ಮಸೀದಿಗಳು ಸಾಮಾಜಿಕ, ಶೈಕ್ಷಣಿಕ ಕಾರ್ಯಗಳ ಕೇಂದ್ರಗಳಾಗಿವೆ-ಮೌಲಾನ ಇಕ್ಬಾಲ್ ನಾಯ್ತೆ

Source: sonews | By Staff Correspondent | Published on 26th September 2019, 11:14 PM | Coastal News | Don't Miss |

ಭಟ್ಕಳ: ಮಸೀದಿಗಳು ಕೇವಲ ಪ್ರಾರ್ಥನಾಲಯಗಳಾಗಿರದೆ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಿವೆ ಎಂದು ಮೌಲಾನ ಇಕ್ಬಾಲ್ ನಾಯ್ತೆ ಹೇಳಿದರು. 

ಅವರು ಗುರುವಾರ ಕುಮಟಾ ತಾಲೂಕಿನ ದೀವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ‘ಮಸ್ಜಿದ್ ಉಸ್ಮಾನಿಯಾ’ ವನ್ನು ಲೋಕಾರ್ಪಣೆಗೊಳ್ಳಿಸಿ ಮಾತನಾಡಿದರು. ಆಮಿಯತುಲ್ ಹುಫ್ಫಾಜ್ ಸಂಸ್ಥೆಯ ಅಧ್ಯಕ್ಷ ಮೌಲಾನ ನೇಅಮತುಲ್ಲಾ ಅಸ್ಕರಿ ಝಹರ್ ನಮಾಝ್ ನ ನೇತೃತ್ವ ವಹಿಸಿ ನಮಾಝ್ ನಿರ್ವಹಿಸಿದರು. 

ಮೌಲಾನ ಮುಹಮ್ಮದ್ ಯೂನೂಸ್ ನದ್ವಿ, ಹಾಫಿಝ್ ಅಬ್ದುಲ್ ಗನಿ, ಮೌಲಾನ ಹಿದಾಯತುಲ್ಲಾ ನದ್ವಿ, ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಮೌಲಾನ ಝಿಯಾವುರ್ರಹ್ಮಾನ್ ನದ್ವಿ, ಅಬ್ದುಲ್ ಮುನೀಮ್ ರುಕ್ನುದ್ದೀನ್ ಸೇರಿದಂತೆ ಕುಮಟಾ ತಾಲೂಕಿನ ವಿವಿಧ ಮಸೀದಿಗಳ ಮುಖಂಡರು ಭಾಗವಹಿಸಿದ್ದರು. 
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...