ತಾಲೂಕು ಆಡಳಿತ ಸೌಧದ ಇಲಾಖಾವಾರು ಕಚೇರಿ ಭೇಟಿ ನೀಡಿದ ಪರಿಶೀಲನೆ ನಡೆಸಿದ ಸಚಿವ ಮಂಕಾಳ

Source: SO News | By MV Bhatkal | Published on 4th October 2023, 12:44 AM | Coastal News | Don't Miss |

ಭಟ್ಕಳ:ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಂದ ಮಂಗಳವಾರದಂದು ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲನ್ನ ಸ್ವೀಕಾರ ಸಭೆಯ ಪೂರ್ವದಲ್ಲಿ ಕುದ್ದು ಸಚಿವರು ಇಲಾಖಾವಾರು ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಳಿ ತೆರಳಿ ಕಡತಗಳ‌ ಪರಿಶೀಲನೆ ಕೈಗೊಂಡರು.

ಮಂಗಳವಾರದಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ತಾಲೂಕು ಆಡಳಿತ ಸೌಧದ ಭೂ ಮಾಪನ‌ ಇಲಾಖೆಗೆ ತೆರಳಿದ ಸಚಿವ ಮಂಕಾಳ ವೈದ್ಯ ಅವರು 7 ವರ್ಷದ ಅವಧಿಯ ಹಿಂದೆ ಪೋಡಿ ಮುಕ್ತ ಗ್ರಾಮದ ಯೋಜನೆಯ ಬಗ್ಗೆ ನನ್ನ ಅವಧಿಯಲ್ಲಿ ಎಷ್ಟು ಕೆಲಸಗಳು ನಡೆದಿವೆ ಎಂದು ಇಲಾಖೆಯ ಅಧಿಕಾರಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಯು ಗ್ರಾಮೀಣ ಭಾಗದಲ್ಲಿ ಎಲ್ಲವು ಮುಕ್ತಾಯವಾಗಿದೆ. ನಗರ ಭಾಗದಲ್ಲಿ ಪೋಡಿ ಮುಕ್ತ ಮಾಡಲು ಡ್ರೋನ್ ಮೂಲಕ ಸರ್ವೇಗೆ ಈಗಾಗಲೇ ಟೆಂಡರ ಕರೆಯಲಾಗಿದ್ದು ಯಾವುದೇ ಟೆಂಡರದಾರರು ಮುಂದೆ ಬಂದಿಲ್ಲವಾಗಿದೆ ಎಂದು ವಿವರಿಸಿದರು. ಅತೀ ಶೀಘ್ರದಲ್ಲಿ ಡ್ರೋನ್ ಮೂಲಕ ಸರ್ವೇ ಮಾಡಲು ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ನಂತರ ದಾಖಲಾತಿ ಕೊಠಡಿಗೆ ತೆರಳಿದ ಸಚಿವರು ಸಿಬ್ಬಂದಿಗಳ ಕೊರತೆಯಿದ್ದಲ್ಲಿ ಸರಕಾರದಿಂದ ಸಿಬ್ಬಂದಿಗಳ ನೇಮಕಾತಿ ಮಾಡಿಸಿ ಕೊಡುವ ಭರವಸೆ ನೀಡಿದ ಅವರು ಕಚೇರಿಯಲ್ಲಿ ಯಾವುದೇ ಕಡತ ವಿಲೇವಾರಿಗೆ ವಿಳಂಬ ಆಗಬಾರದು ಎಂದು ಸೂಚನೆ ನೀಡಿದರು. 

ಸಬ್ ರಿಜಿಸ್ಟರ್ ಕಛೇರಿಗೆ ತೆರಳಿ ಇಲಾಖೆಯ ಅಧಿಕಾರಿಗಳೊಂದಿಗೆ ನೋಂದಣಿಗೆ ಜನರಿಗೆ ನೀಡಲಾದ ಸಮಯದ ಅವಕಾಶ ಸಮರ್ಪಕವಾಗಿ ಇದೆಯಾ ಎಂಬ ಬಗ್ಗೆ ವಿಚಾರಿಸಿದ ಅವರು ಅದಕ್ಕೆ ಅಧಿಕಾರಿಯು ಜನರಿಗೆ ಸಮಸ್ಯೆಯಾಗದಂತೆ ನೋಂದಣಿ ಕೆಲಸ ಮಾಡಿಕೊಡುತ್ತಿದ್ದೇವೆ ಎಂದರು. ಹಾಗೂ ನಿಗದಿ ಮಾಡಿದ ದಿನದಂದು ಬರುವಂತೆ ನೋಂದಣಿ ಕಾರ್ಯಕ್ಕೆ ತಿಳಿಸುತ್ತಿದ್ದು ಇದರಿಂದ ಸರ್ವರಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರಿಗೆ ವಿವರಿಸಿದರು.

