ಹೊಸದಿಲ್ಲಿ: ಕೇಂದ್ರ ಸಂಪುಟಕ್ಕೆ ತುರ್ತು ಸರ್ಜರಿ ರಾಜ್ಯದ ನಾಲ್ವರಿಗೆ ಸ್ಥಾನ ಕರಂದ್ಲಾಜೆ, ನಾರಾಯಣ ಸ್ವಾಮಿ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್ ಸಹಿತ 43 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

Source: VB | By S O News | Published on 8th July 2021, 11:39 PM | National News |

ಹೊಸದಿಲ್ಲಿ: ಕೋವಿಡ್-19, ಆರ್ಥಿಕತೆ ಮತ್ತು ಇಂಧನಗಳು ಒಳಗೊಂಡು ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಟೀಕಾಪ್ರಹಾರವನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತನ್ನ ಸಚಿವ ಸಂಪುಟವನ್ನು ಪುನರ್‌ರಚಿಸಿದ್ದು, 36 ಹೊಸ ಸಚಿವರು ಸರಕಾರದಲ್ಲಿ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್‌ ಸೇರಿದಂತೆ 12 ಸಚಿವರು ಸಂಪುಟದಿಂದ ನಿರ್ಗಮಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ 43 ಸಚಿವರಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಕರ್ನಾಟಕದ ನಾಲ್ವರು ಸ್ಥಾನ ಪಡೆದಿದ್ದಾರೆ. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಅವರೂ ರಾಜೀನಾಮೆ ನೀಡಿರುವ ಸಚಿವರಲ್ಲಿ ಸೇರಿದ್ದಾರೆ. ಮೋದಿ ಅವರು ಮೇ 2019ರಲ್ಲಿ ಪ್ರಧಾನಿಯಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ಮೊದಲ ಸಂಪುಟ ಪುನರ್‌ರಚನೆಯಾಗಿದೆ.

ಮೋದಿ ಸಂಪುಟವು ಈಗ 77 ಸಚಿವರನ್ನು ಹೊಂದಿದ್ದು, ಸರಿಸುಮಾರು ಅರ್ಧದಷ್ಟು ಸಚಿವರು ಹೊಸಬರಾಗಿದ್ದಾರೆ. ಏಳು ಸಚಿವರು ಸಂಪುಟ ದರ್ಜೆಗೆ ಭಡ್ತಿ ಪಡೆದಿದ್ದಾರೆ.

ಬುಧವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ

ನೂತನ ಸಚಿವರಿಗಿಂತ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಪುನರ್‌ರಚನೆಗೆ ಮುನ್ನ ಸಂಪುಟಕ್ಕೆ ರಾಜೀನಾಮೆ ನೀಡಿದ್ದು ದಿನದ ದೊಡ್ಡ ಸುದ್ದಿಯಾಗಿತ್ತು.

ಜಾವಡೇಕರ್‌ ಸರಕಾರದ ಮುಖ್ಯ ವಕ್ತಾರರಲ್ಲೊಬ್ಬರಾಗಿದ್ದು, ವರ್ಷಗಳಿಂದಲೂ ಈ ಹೊಣೆಗಾರಿಕೆಯನ್ನು ನಿಭಾಯಿಸಿದ್ದರು. ಆದರೆ, ರವಿಶಂಕರ್ ಪ್ರಸಾದ್ ಅವರ ರಾಜೀನಾಮೆಯು ಎಲ್ಲಕ್ಕಿಂತ ಹೆಚ್ಚು ಆಘಾತವನ್ನುಂಟು ಮಾಡಿದೆ. ಹಿರಿಯ ಬಿಜೆಪಿ ನಾಯಕ ಪ್ರಸಾದ್ ಅವರು ಜಾವಡೇಕರ್ ಅವರಂತೆ ಅಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದ ಕೆಲವರ ಪೈಕಿ ಒಬ್ಬರಾಗಿದ್ದರು.

ಸಮಾರಂಭದಲ್ಲಿ ನಿರ್ಗಮಿತ ಸಚಿವರು ಉಪಸ್ಥಿತರಿದ್ದರು.

ಸಾಧನೆಯನ್ನು ಅವಲಂಬಿಸಿ ಶೇ.20ರಷ್ಟು ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಸರಕಾರ ಹೇಳಿದೆ.

