ಉಳ್ಳಾಲದಲ್ಲಿ ಪಬ್ ಜಿ ಆಟಕ್ಕೆ ಬಾಲಕ ಬಲಿ. ಸ್ಥಳೀಯರ ಆತಂಕ

Source: SO News | By Laxmi Tanaya | Published on 4th April 2021, 12:44 PM | Coastal News |

ಮಂಗಳೂರು  : ಪಬ್ ಜಿ ಆಡಲೆಂದು ಮನೆಯಿಂದ ಹೊರ ಹೋಗಿದ್ದ  ಹನ್ನೆರಡು ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. 

ಉಳ್ಳಾಲ ಠಾಣಾ ವ್ಯಾಪ್ತಿಯ ಕೆ ಸಿ ರೋಡ್ ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ . ಕೆ ಸಿ ರೋಡ್ ನಿವಾಸಿ ಮೊಹಮ್ಮದ್ ಹನೀಫ್ ಎಂಬವರ ಮಗ ಅಕೀಫ್  (12) ಮೃತ ಬಾಲಕ  . 

ಶನಿವಾರ ರಾತ್ರಿ 9ಗಂಟೆ ಸುಮಾರಿಗೆ ಪಬ್ ಜಿ ಆಡಲೆಂದು ಮನೆಯಿಂದ ಹೊರಗೆ ಹೋಗಿದ್ದ ಆದರೆ ಹತ್ತು ಗಂಟೆಯಾದರೂ ಮನೆಗೆ ಬಂದಿಲ್ಲವೆಂದು ಮನೆ ಮನೆಯವರು ಹುಡುಕಾಡಿದ್ದು ಬಾಲಕ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಮನೆಯಿಂದ ಐನೂರು ಮೀಟರ್ ದೂರವಿರುವ ಹುಡುಗ ಶಾಲೆ ಕಲಿಯುತ್ತಿದ್ದ ಫಲಾಹ್ ಸ್ಕೂಲಿನ ಮೈದಾನ ಮೂಲೆಯಲ್ಲಿ ಶವ ಪತ್ತೆಯಾಗಿದೆ.

 ಬಾಲಕನ ಮುಖಕ್ಕೆ ಪೆಟ್ಟು ಬಿದ್ದು ಜಜ್ಜಿದ ಸ್ಥಿತಿಯಲ್ಲಿ ಕಂಡುಬಂದಿದೆ. ಯಾರೋ ತಲೆಯ ಭಾಗಕ್ಕೆ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ತೆರಳಿದ್ದು ಪರಿಶೀಲನೆ ನಡೆಸಿ ಆಘಾತ ವ್ಯಕ್ತಪಡಿಸಿದ್ದಾರೆ .

 ಗೆಳೆಯರ ಜೊತೆ ಹುಡುಗ ಪಬ್ ಜಿ ಆಡುತ್ತಿದ್ದ ಎಂದು ಮನೆಯವರು ತಿಳಿಸಿದ್ದಾರೆ. ತಂದೆ ಮಹಮ್ಮದ್ ಅನಿಫ್ ಸ್ಥಳಿಯ ಪ್ರದೀಪ್ ಎನ್ನುವ ಹುಡುಗನ ಜೊತೆ ಆಟವಾಡುತ್ತಿದ್ದ ಆತನ ಬಗ್ಗೆ ಸಂಶಯ ಇರುವುದಾಗಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಆಕಿಫ್ ಪಬ್ ಜಿ ಆಟ ಆಡುತ್ತಿದ್ದನೇ   ಅಥವಾ ಮಾರಣಾಂತಿಕ ಬ್ಲೂವೇಲ್ ಚಾಲೆಂಜ್ ಆಡುತ್ತಿದ್ದನೇ ಎನ್ನುವ ಬಗ್ಗೆ ತಿಳಿದಿಲ್ಲ ಮನೆಯವರು ಪಬ್ ಜಿ ಆಟದ ಬಗ್ಗೆ ಹೇಳಿದ್ದಾರೆ . 

ಬ್ಲೂವೇಲ್ ಚಾಲೆಂಜಿಂಗ್ ಗೇಮ್ ಗೆಳೆಯರು ಮತ್ತು ಕಮಾಂಡಿಂಗ್ ನಡುವೆ ಆಡುವ ಆಟವಾಗಿದ್ದು ಅದರಲ್ಲಿ  ತೊಡಗಿದ್ದಾರೆಯೇ ಅನ್ನೋದು ಗೊತ್ತಾಗಲಿಲ್ಲ. ಬಾಲಕ ಮೈದಾನ ಕಾಂಪೌಂಡ್ ಗೋಡೆಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆಕ್ರೋಶ ಉದ್ವಿಗ್ನ ಭಾವ ಮೂಡಿಸಿದೆ.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...