ಉತ್ತರಪ್ರದೇಶದಲ್ಲಿ ಕೋಮುವಾದಿಗಳ ಅಟ್ಟಹಾಸ; ಮರಕ್ಕೆ ಕಟ್ಟಿ ಯುವಕನಿಗೆ ಥಳಿತ; ಬಲ್ವಂತದಿಂದ ಜೈ ಶ್ರಿರಾಮ್ ಘೋಷಣೆ

Source: Vb | By I.G. Bhatkali | Published on 19th June 2023, 9:00 AM | National News |

ಮೀರಟ್: ಗುಂಪು ಥಳಿತದ ಘಟನೆಗಳು ಪದೇ ಪದೇ ವರದಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಕೋಮುವಾದಿ ಸಂಘಟನೆಗಳ ಅಟ್ಟ ಹಾಸ ಮುಂದುವರಿದಿದೆ. ಅಮಾಯಕ ಮುಸ್ಲಿಮ್ ಯುವಕ ನೊಬ್ಬನನ್ನು ಮೂವರು ದುಷ್ಕರ್ಮಿಗಳು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿ, ಬಲವಂತವಾಗಿ 'ಜೈಶ್ರೀರಾಮ್' ಎಂದು ಘೋಷಣೆಗಳನ್ನು ಕೂಗುವಂತೆ ಮಾಡಿದ ಘಟನೆ ಬುಲಂದಶಹರ್ ಜಿಲ್ಲೆಯಲ್ಲಿ ವರದಿಯಾಗಿದೆ.

ಜೂನ್ 14ರಂದು ಈ ಘಟನೆ ನಡೆದಿದ್ದು, ಶನಿವಾರ ಸಂತ್ರಸ್ತ ಯುವಕನ ಸಹೋದರಿಯು ಪೊಲೀಸರಿಗೆ ದೂರು ನೀಡಿದ ಬಳಿಕವಷ್ಟೇ ಬೆಳಕಿಗೆ ಬಂದದೆ.

ಸಂತ್ರಸ್ತ ಯುವಕ ಮುಹಮ್ಮದ್ ಸಾಹಿಲ್ ಖಾನ್ ಎಂಬಾತನಾಗಿದ್ದು ಆತನ ಮೇಲೆ ಹಲ್ಲೆ ನಡೆಸಿದವರನ್ನು ಸೌರಭ್ ಠಾಕೂರ್, ಗಜೇಂದ್ರ ಹಾಗೂ ಧಾನಿ ಪಂಡಿತ್ ಎಂದು ಗುರುತಿಸಲಾಗಿದೆ. ದಿನಗೂಲಿ ಕಾರ್ಮಿಕ ಮುಹಮ್ಮದ್ ಸಾಹಿಲ್ ಖಾನ್ ಮೊಬೈಲ್‌ ಫೋನನ್ನು ಕಳವುಗೈದಿದ್ದಾನೆಂದು ಶಂಕಿಸಿದ ಆರೋಪಿಗಳು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಲ್ಲದೆ ಆತನ ತಲೆಗೂದಲನ್ನು ಕೂಡಾ ಬೋಳಿಸಿದ್ದರು.

ಗಾಯಕ್ಕೆ ಉಪ್ಪು ಸವರಿದಂತೆ, ಕಾಕೋಡ್ ಠಾಣಾ ಪೊಲೀಸರು ಹಲ್ಲೆಗೊಳಗಾದ ಯುವಕನನ್ನೇ ಬಂಧಿಸಿದ್ದರು ಹಾಗೂ ಜೂನ್ 15ರಂದು ಆತನನ್ನು ಜೈಲಿನಲ್ಲಿರಿಸಿದ್ದರು. ಆದರೆ ಹಲ್ಲೆ ನಡೆಸಿದ ಯುವಕರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.

