ಕಲಬುರಗಿ:ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರಿಂದ ಜನಸ್ಪಂದನ ಕಾರ್ಯಕ್ರಮ

Source: S.O. News Service | By MV Bhatkal | Published on 3rd July 2019, 3:30 PM | State News | Don't Miss |

ಕಲಬುರಗಿ: ಪಾಲಿಕೆಯ ಇಂದಿರಾ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ನಡೆಸಿದ ಸಾರ್ವಜನಿಕರ ಜನಸ್ಪಂದನ ಕಾರ್ಯಕ್ರಮ, ಕಲಬುರಗಿ ಮಹಾನಗರದ ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತು. ಪ್ರಮುಖವಾಗಿ ರಸ್ತೆ, ಕುಡಿಯುವ ನೀರು, ಚರಂಡಿ ಅವ್ಯವಸ್ಥೆ ಮುಂತಾದವುಗಳ ಬಗ್ಗೆಯೇ ಸಾರ್ವಜನಿಕರು ಹೆಚ್ಚಾಗಿ ಅಹವಾಲು ಹಿಡಿದು ತಂದಿದ್ರು. 
ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಮತ್ತು ಸಮಾಜ ಕಲ್ಯಾಣ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಸವಧಾನದಿಂದ ಎಲ್ಲಾ ಸಮಸ್ಯೆಗಳ ಆಲಿಸಿ ಪರಿಹರಿಸುವ ಭರವಸೆ ನೀಡಿದರು. 
ಪ್ರಮುಖವಾಗಿ ಗಮನ ಸೆಳೆದಿದ್ದು, ಚಂದ್ರಶೇಖರ್ ಹಿರೇಮಠ ಅವರು ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಮಂಡಳಿಯ ಹೊರಗುತ್ತಿಗೆ ನËಕರÀರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಅಹವಾಲು ಹೇಳಿಕೊಂಡರು. ಈ ಸಂದರ್ಭದಲ್ಲಿ ಸಚಿವ ಖಾದರ್ ಅವರು, ಯಾಕೆ ವೇತನ ನೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಇಂಜಿನಿಯರ್ ಅವರು, 4-5 ತಿಂಗಳ ವೇತನ ಮಾತ್ರ ಬಾಕಿ ಉಳಿದಿದೆ. ತೆರಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಈ ಸಮಸ್ಯೆಯಾಗಿದೆ ಎಂದು ಸಭೆ ಗಮನಕ್ಕೆ ತಂದರು.
ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು, ಹಣ ಸಂಗ್ರಹವಾಗಿಲ್ಲ ಅಂತ ಯಾಕೆ ಈ ನೌಕರರಿಗೆ ಶಿಕ್ಷೆ. ಯಾರು ಹಣ ಸಂಗ್ರಹಿಸುತ್ತಿಲ್ಲವೋ ಅವರ ಸಂಬಳ ತಡೆ ಹಿಡಿಯಿರಿ ಎಂದು ಸೂಚಿಸಿದರು. ಜೊತೆಗೆ ಈ ನೌಕರರು ರಾತ್ರಿಯೆಲ್ಲಾ ಕೆಲಸ ಮಾಡುತ್ತಿದ್ದು, ಭದ್ರತೆ ಇಲ್ಲ. ಯಾವುದೇ ಗುರುತಿನ ಚೀಟಿ ನೀಡಿಲ್ಲ. ಇಎಸ್‍ಎ ಸೌಲಭ್ಯ ಕೂಡ ಇಲ್ಲ ಎಂದು ಗರಂ ಆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಖಾದರ್ ಅವರು ಮುಂದಿನ ಒಂದು ವಾರದೊಳಗೆ ಸಂಬಳ, ಗುರುತಿನ ಚೀಟಿ ಇನ್ನಿತರ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇನ್ನು ಜಲ ಮಂಡಳಿಗೆ ವಾಟರ್ ವಾಲ್ವ್ ಸರಬರಾಜು ಮಾಡಿ 2 ವರ್ಷವಾದರೂ, ನಮಗೆ ಬಿಲ್ ಅಗಿಲ್ಲ ಎಂದು ಗುತ್ತಿಗೆದಾರರೊಬ್ಬರು ಗೋಳು ತೋಡಿಕೊಂಡರು.
ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು, ಗುತ್ತಿಗೆದಾರರ ಬಿಲ್ ಬಾಕಿ ಸಂಬಂಧ ಆಯಾ ಇಲಾಖೆಗಳು ಬಾಕಿ ಇರುವ ಪ್ರಕರಣಗಳನ್ನು ಕಲಾನುಕ್ರಮಾಂಕದಲ್ಲಿ ಪಟ್ಟಿ ಮಾಡಿ ವರದಿ ನೀಡಬೇಕು ಎಂದು ಸೂಚಿಸಿದರು.
ಮಂಜುನಾಥ್ ಎಂಬುವರು ಕಲಬುರಗಿ ಮಹಾನಗರದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸಬೇಕು ಹಾಗೂ ನಗರದ ಪ್ರಮುಖ ಸ್ಥಳದಲ್ಲಿ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ. ಈ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.
ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಸಂಬಂಧ 750 ಕೋಟಿ ರೂ.ಗಳ ಅನುದಾನದಲ್ಲಿ 3 ತಿಂಗಳಲ್ಲಿ ಯೋಜನೆ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಗರಾಭಿವೃದ್ಧಿ ಸಚಿವರು, ನಗರದ ಜಗತ್ ಸರ್ಕಲ್ ಬಳಿ ಇರುವ ಶೌಚಾಲಯ ಸೇರಿದಂತೆ ಎಲ್ಲವನ್ನು ಬೀಗ ತೆಗೆದು ಕೂಡಲೇ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು. ಅದೇ ರೀತಿ ಸ್ಲಂ ಪ್ರದೇಶಗಳ ನೀರು ಪೂರೈಕೆಗೂ ಕ್ರಮ ಕೈಗೊಳ್ಳಬೇಕೆಂದು ಸಚಿವರು ಮನವಿಯೊಂದಕ್ಕೆ ತಿಳಿಸಿದರು. 
ಇದೇ ವೇಳೆ, ರಾಮಲಿಂಗಪ್ಪ ಎಂಬುವರು ತಂದೆಯ ಹೆಸರಿನಲ್ಲಿರುವ ಅಸ್ತಿಯನ್ನು ಪರಭಾರೆ ಮಾಡಿಕೊಳ್ಳಲು ಮ್ಯೂಟೇಶನ್‍ಗಾಗಿ ಒಂದುವರೆ ವರ್ಷದಿಂದ ಅಲೆಯುತ್ತಿರುವ ದೂರಿನ ಬಗ್ಗೆ ಕೆಂಡಾಮಂಡಲರಾದ ಸಚಿವರು, ಸಂಬಂಧಪಟ್ಟ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ತುರ್ತಾಗಿ ಮ್ಯೂಟೇಶನ್ ಮಾಡಿಕೊಡುವಂತೆ ಅವರು ಸೂಚಿಸಿದರು.

