ಸಂಸತ್ತಿನಲ್ಲಿ ಮಾತನಾಡದ ಸಂಸದರು; ಅನಂತ್ ಕುಮಾರ್ ಹೆಗಡೆ ಸೇರಿದಂತೆ ರಾಜ್ಯದ ೪ ಸಂಸದರು ಮೌನ

Source: SOnews | By Staff Correspondent | Published on 13th February 2024, 6:42 PM | Coastal News | National News |

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ 1,354 ಗಂಟೆಗಳ ಕಾಲ ಲೋಕಸಭಾ ಕಲಾಪಗಳು ನಡೆದಿದ್ದರೂ ಉ.ಕ.ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಕರ್ನಾಟಕದ ಬಿಜೆಪಿ  ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್, ಬಿ.ಎನ್.ಬಚ್ಚೇಗೌಡ ಹಾಗೂ ರಮೇಶ್ ಜಿಗಜಿಗಣಗಿ ಸೇರಿದಂತೆ ಒಟ್ಟು 9 ಮಂದಿ ಸಂಸದರು ಒಮ್ಮೆಯೂ ಲೋಕಸಭೆಯಲ್ಲಿ ಮಾತನಾಡಿಲ್ಲ ಅಥವಾ ಚರ್ಚೆಯಲ್ಲಿ ಭಾಗಿಯಾಗಿಲ್ಲ ಎಂದು deccanherald.com ವರದಿ ಮಾಡಿದೆ.

ಕರ್ನಾಟಕದ ನಾಲ್ವರು ಸಂಸದರೊಂದಿಗೆ ರಾಜಕಾರಣಿಯಾಗಿ ಬದಲಾಗಿರುವ ನಟ ಸನ್ನಿ ಡಿಯೋಲ್ ಹಾಗೂ ಶತ್ರುಘ್ನ ಸಿನ್ಹಾ, ಅತುಲ್ ರಾಯ್, ಪ್ರಧಾನ್ ಬರುವಾ ಮತ್ತು ದಿಬ್ಯೇಂದು ಅಧಿಕಾರಿ ಕೂಡಾ ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡಿಲ್ಲ ಎಂದು ಲೋಕಸಭಾ ಕಾರ್ಯಾಲಯದ ಮೂಲಗಳು ತಿಳಿಸಿವೆ.   ಈ ಒಂಬತ್ತು ಮಂದಿ ಸಂಸದರ ಪೈಕಿ ಮೂವರು ಸಂಸದರು ಯಾವುದೇ ಪ್ರಶ್ನೆಯನ್ನಾಗಲಿ ಅಥವಾ ವಾದವನ್ನಾಗಲಿ ಲೋಕಸಭೆಯಲ್ಲಿ ಮಂಡಿಸಿಲ್ಲ. ಉಳಿದ ಆರು ಸಂಸದರು ಮಾತ್ರ ಲೋಕಸಭೆಯಲ್ಲಿನ ಅವಕಾಶಗಳ ಪೈಕಿ ಕನಿಷ್ಠ ಒಂದು ಅವಕಾಶವನ್ನು ಬಳಸಿಕೊಂಡಿದ್ದಾರೆ.  ಸಂಸದ ರಮೇಶ್ ಜಿಗಜಿಗಣಗಿ ಯಾವುದೇ ಪ್ರಶ್ನೆಯನ್ನಾಗಲಿ ಅಥವಾ ವಾದವನ್ನಾಗಲಿ ಸದನದಲ್ಲಿ ಮಂಡಿಸಿಲ್ಲ. ಇದರೊಂದಿಗೆ ಲೋಕಸಭೆಯಲ್ಲಿ ಮಾತನ್ನೂ ಆಡಿಲ್ಲ. ಉಳಿದ ಮೂವರು ಕರ್ನಾಟಕದ ಸಂಸದರು ಲೋಕಸಭಾ ಚರ್ಚೆಯಲ್ಲಿ ಪಾಲ್ಗೊಳ್ಳದಿದ್ದರೂ, ಒಂದಲ್ಲ ಒಂದು ರೀತಿ ಸದನದ ಕಲಾಪಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ದಾಖಲೆಗಳನ್ನು ಉಲ್ಲೇಖಿಸಿ ಲೋಕಸಭಾ ಕಾರ್ಯಾಲಯದ ಮೂಲಗಳು ತಿಳಿಸಿವೆ.    