ಪ್ರಮುಖ ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳು ಸಚಿವರು ಹೆಚ್ಚುವರಿ ಖಾತೆಗಳನ್ನು ಕಳೆದುಕೊಳ್ಳುವ ಮತ್ತು ಕೆಲವರು ಹಿಂಭಡ್ತಿ ಪಡೆಯುವ ಸಾಧ್ಯತೆಗಳನ್ನು ಬೆಟ್ಟುಮಾಡುತ್ತಿವೆ.

ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಾರಾಯಣ ರಾಣೆ, ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಸರ್ಬಾನಂದ ಸೋನೋವಾಲ್ ಅವರು ಸಂಪುಟ ದರ್ಜೆ ಪಡೆದಿದ್ದಾರೆ.

ಭೂಪೇಂದ್ರ ಯಾದವ್ ಮತ್ತು ಮೀನಾಕ್ಷಿ ಲೇಖಿ ಅವರೂ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಏಳು ಸಚಿವರು ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.

ಕಿರಣ್ ರಿಜಿಜು, ಅನುರಾರ್ ಠಾಕೂರ್, ಹರ್ದೀಪ್ ಸಿಂಗ್ ಪುರಿ, ಪುರುಷೋತ್ತಮ್ ರೂಪಾಲಾ, ಮನ್ಸುಖ್ ಮಾಂಡವೀಯ ಮತ್ತು ಜಿ.ಕೆ.ರೆಡ್ಡಿ ಅವರು ಸಂಪುಟ ದರ್ಜೆಗೆ ಭಡ್ತಿ ಪಡೆದಿದ್ದಾರೆ.

ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್ ಮತ್ತು ಡಿ.ವಿ.ಸದಾನಂದ ಗೌಡರಲ್ಲದೆ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್, ಸಹಾಯಕ ಆರೋಗ್ಯ ಸಚಿವ ಅಶ್ವಿನಿ ಚೌಬೆ,

ರಾಜೀನಾಮೆ ನೀಡಿದ 12 ಸಚಿವರು

  1. ಡಿ.ವಿ.ಸದಾನಂದ ಗೌಡ
  2. ರವಿಶಂಕರ್‌ ಪ್ರಸಾದ್
  3. ತಾವರ್‌ಚಂದ್ ಗೆಹ್ಲೋಟ್
  4. ರಮೇಶ್ ಪೋಯಾಲ್ ನಿಶಾಂಕ್
  5. ಹರ್ಷವರ್ಧನ್
  6. ಪ್ರಕಾಶ್ ಜಾವಡೇಕರ್
  7. ಸಂತೋಷ್ ಕುಮಾರ್ ಗಂಗ್ವಾರ್
  8. ಬಾಬುಲ್ ಸುಪ್ರಿಯೊ
  9. ಧೋತ್ರೆ ಸಂಜಯ್ ಶಾಮರಾವ್
  10. ರತನ್ ಲಾಲ್ ಕಟಾರಿಯಾ
  11. ಪ್ರತಾಪ್ ಚಂದ್ರ ಸಾರಂಗಿ
  12. ದೇಬಶ್ರೀ ಚೌಧರಿ

ಶಿಕ್ಷಣ ಸಚಿವ ರಮೇಶ್ ಪೋಬ್ರಿಯಾಲ್ ನಿಷಾಂಕ್, ಸಹಾಯಕ ಶಿಕ್ಷಣ ಸಚಿವ ಸಂಜಯ ಧೋತ್ರೆ, ಸಹಾಯಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ದೇಬಶ್ರೀ ಚೌಧುರಿ, ಸಹಾಯಕ ಜಲಶಕ್ತಿ ಸಚಿವ ರತನ್‌ಲಾಲ್ ಕಟಾರಿಯಾ, ಸಹಾಯಕ ಪರಿಸರ ಸಚಿವ ಬಾಬುಲ್ ಸುಪ್ರಿಯೊ ಮತ್ತು ಸಹಾಯಕ ಪಶು ಸಂಗೋಪನಾ ಸಚಿವ ಪ್ರತಾಪಚಂದ್ರ ಸಾರಂಗಿ ಅವರೂ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರಚಂದ್ ಗೆಹ್ಲೋಟ್ ಅವರು ಮಂಗಳವಾರ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ ಬಳಿಕ ಕೇಂದ್ರ ಸಂಪುಟಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು.