ವಾರ್ಡ್ ನಂ 48ರಲ್ಲಿ ಕೊಳಚೆ ನೀರಿನ ಸಮಸ್ಯೆಯಿಂದಾಗಿ ಸೊಳ್ಳೆ ಜಾಸ್ತಿಯಾಗಿ ಡೆಂಗ್ಯೂ ಹರಡುವ ಭೀತಿ ಇದೆ ಎಂದು ನಾಗರಿಕರೊಬ್ಬರು ಅಹವಾಲು ಸಲ್ಲಿಸಿದ್ದರಿಂದ ಕೂಡಲೇ ಸರಿಪಡಿಸುವಂತೆ ಪರಿಸರ ಮತ್ತು ಆರೋಗ್ಯ ಪರಿವೀಕ್ಷಕರಿಗೆ ನಗರಾಭಿವೃದ್ಧಿ ಸಚಿವರು ಸೂಚಿಸಿದರು.
ಆಂಜನೇಯ ನಗರದಲ್ಲಿ 40 ಮನೆಗಳಿದ್ದು, ನೀರು ಪೂರೈಕೆಯ ಪೈಪ್‍ಲೈನ್ ಇಲ್ಲ ಎಂದು ಗೋಳು ತೋಡಿಕೊಂಡಾಗ, ತುರ್ತಾಗಿ ಎಲ್ಲಾ ಕಡೆ ಪೈಪ್‍ಲೈನ್ ವ್ಯವಸ್ಥೆ ಮಾಡಿ ನೀರು ಪೂರೈಕೆ ಮುಂದಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು ಇದೆಲ್ಲಾ ನನ್ನ ಗಮನಕ್ಕೆ ಬಂದಿದೆ. ಆದರೆ, ಅಧಿಕಾರಿಗಳು ಪಾಲಿಕೆ ಆಯುಕ್ತರ ಗಮನಕ್ಕೆ ಯಾಕೆ ತರುತ್ತಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ಶಾಸಕರುಗಳಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರ್, ಬಸವರಾಜ ಮುತ್ತಿಮೂಡ, ಕನೀಜ್ ಫಾತೀಮಾ, ಡಾ|| ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರುಗಳಾದ ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಹಾಗೂ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಬಿ. ಫೌಜಿಯಾ ತರನ್ನಮ್, ಮಹಾನಗರಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರರಾದ ಶಿವನಗೌಡ ಮುಂತಾದವರು ಹಾಜರಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...