ಅದಾನಿಯ 4 ಕಂಪೆನಿಗಳ ಎಮ್‌ಎಸ್‌ಸಿಐ ಸೂಚ್ಯಂಕ ಮೌಲ್ಯ ಕಡಿತ

Source: Vb | By I.G. Bhatkali | Published on 11th February 2023, 5:14 PM | National News |

ಹೊಸದಿಲ್ಲಿ: ಅದಾನಿ ಗುಂಪಿನ ನಾಲ್ಕು ಕಂಪೆನಿಗಳ “ಫ್ರೀ ಫೋಟ್ ಸ್ಥಾನಮಾನವನ್ನು ಕಡಿತಗೊಳಿಸುವುದಾಗಿ ಅಮೆರಿಕದ ಜಾಗತಿಕ ಶೇರು ಸೂಚ್ಯಂಕ ನಿರ್ವಾಹಕ 'ಮಾರ್ಗನ್ ಸ್ಟಾಗ್ಲಿ ಕ್ಯಾಪಿಟಲ್ ಇಂಟರ್ ನ್ಯಾಶನಲ್' (ಎಮ್‌ಎಸ್‌ಐ) ಗುರುವಾರ ತಿಳಿಸಿದೆ.

“ಫ್ರೀ ಫ್ಲೋಟ್” ಅಂತರ್ ರಾಷ್ಟ್ರೀಯ ಹೂಡಿಕೆದಾರರಿಗೆ ಖರೀದಿಗಾಗಿ ಶೇರು ಮಾರುಕಟ್ಟೆಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಶೇರುಗಳ ಪ್ರಮಾಣ.

ಆದರೂ, ಅದಾನಿ ಗುಂಪಿನ ಕಂಪೆನಿಗಳ ಪರಿಶೀಲನೆ ಬಳಿಕ, ಅವುಗಳನ್ನು ಎಮ್ ಎಸ್‌ಸಿಐ ಸೂಚ್ಯಂಕಗಳಿಂದ ತೆಗೆದು ಹಾಕದಿರಲೂ ಎಮ್.ಎಸ್‌ಸಿಐ ನಿರ್ಧರಿಸಿದೆ.

ಎಮ್‌ಎಸ್‌ಐ ತನ್ನ ತ್ರೈಮಾಸಿಕ ಪರಿಶೀಲನೆಯ ಬಳಿಕ, ಅದಾನಿ ಗುಂಪಿನ ನಾಲ್ಕು ಶೇರುಗಳ “ಫ್ರೀ ಫ್ಲೋಟ್” ಸ್ಥಾನಮಾನವನ್ನು ಕಡಿತಗೊಳಿಸಿದೆ. ಎಮ್‌ಎಸ್ ಸಿಐ ಗ್ಲೋಬಲ್ ಸ್ಟಾಂಡರ್ಡ್ ಇಂಡೆಕ್ಸ್‌ನಲ್ಲಿ, ಅದಾನಿ ಗುಂಪಿನ ಮುಂಚೂಣಿ ಕಂಪೆನಿ ಅದಾನಿ ಎಂಟರ್‌ಪ್ರೈಸಸ್‌ನ ಮೌಲ್ಯ (ವೇಟಿಂಗ್)ವನ್ನು 0.3 ಶೇಕಡದಷ್ಟು ಕಡಿತಗೊಳಿಸಿ 0.5 ಶೇ.ಕ್ಕೆ ಇಳಿಸಲಾಗಿದೆ. 

ಆದಾನಿ ಟ್ರಾನ್ಸ್ಮಿಶನ್, ಅದಾನಿ ಟೋಟಲ್ ಗ್ಯಾಸ್ ಮತ್ತು ಎಸಿಸಿ ಲಿಮಿಟೆಡ್ ಕಂಪೆನಿಗಳ ಮೌಲ್ಯಗಳನ್ನೂ ಕಡಿತಗೊಳಿಸಲಾಗಿದೆ.

ಬಿಲಿಯಾಧೀಶ ಗೌತಮ್ ಅದಾನಿ ಒಡೆತನದ ಕಂಪೆನಿಗಳು ಶೇರು ಮಾರುಕಟ್ಟೆಗಳಲ್ಲಿ ಹಸ್ತಕ್ಷೇಪ ನಡೆಸಿ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿಕೊಂಡಿವೆ ಮತ್ತು ಕಂಪೆನಿಗಳು ತಪ್ಪು ಲೆಕ್ಕಗಳನ್ನು ಕೊಟ್ಟು ಹೂಡಿಕೆದಾರರನ್ನು ವಂಚಿಸುತ್ತಿವೆ ಎಂಬುದಾಗಿ ಅಮೆರಿಕದ ಹಿಂಡನ್ ಬರ್ಗ್ ರಿಸರ್ಚ್ ಆರೋಪಿಸಿದ ಬಳಿಕ ಗುಂಪಿನ ಕಂಪೆನಿಗಳ ಶೇರುಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...