ಮೋದಿ ಸರಕಾರದ ಲೋಪಗಳು ಪುಲ್ವಾಮಾ ದಾಳಿಗೆ ಕಾರಣ; ಸತ್ಯಪಾಲ್ ಮಲಿಕ್ ಆರೋಪ

Source: Vb | By I.G. Bhatkali | Published on 22nd September 2023, 10:17 PM | National News |

ಹೊಸದಿಲ್ಲಿ: ನಲ್ವತ್ತು ಸಿಆರ್‌ಪಿಎಫ್‌ ಯೋಧರ ಸಾವಿಗೆ ಕಾರಣವಾಗಿದ್ದ 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಕುರಿತು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿ ಯಡಿ ತನಿಖೆಗೆ ಆಗ್ರಹಿಸಿರುವ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, ಆ ವರ್ಷ ನಡೆದ ಚುನಾವಣೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಈ ಸಾವುಗಳನ್ನು ರಾಜಕೀಯಗೊಳಿಸಿದ್ದರು ಎಂದು ಆರೋಪಿಸಿದ್ದಾರೆ.

ಬುಧವಾರ ಇಲ್ಲಿ ಪ್ರೆಸ್‌ ಕ್ಲಬ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಆರ್‌ ಪಿಎಫ್ ಯೋಧರ ಹತ್ಯೆಗಳ ಕುರಿತು ಮೋದಿ ಸರಕಾರದ ಮೌನವನ್ನು ಪ್ರಸ್ತಾವಿಸಿದರು.

ಜಮ್ಮು-ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಮಲಿಕ್ ಪುಲ್ವಾಮಾ ದಾಳಿ ನಡೆದಾಗ ಅಧಿಕಾರದಲ್ಲಿದ್ದರು. 'ಪುಲ್ವಾಮಾ ಭಯೋತ್ಪಾದಕ ದಾಳಿಯ ಕುರಿತು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಡಿ ತನಿಖೆಗೆ ನಾನು ಆಗ್ರಹಿಸುತ್ತೇನೆ. ಈವರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರ ದುರಂತದ ಬಗ್ಗೆ ಗಾಢ ಮೌನವನ್ನು ಕಾಯ್ದುಕೊಂಡಿವೆ ಮತ್ತು ಹತ್ಯೆಗಳಿಗೆ ಕಾರಣವಾಗಿದ್ದ ಎದ್ದುಕಾಣುವ ಲೋಪಗಳ ಹೊಣೆಯನ್ನು ಹೊರಲು ವಿಫಲಗೊಂಡಿವೆ ಎಂದು ಮಲಿಕ್ ಹೇಳಿದರು.

ಪುಲ್ವಾಮಾ ದಾಳಿಯಲ್ಲಿ ಸರಕಾರದ ಉತ್ತರದಾಯಿತ್ವದ ಬಗ್ಗೆ ಮಲಿಕ್ ಹಿಂದೆಯೂ ಮಾತನಾಡಿದ್ದರು.

ಕಾರ್ಯಕ್ರಮದಲ್ಲಿ ತನ್ನ ನಿಲುವನ್ನು ಇನ್ನಷ್ಟು ಸ್ಪಷ್ಟಪಡಿಸಿದ ಮಲಿಕ್,ಮೋದಿಯವರು ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ 40 ಸಿಆರ್‌ಪಿಎಫ್ ಯೋಧರ ಸಾವುಗಳು ಮತ್ತು ಬಾಲಾಕೋಟ್‌ನಲ್ಲಿ ಭಾರತೀಯ ವಾಯುಪಡೆಯ ದಾಳಿಗಳನ್ನು ರಾಜಕೀಯಗೊಳಿಸಿದ್ದರು. ಬಾಲಾಕೋಟ್‌ನಲ್ಲಿ ವಾಯುದಾಳಿಯನ್ನು ನಡೆಸಿದ್ದ ವೀರ ಯೋಧರಿಗೆ ತಮ್ಮ ಮತಗಳನ್ನು ಸಮರ್ಪಿಸುವಂತೆಯೂ ಅವರು ಮೊದಲ ಬಾರಿಯ ಮತದಾರರನ್ನು ಕೋರಿಕೊಂಡಿದ್ದರು ಎಂದು ಹೇಳಿದರು.

ದಾಳಿಯ ಬಳಿಕ ನಾಲ್ಕು ವರ್ಷಗಳೇ ಕಳೆದಿವೆ,ಆದರೆ ಉತ್ತರದಾಯಿತ್ವವನ್ನು ನಿಗದಿಗೊಳಿಸುವಲ್ಲಿ ಮೋದಿ ಸರಕಾರವು ವಿಫಲಗೊಂಡಿದೆ. ಚುನಾವಣೆಗಳಲ್ಲಿ ಗೆಲ್ಲುವುದು ಅವರ ಏಕೈಕ ಆದ್ಯತೆಯಾಗಿದೆ. ಈ ಸಲವೂ ಲೋಕಸಭಾ ಚುನಾವಣೆಗೆ ಮುನ್ನ ಇಂತಹುದೇ ದಾಳಿಗಳು ಸಂಭವಿಸಬಹುದು,ಈ ದೇಶದ ಜನರು ಎಚ್ಚರಿಕೆಯಿಂದಿರುವ ಅಗತ್ಯವಿದೆ ಎಂದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...