ಮರಕಡಿದು ಸಾಗಿಸಿದ ಅರಣ್ಯಗಳ್ಳರು

Source: sonews | By Staff Correspondent | Published on 26th August 2019, 11:42 PM | Coastal News | Don't Miss |

ಮುಂಡಗೋಡ; ತಾಲೂಕಿನ ಗುಂಜಾವತಿ ಉಪ ವಲಯದ ಉಗ್ಗಿನಕೇರಿಅರಣ್ಯ ಪ್ರದೇಶದಲ್ಲಿ ಎರಡು ಬೃಹತ ಮರಗಳನ್ನು ಮರಗಳ್ಳರು  ಕಡಿದು ಒಂದು ಮರವನ್ನು ಸಾಗಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಾರ್ವಜನಿಕರು ಈ ಕುರಿತು ಮಾಹಿತಿಯನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅರಣ್ಯದಲ್ಲಿ  ಕಡಿಯಲಾದ ಮರಗಳನ್ನು ಹುಡುಕಿ ಪ್ರಕರಣವನ್ನು ದಾಖಲಸಿದ್ದಾರೆ

ಎರಡು ಬೃಹತ್ ಮರಗಳನ್ನು ಕಡಿದಿರುವ ಅರಣ್ಯಗಳ್ಳರು ಒಂದು ಮರವನ್ನು ತುಂಡುಮಾಡಿ ಸಾಗಿಸಿದ್ದಾರೆ. ಮರ ಕಡಿದಿರುವ ವಿಷಯ ಇಲಾಖೆಗೆ ಗೊತ್ತಾಗಿರಬಹುದು ಅರಣ್ಯ ಅಧಿಕಾರಿಗಳು ಬರುತ್ತಿರಬಹುದು ಎಂದು ಅಂದಾಜಿಸಿ ಅರಣ್ಯಗಳ್ಳರು ಇನ್ನೊಂದು ಮರವನ್ನು ಕಡಿದು ತುಂಡು ಮಾಡಿ ಬಿಟ್ಟುಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರು ಇಲಾಖೆಯ ಸಿಬ್ಬಂದಿಯ ಕೈವಾಡವಿದೆ ಎಂದು ಸಂಶಯವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ಸಿಬ್ಬಂದಿಗಳ ಮನೆಗಳಿಗೆ ಭೇಟಿನೀಡಿ ಪರಿಶೀಲಿಸಿದ್ದಾರೆ ಅಲ್ಲಿ ಯಾವುದೇ ಕುರುಹುಗಳು ಕಾಣದೆ ಇರುವುದರಿಂದ ವಾಪಸ್ಸಾಗಿದ್ದಾರೆ  ಎಂದು ಹೇಳಲಾಗುತ್ತಿದೆ 

ಈ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲು ಮಾಡಿಕೊಂಡು ಅರಣ್ಯಗಳ್ಳರು ಹಿಡಿಯಲು ಜಾಲವನ್ನು ಬೀಸಿದ್ದಾರೆ

ಮರಗಳನ್ನು ಕಡಿದು ಸಾಗಿಸಿದವರನ್ನು ಹಾಗೂ ಅಂತವರಿಗೆ ಸಹಾಯ ಮಾಡಿದ್ದ ಸಿಬ್ಬಂಧಿಗಳ ಕೈವಾಡವಿದ್ದರೆ ಅಂತವರ ವಿರುದ್ದ ಕೂಡಲೆ ಕ್ರಮ ಜರುಗಿಸುವುದು ಅವಶ್ಯಕವಾಗಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...