‘ಮುರುಡೇಶ್ವರ ಬೀನಾ ವೈದ್ಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ರಾಷ್ಟ್ರಮಟ್ಟಕ್ಕೆ ಆಯ್ಕೆ’

Source: so news | Published on 17th February 2020, 6:55 AM | Coastal News | Don't Miss |

 

ಭಟ್ಕಳ: ಮುರ್ಡೇಶ್ವರದ ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ಫೆಬ್ರವರಿ 14 ಮತ್ತು 15ರಂದು ಶ್ರೀ ಆದಿಚುಂಚನಗಿರಿ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಇನ್ ಸ್ಪೈರ ಅವಾರ್ಡ್ ಸ್ಫರ್ಧೆಯಲ್ಲಿ ಅಗ್ರೀ ರೋಬೋ ತಯಾರಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ.

ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ಈ ಆಗ್ರೀ ರೋಬೋವು ಡೀಸೆಲ್, ಪೆಟ್ರೋಲ್‍ನ ಅವಶ್ಯಕತೆ ಇಲ್ಲದೇ ಪರಿಸರ ಮಾಲಿನ್ಯ ರಹಿತವಾದ, ನಿಸರ್ಗದ ಸೌರಶಕ್ತಿಯನ್ನು ಬಳಸಿಕೊಂಡು ರಿಮೋಟ್ನ ಮೂಲಕ ಕಾರ್ಯನಿರ್ವಹಿಸುಬಹುದಾಗಿದೆ. ಇದನ್ನು ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾಗಿದೆ. ರೋಬೋವು ಒಂದೇ ಸಮಯದಲ್ಲಿ ಹೊಲವನ್ನು ಉಳುವ, ನೀರು ಹಾಯಿಸುವ ಹಾಗೂ ಬೀಜ ಬಿತ್ತುವ ಕೆಲಸವನ್ನು ಒಟ್ಟಿಗೆ ನಿರ್ವಯಿಸುವ ಮೂಲಕ ರೈತರ ಸಮಯ ಮತ್ತು ಮ್ಯಾನ್ ಪವರ್ ಕಡಿಮೆ ಮಾಡಿ ರೈತ ಸ್ನೇಹಿಯಾಗಿ ಕಾರ್ಯ ನಿರ್ವಯಿಸುವುದುದಾಗಿದೆ.

ಈ ಆಗ್ರೀ ರೋಬೋ ತಯಾರಿಕೆಯ ಸಾಧನೆಯಲ್ಲಿ ಶಿಕ್ಷಕರಾದ ಪದ್ಮ ಪೂಜಾರಿ ಹಾಗೂ ರಾಘವೇಂದ್ರ ನಾಯ್ಕ ಮಾರ್ಗದರ್ಶನ ನೀಡಿದ್ದಾರೆ.
ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಂಕಾಳ ಎಸ್. ವೈದ್ಯ ಹಾಗೂ ಪುಷ್ಪಲತಾ ವೈದ್ಯ, ಪ್ರಾಂಶುಪಾಲರಾದ ಜಗನಾಥ ಚಿನೇಕರ್ ಹಾಗೂ  ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...