ಶನಿವಾರ ಸಾಹಿಲ್‌ನ ಸಹೋದರಿ ರುಬೀನಾ ಅವರು ಬುಲಂದ್‌ಶಹರ್‌ನ ಹಿರಿಯ ಪೊಲೀಸ್‌ ಅಧೀಕ್ಷಕ ಶ್ಲೋಕ್ ಕುಮಾರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು.ಜೂನ್ 15ರಂದು ತನ್ನ ಸಹೋದರ ಮನೆಗೆ ಹಿಂದಿರುಗಿಲ್ಲ. ಆನಂತರ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸೋದರನಿಗೆ ದುಷ್ಕರ್ಮಿಗಳು ಥಳಿಸುವ ಭಯಾನಕ ವೀಡಿಯೊವನ್ನು ಕಂಡು ಹೌಹಾರಿದ ತಾನು ಕಾಕೋಡ್ ಪೊಲೀಸ್ ಠಾಣೆಗೆ ಧಾವಿಸಿದ್ದಾಗಿ ಆಕೆ ತಿಳಿಸಿದ್ದಾರೆ. ಆದರೆ ತನ್ನ ಸೋದರನನ್ನು ಥಳಿಸಿದ ಆರೋಪಿಗಳನ್ನು ಬಂಧಿಸುವ ಬದಲು, ತನ್ನ ಸೋದರನನ್ನು ಜೈಲಿಗೆ ಹಾಕಿರುವುದನ್ನ ಕಂಡು ತನಗೆ ಆಘಾತವಾಗಿರುವುದಾಗಿ ರುಬೀನಾ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಎಸ್ ಎಸ್‌ಪಿ ಆದೇಶ ನೀಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸಂತ್ರಸ್ತ ಯುವಕನನ್ನೇ ಜೈಲಿಗೆ ಕಳುಹಿಸಿದ ಆರೋಪದಲ್ಲಿ ಕಾಕೋಡ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅಮರ್‌ಸಿಂಗ್‌ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎಸ್‌ಎಸ್‌ ಶ್ಲೋಕ್ ಕುಮಾರ್ ಅವರ ಮಧ್ಯ ಪ್ರವೇಶದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಜೂನ್ 17ರಂದು ಭಾರತೀಯ

ದಂಡಸಂಹಿತೆಯ ಸೆಕ್ಷನ್‌ಗಳಾದ 153 ಎ (ಧರ್ಮದ ಮೇಲೆ ದಾಳಿ), 342 (ಅಪಹರಣ) ಹಾಗೂ 502 (ಕ್ರಿಮಿನಲ್ ಬೆದರಿಕೆ) ಅನ್ವಯ ಮೊಕದ್ದಮೆ ದಾಖಲಿಸಲಾಗಿದ್ದು ಆನಂತರ ಅವರನನ್ನು ಜೂನ್ 17ರಂದು ಬಂಧಿಸಲಾಯಿತು.

ಅಮಾಯಕ ಯುವಕ ಮುಹಮ್ಮದ್ ಸಾಹಿಲ್ ಖಾನ್ ಮೇಲೆ ನಡೆದ ಹಲ್ಲೆಯನ್ನು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್‌ ಉವೈಸಿ ಖಂಡಿಸಿದ್ದು, ಘಟನೆಯ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

* ದಿನಗೂಲಿ ಕಾರ್ಮಿಕನೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ ಹಾಗೂ ಬಲವಂತವಾಗಿ ಜೈಶ್ರೀರಾಮ್ ಘೋಷಣೆ ಕೂಗುವಂತೆ ಮಾಡಲಾಗಿದೆ. ಪೊಲೀಸರ ಪಕ್ಷಪಾತ ಎಷ್ಟಿದೆಯೆಂದರೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸಾಹಿಲ್‌ ನನ್ನು ಜೈಲಿಗೆ ಕಳುಹಿಸಲಾಗಿದೆ. ನಮ್ಮ ಮೇಲೆ ಎಸಗಲಾಗುವ ದೌರ್ಜನ್ಯಗಳಿಗೆ ದೂರು ನೀಡಲು ಯಾರ ಬಳಿ ನಾವು ಹೋಗಬೇಕು? ಎಂದವರು ಮಾರ್ಮಿಕವಾಗಿ ಪ್ರಶ್ನಿಸಿ ಟ್ವಿಟ್ ಮಾಡಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...