ನಿರ್ಗಮನಗೊಂಡ ಸಚಿವರ ಪ್ರವರ: ಕೋವಿಡ್ ಎರಡನೇ ಅಲೆಯು ಇಡೀ ದೇಶವನ್ನೇ ಆವರಿಸಿಕೊಂಡು ಅಸಮರ್ಪಕ ಆರೋಗ್ಯ ಮೂಲಸೌಕರ್ಯಗಳನ್ನು ಬಯಲಿಗೆಳೆದ ಹಿನ್ನೆಲೆಯಲ್ಲಿ ಹರ್ಷವರ್ಧನ್ ಹುದ್ದೆಗೆ ಎರವಾಗಿದ್ದಾರೆ. ಹರ್ಷವರ್ಧನ್ ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸಿದ್ದ ರೀತಿಗಾಗಿ ಪ್ರತಿಪಕ್ಷಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಸ್ವತಃ ವೈದ್ಯರಾಗಿರುವ ಅವರು ಆರೋಗ್ಯ ಖಾತೆಯ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿದ್ದರು. ಕೊರೋನ ವೈರಸ್ ಎರಡನೇ ಅಲೆಯ ವಿರುದ್ಧ ಸರಕಾರದ ಹೋರಾಟಕ್ಕೆ ಹರ್ಷವರ್ಧನ್ ರಾಜಕೀಯ ಬೆಲೆಯನ್ನು ತೆತ್ತಿದ್ದಾರೆ ಎಂದು ಮೂಲಗಳು ವ್ಯಾಖ್ಯಾನಿಸಿವೆ.

ಸರಕಾರದಿಂದ ಕೋವಿಡ್ ನಿರ್ವಹಣೆಯನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದರೂ

43 ನೂತನ ಸಚಿವರು

ಸಂಪುಟದರ್ಜೆ ಸಚಿವರು

1. ನಾರಾಯಣ ತಾತು ರಾಣೆ 2. ಸರ್ಬಾನಂದ ಸೋನೋವಾಲ್ 3. ವೀರೇಂದ್ರ ಕುಮಾರ್ 4. ಜ್ಯೋತಿರಾದಿತ್ಯ ಸಿಂದಿಯಾ 5. ರಾಮಚಂದ್ರ ಪ್ರಸಾದ್ ಸಿಂಗ್ 6. ಅಶ್ವಿನಿ ವೈಷ್ಣವ್ 7. ಪಶುಪತಿ ಕುಮಾರ್ ಪಾರಸ್ 8. ಭೂಪೇಂದ್ರ ಯಾದವ್

ಭಡ್ತಿ ಪಡೆದವರು

9. ಕಿರಣ್ ರಿಜಿಜು 10. ಹರ್ದೀಪ್ ಸಿಂಗ್ ಪುರಿ 11, ಮನ್ಸುಖ್ ಮಾಂಡವೀಯ 12. ರಾಜ್ ಕುಮಾರ್ ಸಿಂಗ್ 13. ಪುರುಷೋತ್ತಮ್ ರೂಪಾಲಾ 14. ಜಿ. ಕೃಷ್ಣಾ ರೆಡ್ಡಿ 15. ಅನುರಾಗ್ ಸಿಂಗ್ ಠಾಕೂರ್

ಸಹಾಯಕ ಸಚಿವರು

16. ಪಂಕಜ್ ಚೌಧರಿ 17. ಅನುಪ್ರಿಯಾ ಸಿಂಗ್ ಪಟೇಲ್ 18. ಡಾ. ಸತ್ಯಪಾಲ್ ಸಿಂಗ್ ಬಾಫೆಲ್19. ರಾಜೀವ್ ಚಂದ್ರಶೇಖರ್ 20. ಶೋಭಾ ಕರಂದ್ಲಾಜೆ 21. ಭಾನು ಪ್ರತಾಪ್ ಸಿಂಗ್ ವರ್ಮಾ 22. ದರ್ಶನಾ ವಿಕ್ರಮ್ ಜರ್ದೋಶ್ 23. ಮೀನಾಕ್ಷಿ ಲೇಖಿ 24. ಅನ್ನಪೂರ್ಣಾ ದೇವಿ 25. ಎ.ನಾರಾಯಣಸ್ವಾಮಿ 26, ಕೌಶಲ್ ಕಿಶೋರ್ 27, ಅಜಯ್ ಭಟ್ 28. ಬಿ.ಎಲ್. ವರ್ಮಾ 29, ಅಜಯ್ ಕುಮಾರ್ 30, ಚೌಹಾಣ್ ದೇವುಸಿಂಗ್ 31. ಭಗವಂತ ಖೂಬಾ 32. ಕಪಿಲ್ ಮೋರೆಶ್ವರ್ ಪಾಟೀಲ್ 33. ಪ್ರತಿಮಾ ಭೌಮಿಕ್ 34. ಸುಭಾಷ್ ಸರ್ಕಾರ್ 35. ಭಾಗವತ್ ಕಿಶನ್‌ರಾವ್ ಕರಾಡ್ 36. ರಾಜಕುಮಾರ್ ರಂಜನ್ ಸಿಂಗ್ 37. ಭಾರತಿ ಪ್ರವೀಣ್ ಪವಾರ್ 38. ಬಿಶ್ವೇಶ್ವರ್ ತುಡು 39. ಶಂತನು ಠಾಕುರ್ 40. ಎಂ.ಮಹೇಂದ್ರಭಾಯಿ 41. ಜಾನ್ ಬಾರ್ಲಾ 42. ಎಲ್. ಮುರುಗನ್ 43. ನಿಶಿತ್ ಪ್ರಾಮಾಣಿಕ್