ನಂತರ ಕಂದಾಯ ಇಲಾಖೆಯ ಕಚೇರಿಗೆ ತೆರಳಿದ ಅವರು ಕೆಲವು ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡದೆ ತಮ್ಮ ಮೇಜಿನ ಮೇಲೆ ಕಡತಗಳನ್ನು ಗುಡ್ಡೆ ಹಾಕಿಕೊಂಡಿರುವುದನ್ನು ಗಮನಿಸಿದ ಸಚಿವರು, ಅಧಿಕಾರಿಗಳ ಮೇಲೆ ತೀಕ್ಷ್ಣವಾಗಿ ಹರಿಹಾಯ್ದು ಕಡತಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.  

ಈ ವೇಳೆ ಗ್ರಾಮ ಆಡಳಿತ ಅಧಿಕಾರಿ ಗಣೇಶ ಕುಲಾಲ ಅವರ ಟೇಬಲ್ ಮೇಲೆ ಇದ್ದ ಎಲ್ಲ ಕಡತಗಳ ಬಗ್ಗೆ ವಿಚಾರಿಸಿ ಇವೆಲ್ಲವು ಎಷ್ಟು ತಿಂಗಳಿನಿಂದ ವಿಲೇವಾರಿ ಆಗದೇ ಇಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು ಒಂದು ಕಡತ ವಿಲೇವಾರಿಗೆ ಎಷ್ಟು ದಿನದ ಅಗತ್ಯ ಇದೆ ಎಂದು ಕೇಳಿದರು. 
ಸಚಿವರ ಪ್ರಶ್ನೆಗೆ ಉತ್ತರಿಸಲಾಗದೇ ಅಧಿಕಾರಿ ಗಣೇಶ ಕುಲಾಲ ತಬ್ಬಿಬ್ಬಾದರು. ಅಂಗನವಾಡಿ ಕಟ್ಟಡಕ್ಕೆ ಸಂಬಂಧಿಸಿದ ಒಂದು ಕಡತ ಎರಡು ತಿಂಗಳಿನಿಂದ ಒಂದೇ ಟೇಬಲನಲ್ಲಿ ಇಟ್ಟುಕೊಂಡರೆ ಕಟ್ಟಡ ನಿರ್ಮಾಣ ಅಥವಾ ದುರಸ್ತಿಗೆ ಮಾಡಬೇಕಾದ ಕೆಲಸ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಸಚಿವರು ಈಗಾಗಲೇ ಟೇಬಲ ಮೇಲೆ‌ ಇರುವ ಎಲ್ಲಾ ಕಡತ ಕೇವಲ 10 ದಿನದಲ್ಲಿ ವಿಲೇವಾರಿಯಾಗಿ ಡಿಸಿ ಕಚೇರಿಯಲ್ಲಿ ಇರಬೇಕು ಮತ್ತು ಕಡತಗಳ ನಿರಂತರ ವಿಲೇವಾರಿಯ ಪರಿಶೀಲನೆ ಮಾಡುವಂತೆ ಸಹಾಯಕ ಆಯುಕ್ತೆ ಹಾಗೂ ತಹಸೀಲ್ದಾರ ಅವರಿಗೆ ಸೂಚನೆ ನೀಡಿದರು. 

ತಹಸೀಲ್ದಾರರ ಬೆವರಿಳಿಸಿದ ಸಚಿವ ಮಂಕಾಳ : 

ಮಂಗಳವಾರದಂದು ಕಂದಾಯ ಇಲಾಖೆಯ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕೆಲಸದ ಪರಿಶೀಲನೆಗೆ ತೆರಳಿದ ವೇಳೆ ಸಚಿವರಿಗೆ ಶಾಕ್ ಕಾದಿತ್ತು. ಕಾರಣ ಟೇಬಲ‌ ಮೇಲೆ‌ ರಾಶಿ ರಾಶಿ ವಿಲೇವಾರಿಯಾದ ಕಡತವಿತ್ತು. ಅವೆಲ್ಲವನ್ನೂ ಕುದ್ದು ಸಚಿವ ಮಂಕಾಳ ವೈದ್ಯ ಪರಿಶೀಲನೆ ನಡೆಸಿದರು. ಈ ವೇಳೆ ಸಹಾಯಕ ಆಯುಕ್ತೆ ನಯನಾ ಎನ್. ಹಾಗೂ ತಹಸೀಲ್ದಾರ ತಿಪ್ಪೇಸ್ವಾಮಿ ಸಹ ಜೊತೆಗಿದ್ದರು. 