ರಮೇಶ್ ಜಿಗಜಿಗಣಗಿಯವರಂತೆಯೇ ತಮ್ಮ ಸಿನಿಮಾ ಸಂಭಾಷಣೆಯಿಂದ ಜನಪ್ರಿಯರಾಗಿರುವ ನಟ ಶತ್ರುಘ್ನ ಸಿನ್ಹಾ ಕೂಡಾ ಲೋಕಸಭಾ ಕಲಾಪಗಳಲ್ಲಿ ಯಾವುದೇ ವಿಧದಲ್ಲೂ ಪಾಲ್ಗೊಂಡಿಲ್ಲ. ಇವರೊಂದಿಗೆ ಅತುಲ್ ರಾಯ್ ಕೂಡಾ ಲೋಕಸಭೆಯಲ್ಲಿ ಇದುವರೆಗೆ ಯಾವುದೇ ಮಾತುಗಳನ್ನಾಡಿಲ್ಲ. ಅತುಲ್ ರಾಯ್ ತಮ್ಮ ಸಂಸತ್ ಸದಸ್ಯತ್ವದ ಅವಧಿಯುದ್ದಕ್ಕೂ ಜೈಲಿನಲ್ಲಿದ್ದರೆ, ಎಪ್ರಿಲ್ 2022ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶತ್ರುಘ್ನ ಸಿನ್ಹಾ ಲೋಕಸಭೆ ಪ್ರವೇಶಿಸಿದ್ದರು.  ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡದ ಒಂಬತ್ತು ಸಂಸದರ ಪೈಕಿ ಆರು ಮಂದಿ ಸಂಸದರು ಆಡಳಿತಾರೂಢ ಬಿಜೆಪಿಗೆ ಸೇರಿದ್ದರೆ, ಶತ್ರುಘ್ನ ಸಿನ್ಹಾ ಹಾಗೂ ದಿಬ್ಯೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಮತ್ತೊಬ್ಬ ಸಂಸದ ಅತುಲ್ ರಾಯ್ ಬಿಎಸ್‌ಪಿಗೆ ಸೇರಿದ್ದಾರೆ. ಆದರೆ, ದಿಬ್ಯೇಂದು ಅಧಿಕಾರಿಗೆ ತನ್ನ ತಂದೆ ಹಾಗೂ ಸಂಸದ ಶಿಶಿರ್ ಅಧಿಕಾರಿ ಮೂಲಕ ಬಿಜೆಪಿಯೊಂದಿಗೆ ಸಂಪರ್ಕವಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಪ್ರತಿಪಾದಿಸಿದೆ.

ಈ ಕುರಿತಂತೆ ಆಮ್ ಆದ್ಮಿ ಪಾರ್ಟಿ ಕರ್ನಾಟಕ ತನ್ನ ಫೇಸ್ಬುಕ್ ಫೋಸ್ಟ್ನಲ್ಲಿ 

ನೀವು ಶೂನ್ಯ ವೇಳೆ ಎಂಬುದನ್ನು ಕೇಳಿರುತ್ತೀರಿ .. ಶೂನ್ಯ ಸಾಧಕರನ್ನು ನೋಡಬೇಕಾದರೆ ಸಂಸದರಾಗಿರುವ ನಾಲ್ಕು ಜನ ದಂಡಪಿಂಡಗಳನ್ನು ನೋಡಿ ..

ರಾಜ್ಯದ ಜನರ ತೆರಿಗೆಯ ದುಡ್ಡು ವ್ಯರ್ಥ ಮಾಡಲೆಂದೇ ಇರುವ ನಾಲ್ಕೂ ಆಯೋಗ್ಯರನ್ನು ನೋಡಿಬಿಡಿ..

ಕಳೆದ ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಇವರು ಮಾತನಾಡಿರುವುದು ಶೂನ್ಯ .. ಹಾಗೆಂದು ಇವರು ಬಾಯಿ ಬಾರದ ಮೂಕ ಪ್ರಾಣಿಗಳೂ ಅಲ್ಲ.. ಸಂಸತ್ತಿನ ಹೊರಗೆ ಎಲ್ಲಿ ಇವರ ಮಾತಿಗೆ ಬೆಲೆಯೇ ಇಲ್ಲವೋ ಅಂತಹ ಜಾಗಗಳಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಆದರೆ ಕಳೆದ ಐದು ವರ್ಷಗಳಲ್ಲಿ ಒಮ್ಮೆಯೂ ಇವರಿಗೆ ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವ ಜನರ ಸಮಸ್ಯೆಗಳ ಕುರಿತಾಗಿ ಮಾತನಾಡಬೇಕು ಎಂದು ಅನ್ನಿಸಿಯೇ ಇಲ್ಲ.. ಇವರ ಕ್ಷೇತ್ರಗಳೇನು ಸರ್ವಾಂಗೀಣ ಅಭಿವೃದ್ಧಿ ಕಂಡಿದೆಯೇ ? ಇವರ ಲೋಕಸಭಾ ಕ್ಷೇತ್ರಗಳು ಅತ್ಯಂತ ಹಿಂದುಳಿದ ಕ್ಷೇತ್ರಗಳು.. ಆರಿಸಿ ಕಳುಹಿಸಿರುವ ಜನರ ಕೆಲಸವನ್ನೂ ಮಾಡದೇ, ಜನರ ಪರವಾಗಿ ದನಿಯೂ ಆಗದೇ ಶುದ್ಧ ದಂಡಪಿಂಡಗಳಾಗಿ ಕೂತಿರುವ ಅಯೋಗ್ಯರ ಆಯ್ಕೆ ಅಗತ್ಯವಿದೆಯೇ ? ಇದು ಜನರು ಚಿಂತಿಸಬೇಕಾದ ವಿಷಯ ! ಎಂದು ಬರೆದುಕೊಂಡಿದೆ. 

 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...