ಬಿಕ್ಕಟ್ಟಿನ ನಡುವೆ ಅವರ ವಿವಿಧ ಹೇಳಿಕೆಗಳನ್ನು ಸಂವೇದನಾ ಶೂನ್ಯ ಮತ್ತು ತಳಮಟ್ಟದ ಪರಿಸ್ಥಿತಿ ಅರಿವಿಲ್ಲದ ಹೇಳಿಕೆಗಳೆಂದು ಪ್ರತಿಪಕ್ಷಗಳು ತರಾಟೆಗೆತ್ತಿಕೊಂಡಿದ್ದವು. ಸಾಂಕ್ರಾಮಿಕದ ನಿರ್ವಹಣೆಗಾಗಿ ಸರಕಾರವನ್ನು ಟೀಕಿಸುತ್ತಿರುವುದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ದಾಳಿಗಳನ್ನೂ ನಡೆಸಿದ್ದ ಹರ್ಷವರ್ಧನ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೋವಿಡ್ ಬಿಕ್ಕಟ್ಟನ್ನು ರಾಜಕೀಕರಿಸುತ್ತಿದ್ದಾರೆ ಎಂದು ಆಗಾಗ ಆರೋಪಿಸುತ್ತಿದ್ದರು. ಕಾಂಗ್ರೆಸ್ ಕೋವಿಡ್ ಲಸಿಕೆಯ ಬಗ್ಗೆ ಹಿಂಜರಿಕೆಯನ್ನು ಹರಡುತ್ತಿದೆ ಎಂದೂ ಅವರು ಆಪಾದಿಸಿದ್ದರು.

ಕೋವಿಡ್ ಸೋಂಕಿನಿಂದಾಗಿ ಎ.21ರಂದು ಇಲ್ಲಿಯ ಏಮ್ಸ್‌ಗೆ ದಾಖಲಾಗಿದ್ದ ಪೋಖಿಯಾಲ್ ಕೋವಿಡೋತ್ತರ ತೊಂದರೆಗಳಿಂದಾಗಿ ಜೂನ್‌ನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಕಾರಣಗಳಿಂದಾಗಿ ಪೋಖಿಯಾಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಪೋಖಿಯಾಲ್ 2019 ಮೇ ತಿಂಗಳಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ಧೋತ್ರೆ ಮಹಾರಾಷ್ಟ್ರದ ಅಕೋಲಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ ದೇಬಶ್ರೀ ಚೌಧುರಿ ಪಶ್ಚಿಮ್ ಬಂಗಾಳದ ರಾಯಗಂಜ್ ಸಂಸದೆಯಾಗಿದ್ದಾರೆ.

ಗಂಗ್ವಾರ್ ತನ್ನ ಬರೇಲಿ ಲೋಕಸಭಾ ಕ್ಷೇತ್ರದಲ್ಲಿನ ಸ್ಥಿತಿಯ ಕುರಿತು ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ಸಲ್ಲಿಸಿದ್ದರು. ಅಧಿಕಾರಿಗಳು ನಿರ್ಣಯಗಳನ್ನು ತೆಗೆದುಕೊಳ್ಳುತ್ತಿಲ್ಲ ಮತ್ತು ಸರಕಾರಿ ಆರೋಗ್ಯ ಕೇಂದ್ರಗಳು ಜಿಲ್ಲಾಸ್ಪತ್ರೆಗಳಿಂದ ಶಿಫಾರಸು ಪತ್ರ ತರುವಂತೆ ರೋಗಿಗಳನ್ನು ವಾಪಸ್ ಕಳುಹಿಸುತ್ತಿವೆ ಎಂದು ಅವರು ಆರೋಪಿಸಿದ್ದರು.

