ಚುನಾವಣಾ ಮುದ್ರಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚನೆ

Source: so news | By MV Bhatkal | Published on 17th March 2019, 11:12 PM | State News | Don't Miss |

ಮೈಸೂರು:ಚುನಾವಣಾ ಪ್ರಚಾರದ ಬ್ಯಾನರ್, ಕರಪತ್ರಗಳು ಹಾಗೂ ಇನ್ನಿತರ ಮುದ್ರಣಗಳಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲೆಯ ಮುದ್ರಣಕಾರರಿಗೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ಮುದ್ರಣಕಾರರಿಗೆ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಮುದ್ರಣ ಕುರಿತು ಚುನಾವಣಾ ಆಯೋಗದ ನೀತಿ ನಿಯಮಗಳು ಹಾಗೂ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ಪ್ರಚಾರದ ಎಲ್ಲಾ ರೀತಿಯ ಮುದ್ರಣಗಳನ್ನು ಎಷ್ಟು ಮುದ್ರಣ ಮಾಡುತ್ತೀರ ಎಂಬ ಮಾಹಿತಿಯನ್ನು ಬಿ ಫಾರಂ ನಲ್ಲಿ ಭರ್ತಿ ಮಾಡಿ ನಮಗೆ ಸಲ್ಲಿಸಬೇಕು ಹಾಗೂ ಮುದ್ರಣಕಾರರಿಗೆ ಮಾಹಿತಿ ನೀಡಲು ಹೊಸ ಮೇಲ್ ಐಡಿ ತೆಗೆಯಲಾಗುವುದು ಅದರಲ್ಲೂ ಸಹಾ ಪ್ರತಿನಿತ್ಯ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.
ಪ್ರತಿಯೊಂದು ಬ್ಯಾನರ್ ಮೇಲೂ ಸಹಾ ಪಬ್ಲಿಷರ್, ಪ್ರಿಂಟರ್ ಹಾಗೂ ಬ್ಯಾನರ್ ಏಜೆನ್ಸಿಯ ಹೆಸರು
ಕಡ್ಡಾಯವಾಗಿ ಇರಲೇಬೇಕು ಯಾವುದೇ ಭಯ ಪಡದೇ ಯಾರೇ ಆದರು ಅವರ ಬ್ಯಾನರ್‍ಗಳಿಗೆ ಮಾಲೀಕನ ಹೆಸರನ್ನು ಹಾಕಿ ಎಂದು ಮುದ್ರಣಾಕಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಪ್ರಿಂಟರ್ ಕ್ಲಸ್ಟರ್‍ನ ಪ್ರಧಾನ ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್, ಆಂದೋಲನ ಮುದ್ರಣದ ಚಂದ್ರಶೇಖರ್, ಡಿಜಿಟಲ್ ಪ್ರಿಂಟ್ಸ್‍ನ ಸತೀಶ್, ಅನ್ನಪೂರ್ಣ ಪ್ರಿಂಟರ್ಸ್‍ನ ಮೀರಾ, ಶ್ರೀ ಗ್ರಾಫಿಕ್ಸ್ ಪುರಷೋತ್ತಮ್, ಆಫ್ ಸೆಟ್ ಪ್ರಿಂಟರ್ಸ್ ಮಂಜುನಾಥ ಗುಪ್ತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...