ಕಂದಾಯ ಇಲಾಖೆಯಲ್ಲಿನ ಕಡತ ವಿಲೇವಾರಿಯಾಗದಿದ್ದಲ್ಲಿ ಅದಕ್ಕೆ ನೇರವಾಗಿ  ತಹಸೀಲ್ದಾರ ಹೊಣೆಗಾರರಾಗಲಿದ್ದಾರೆ. ನಿಮ್ಮ‌ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಮಗೆ ನಿಯಂತ್ರಣ ಇಲ್ಲ‌ ಎಂದಾದಲ್ಲಿ ನೀವು ಜನರಿಂದ ಹಣ ಪಡೆದುಕೊಳ್ಳುತ್ತಿದ್ದು ಅದನ್ನು ಸಚಿವರು ಪಡೆದುಕೊಳ್ಳುತ್ತಿದ್ದಾರೆಂದು ಜನರಲ್ಲಿ ತಪ್ಪು ಭಾವನೆ ಸ್ರಷ್ಟಿಯಾಗಲಿದೆ. ಅಥವಾ ಇನ್ನೊಂದು ಕಡೆಗೆ ತೆರಳಲು ಇಲ್ಲಿಂದ ಹಣ ಮಾಡುತ್ತಿದ್ದಾರೆಂಬ ಆರೋಪ ನಿಮ್ಮ ಮೇಲೆ ಬರಲಿದೆ ಈ ಬಗ್ಗೆ ನಿಮಗೆ ಲಕ್ಷ್ಯ ಇರಲಿ‌ ಎಂದು ತಹಸೀಲ್ದಾರ ತಿಪ್ಪೇಸ್ವಾಮಿ ಅವರನ್ನು ಸಚಿವ ಮಂಕಾಳ ವೈದ್ಯ ಬೆವರಿಳಿಸಿದರು. 

7 ವರ್ಷವಾದರು ಅಪೂರ್ಣ ಹುದ್ದೆ ವರ್ಗಾಯಿಸಿದ
ಭಟ್ಕಳದ ಭೂಮಿ‌ ಕೇಂದ್ರದ ಸಿಬ್ಬಂದಿ: 

ಭಟ್ಕಳ ಭೂಮಿ ಕೇಂದ್ರದಲ್ಲಿ ಕ್ಲಾರ್ಕ್ -ತುಳಸಿದಾಸ ದೇವಾಡಿಗ ಎಂಬುವವರು 7 ವರ್ಷದ ಹಿಂದೆ ಭಟ್ಕಳದಿಂದ ಅಂಕೋಲಾಗೆ ವರ್ಗಾವಣೆಗೊಂಡಿದ್ದು ಆ ಬಳಿಕ ಈಗ ಕುಮಟಾದಲ್ಲಿ ವರ್ಗಾವಣೆಗೊಂಡು ಕೆಲಸ ನಿರ್ವಹಿಸುತ್ತಿದ್ದು ಆದರೆ ಭಟ್ಕಳದ ಭೂಮಿ ಕೇಂದ್ರದ ಸಿಬ್ಬಂದಿ ತುಳಸಿದಾಸ ದೇವಾಡಿಗ ತಮ್ಮ ವರ್ಗಾವಣೆಯ ಸಮಯದಲ್ಲಿ, ಆ ನಂತರ ಬಂದ ಸಿಬ್ಬಂದಿಗೆ ಅಪೂರ್ಣ ಪ್ರಮಾಣದಲ್ಲಿ ಚಾರ್ಜ್ ಕೊಟ್ಟ ಹಿನ್ನೆಲೆಯಲ್ಲಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಅವರು ಸರಕಾರಿ ಕಚೇರಿ ಕೆಲಸ ಎಂದರೆ ನಿಮ್ಮ ಅಪ್ಪನ ಮನೆಯ ಕೆಲಸ ಎಂದುಕೊಂಡಿದ್ದೀಯಾ ? ನಿಮ್ಮ ಹುದ್ದೆಯ ಕೆಲಸವನ್ನು ತಕ್ಷಣವೇ ಭಟ್ಕಳದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಇನ್ನೊಬ್ಬರಿಗೆ ವರ್ಗಾಯಿಸುವಂತೆ ಖಡಕ ಆಗಿ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್. ಹಾಗೂ ತಹಸೀಲ್ದಾರ ತಿಪ್ಪೇಸ್ವಾಮಿ
ಇದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...