ಸದ್ದು ಮಾಡಿದ ಪ್ರಸಾದ್ ಮತ್ತು ಜಾವಡೇಕರ್‌ ರಾಜೀನಾಮೆ

ಕಾನೂನು ಹಾಗೂ ವಿದ್ಯುನ್ಮಾನ ಮತ್ತು ಐಟಿ ಸಚಿವರಾಗಿದ್ದ ಪ್ರಸಾದ್ ನೂತನ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಟ್ವಿಟರ್‌ನೊಂದಿಗೆ ವಿವಾದದಲ್ಲಿ ಸಿಲುಕಿದ್ದರು. ಪ್ರಸಾದ್ ಅವರ ಕೊನೆಯ ಕೆಲವು ತಿಂಗಳುಗಳು ನೂತನ ಐಟಿ ನಿಯಮಗಳು ಸೇರಿದಂತೆ ಹಲವಾರು ವಿಷಯಗಳಲ್ಲಿ ಟ್ವಿಟರ್ ಜೊತೆ ಅವರ ನಿರಂತರ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗಿದ್ದವು. ಕಳೆದ ತಿಂಗಳು ಅವರ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ವರ್ಷಗಳಿಂದಲೂ ಸರಕಾರದ ವಕ್ತಾರನ ಪಾತ್ರವನ್ನು ನಿರ್ವಹಿಸಿದ್ದ ಜಾವಡೇಕರ್ ರಾಜೀನಾಮೆಯೂ ಅಚ್ಚರಿಯನ್ನುಂಟು ಮಾಡಿದೆ.
 

ಹನ್ನೊಂದಕ್ಕೇರಿದ ಮಹಿಳೆಯರ ಸಂಖ್ಯೆ

ಪ್ರಧಾನಿ ಮೋದಿ ಅವರು ಏಳು ಮಹಿಳೆಯರನ್ನು ತನ್ನ ಸಚಿವ ಸಂಪುಟಕ್ಕೆ ಹೊಸದಾಗಿ ಸೇರಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಸಂಪುಟದಲ್ಲಿ ಮಹಿಳೆಯರ ಸಂಖ್ಯೆ 11ಕ್ಕೇರಿದೆ. ಅವರ ಮೊದಲ ಅಧಿಕಾರಾವಧಿಯಲ್ಲಿ ಸಂಪುಟದಲ್ಲಿ ಒಂಭತ್ತು ಮಹಿಳೆಯರಿದ್ದರು.

ಶೋಭಾ ಕರಂದ್ಲಾಜೆ, ದರ್ಶನಾ ವಿಕ್ರಮ ಜರ್ದೋಷ್, ಮೀನಾಕ್ಷಿ ಲೇಖಿ, ಅನ್ನಪೂರ್ಣಾ ದೇವಿ, ಪ್ರತಿಮಾ ಭೌಮಿಕ್, ಡಾ.ಭಾರತಿ ಪ್ರವೀಣ ಪವಾರ ಮತ್ತು ಅಪ್ನಾ ದಳದ ಅನುಪ್ರಿಯಾ ಸಿಂಗ್ ಪಟೇಲ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಹಾಯಕ ಸಚಿವೆಯರಾಗಿದ್ದಾರೆ. ಈ ಪೈಕಿ ಮೂವರು ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಪಟೇಲ್ ಮೋದಿ ಅವರ ಹಿಂದಿನ ಅಧಿಕಾರಾವಧಿಯಲ್ಲಿ ಸಹಾಯಕ ಆರೋಗ್ಯ ಸಚಿವೆಯಾಗಿದ್ದರು.

ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಸಾಧ್ವಿ ನಿರಂಜನ ಜ್ಯೋತಿ ಮತ್ತು ರೇಣುಕಾ ಸಿಂಗ್ ಸರುತಾ ಅವರು ಈಗಾಗಲೇ ಕೇಂದ್ರ ಸಂಪುಟದ ಭಾಗವಾಗಿದ್ದಾರೆ.
 

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...