ್ಲ; ಮೋದಿ

ಪಶ್ಚಿಮಬಂಗಾಳದ ಅಸ್ಸನ್‌ಸೋಲ್‌ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಜನಸಂದಣಿಗೆ ಶ್ಲಾಘನೆ ...