ಸದನದಲ್ಲಿ ಯಾರದೇ ಧರ್ಮ, ಜಾತಿ ಉಲ್ಲೇಖಿಸಿದರೆ ಕ್ರಮ; ಸದಸ್ಯರಿಗೆ ಲೋಕಸಭಾ ಸ್ಪೀಕರ್ ಎಚ್ಚರಿಕೆ

Source: Vb | By I.G. Bhatkali | Published on 13th December 2022, 8:48 AM | National News |

ಹೊಸದಿಲ್ಲಿ: ಸದನದಲ್ಲಿ ಯಾರದೇ ಧರ್ಮ ಅಥವಾ ಜಾತಿಯನ್ನು ಉಲ್ಲೇಖಿಸದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ತಾನು ನಿರ್ದಿಷ್ಟ ಸಮುದಾಯವೊಂದಕ್ಕೆ ಸೇರಿರುವುದರಿಂದ ಹಿಂದಿಯಲ್ಲಿ ತನ್ನ ಪ್ರಾವೀಣ್ಯತೆಯ ಬಗ್ಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದರೋರ್ವರು ಆರೋಪಿಸಿದ ಬಳಿಕ ಸ್ಪೀಕರ್ ರ ಈ ಎಚ್ಚರಿಕೆ ಹೊರಬಿದ್ದಿದೆ.

ಪ್ರಶೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ.ರೇವಂತ ರೆಡ್ಡಿಯವರು ತನ್ನ ಸ್ವಂತ ಸಾಮಾಜಿಕ ವರ್ಗವನ್ನು ಪ್ರಸ್ತಾಪಿಸಲು ಬಳಸಿದ ಪದಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ ಸ್ಪೀಕರ್, ಜನರು ಲೋಕಸಭಾ ಸದಸ್ಯರನ್ನು ಅವರ ಜಾತಿ ಮತ್ತು ಧರ್ಮದ ಆಧಾರದಲ್ಲಿ ಆಯ್ಕೆ ಮಾಡಿಲ್ಲ ಎಂದು ಬೆಟ್ಟು ಮಾಡಿದರು.

ಇಲ್ಲಿರುವ ಯಾರೇ ಆದರೂ ಎಂದಿಗೂ ಇಂತಹ ಪದಗಳನ್ನು ಬಳಸಬಾರದು. ಅಂತಹ ಸದಸ್ಯರ ವಿರುದ್ಧ ತಾನು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ತಾನು ಪ್ರಶ್ನೆ ಕೇಳುತ್ತಿರುವಾಗ ಮಧ್ಯ ಪ್ರವೇಶಿಸದಂತೆ ಸ್ಪೀಕರ್‌ಗೆ ಸೂಚಿಸಿದ್ದಕ್ಕಾಗಿ ರೆಡ್ಡಿ ವಿರುದ್ಧವೂ ಬಿರ್ಲಾ ಗಂಭೀರ ಆಕ್ಷೇಪವನ್ನು ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಸ್ಪೀಕರ್ ಕುರಿತು ಎಂದಿಗೂ ಇಂತಹ ಟೀಕೆಗಳನ್ನು ಮಾಡದಂತೆ ತನ್ನ ಪಕ್ಷದ ಸದಸ್ಯರಲ್ಲಿ ಅರಿವು ಮೂಡಿಸುವಂತೆ ಬಿರ್ಲಾ ಸದನದಲ್ಲಿ ಕಾಂಗ್ರೆಸ್ ನಾಯಕ ಆಧರ್ ರಂಜನ್ ಚೌಧುರಿ ಅವರಿಗೆ ಸೂಚಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...