ಆನ್‌ಲೈನ್‌ ಗೇಮಿಂಗ್‌ಗೆ ಶೇ.28 ಜಿಎಸ್‌ಟಿ; ಅಕ್ಟೋಬರ್ 1ರಿಂದ ಜಾರಿ

Source: Vb | By I.G. Bhatkali | Published on 3rd August 2023, 12:08 PM | National News |

ಹೊಸದಿಲ್ಲಿ: ಆನ್‌ಲೈನ್ ಗೇಮಿಂಗ್‌ಗಳಲ್ಲಿ ಹೊಡಲಾಗುವ ಬೆಟ್ಟಿಂಗ್‌ಗಳ ಮುಖಮೌಲ್ಯದ ಮೇಲೆ ಶೇ.28ರಷ್ಟು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆಯೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಎಲ್ಲಾ ರೀತಿಯ ಬೆಟ್ಟಿಂಗ್ ಹಾಗೂ ವೀಡಿಯೊ ಸಂಬಂಧಿತ ಚಟುವಟಿಕೆಗಳು,ಕ್ಯಾಸಿನೊಗಳು ಹಾಗೂ ಕುದುರೆ ರೇಸಿಂಗ್ ಮೇಲೆ ತೆರಿಗೆಯನ್ನು ವಿಧಿಸುವ ನಿರ್ಧಾರವನ್ನು ಕಳೆದ ಜಿಎಸ್‌ಟಿ ಸಭೆಯಲ್ಲಿ ಕೈಗೊಳ್ಳಲಾಗಿತ್ತೆಂದು ಅವರು ತಿಳಿಸಿದರು. ಜಿಎಸ್‌ಟಿ ಕಾನೂನಿನಲ್ಲಿ ಯಾವೆಲ್ಲಾ ತಿದ್ದುಪಡಿಗಳನ್ನು ಮಾಡಬಹುದೆಂಬ ನಿರ್ದಿಷ್ಟ ಕಾರ್ಯಸೂಚಿಯನ್ನು ಇಂದಿನ ಸಭೆಯು ಹೊಂದಿತ್ತು ಎಂದರವರು ಹೇಳಿದರು.

ಆನ್‌ಲೈನ್ ಗೇಮಿಂಗ್ ಮೇಲೆ ಶೇ.28ರಷ್ಟು ಜಿಎಸ್‌ಟಿ ಹೇರಿಕೆ ಬಗ್ಗೆ ವಿವಿಧ ರಾಜ್ಯಗಳ ಸಚಿವರು ಕಳವಳ ವ್ಯಕ್ತಪಡಿಸಿರುವ ಹೊರತಾಗಿಯೂ ಅಕ್ಟೋಬರ್ 1ರಿಂದ ನೂತನ ತೆರಿಗೆ ಜಾರಿಗೆ ಬರಲಿದೆ ಎಂದರು.

ಆನ್‌ಲೈನ್ ಗೇಮಿಂಗ್‌ಗೆ ಜಿಎಸ್‌ಟಿ ಹೇರಿಕೆಯನ್ನು ಮರುಪರಾಮರ್ಶಿಸಬೇಕು ಹಾಗೂ ಆ ವಿಷಯವನ್ನು ಸಚಿವ ಸಮಿತಿಗೆ ಕಳುಹಿಸಿಕೊಡಬೇಕೆಂದು ದಿಲ್ಲಿಯ ಸಚಿವರು ಸಭೆಯಲ್ಲಿ ಆಗ್ರಹಿಸಿದ್ದರು. ಗೋವಾ ಹಾಗೂ ಸಿಕ್ಕಿಂ ರಾಜ್ಯಗಳು ಕ್ಯಾಸಿನೊಗಳಲ್ಲಿ ಹಿತಾಸಕ್ತಿಗಳನ್ನು ಹೊಂದಿವೆ. ಶೇ.28ರಷ್ಟು ಅಧಿಕ ಜಿಎಸ್‌ಟಿ ಹೇರಿಕೆಯು ಸಣ್ಣ ರಾಜ್ಯಗಳಾದ ತಮ್ಮ ಆರ್ಥಿಕ ಹಿತಾಕ್ತಿಗಳಿಗೆ ಧಕ್ಕೆಯುಂಟು ಮಾಡಲಿದೆಯೆಂದು ಆ ರಾಜ್ಯಗಳ ಸಚಿವರು ಆತಂಕ ವ್ಯಕ್ತಪಡಿಸಿರುವುದಾಗಿ ಸೀತಾರಾಮನ್ ಹೇಳಿದರು.

ಆದರೆ ನೂತನ ಜಿಎಸ್‌ಟಿ ತೆರಿಗೆ ಜಾರಿಯಾದ ಆರು ತಿಂಗಳುಗಳ ಬಳಿಕ ಮರುಪರಾಮರ್ಶೆ ಮಾಡುವುದಾಗಿ ಮಂಡಳಿಯು ಈ ರಾಜ್ಯಗಳಿಗೆ ಭರವಸೆ ನೀಡಿತೆಂದು ಸೀತಾರಾಮನ್ ತಿಳಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...