ಗುರುವಾರ 120 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಉ.ಕ ಜಿಲ್ಲೆಯಲ್ಲಿ 2000 ಕ್ಕೂ ಅಧಿಕ ಸೋಂಕಿತರು

Source: sonews | By Staff Correspondent | Published on 30th July 2020, 6:22 PM | Coastal News | Don't Miss |

ಕಾರವಾರ: ಜಿಲ್ಲೆಯಲ್ಲಿ ಗುರುವಾರ 120 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 51 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕಾರವಾರ, ಅಂಕೋಲಾದಲ್ಲಿ ತಲಾ 11, ಕುಮಟಾದಲ್ಲಿ 18, ಹೊನ್ನಾವರದಲ್ಲಿ 9, ಭಟ್ಕಳದಲ್ಲಿ 13, ಮುಂಡಗೋಡದಲ್ಲಿ 26, ಹಳಿಯಾಳದಲ್ಲಿ 28 ಹಾಗೂ ಜೊಯಿಡಾದಲ್ಲಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.

ಕಾರವಾರದಲ್ಲಿ ಐವರು, ಅಂಕೋಲಾ, ಮುಂಡಗೋಡದಲ್ಲಿ ತಲಾ ಒಂಬತ್ತು, ಕುಮಟಾ, ಶಿರಸಿಯಲ್ಲಿ ತಲಾ ನಾಲ್ವರು, ಹೊನ್ನಾವರದಲ್ಲಿ ಓರ್ವ, ಸಿದ್ದಾಪುರದಲ್ಲಿ ಇಬ್ಬರು, ಹಳಿಯಾಳದಲ್ಲಿ 17 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಈವರೆಗೆ ಜಿಲ್ಲೆಯ 2,027 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,268 ಮಂದಿ ಗುಣಮುಖರಾಗಿದ್ದಾರೆ. 22 ಮಂದಿ ಸಾವನ್ನಪ್ಪಿದ್ದು, 663 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದ್ದು, 74 ಸೋಂಕಿತರಿಗೆ ಹೋಮ್ ಐಸೋಲೇಶನ್ ನಲ್ಲಿಡಲಾಗಿದೆ.
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...