ಮಣಿಪುರ ಹಿಂಸೆ; ಗುಂಪಿನಿಂದ ಸಿಎಂ ಬಿರೇನ್ ನಿವಾಸಕ್ಕೆ ದಾಳಿ

Source: Vb | By I.G. Bhatkali | Published on 29th September 2023, 3:18 PM | National News |

ಇಂಫಾಲ: ಮಣಿಪುರದ ಇಂಫಾಲ ಪೂರ್ವದ ಹೈಂಗಾಗ್‌ನಲ್ಲಿರುವ ರಾಜ್ಯದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರ ಖಾಸಗಿ ನಿವಾಸಕ್ಕೆ ನೂರಾರು ಜನರಿದ್ದ ಗುಂಪೊಂದು ಗುರುವಾರ ರಾತ್ರಿ ದಾಳಿ ನಡೆಸಲು ಪ್ರಯತ್ನಿಸಿದೆ. ಆದರೆ, ಆ ಗುಂಪನ್ನು ಸುಮಾರು 100ರಿಂದ 150 ಮೀಟ‌ ಅಂತರದಲ್ಲಿ ತಡೆಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸಂದರ್ಭ ನಿವಾಸದಲ್ಲಿ ಯಾರೂ ಇರಲಿಲ್ಲ. ಸಿಂಗ್ ಇಂಫಾಲದ ಹೃದಯ ಭಾಗದಲ್ಲಿ ಅತ್ಯುತ್ತಮ ಭದ್ರತೆ ಇರುವ ಅಧಿಕೃತ ಬಂಗ್ಲೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಎರಡು ಗುಂಪಿನ ಜನರು ವಿಭಿನ್ನ ದಿಕ್ಕಿನಿಂದ ಸಿಂಗ್ ಅವರ ಪೂರ್ವಜರ ನಿವಾಸವನ್ನು ಸಮೀಪಿಸಿದರು. ಆದರೆ, ಅವರಿಗೆ ಭದ್ರತಾ ಪಡೆ ತಡೆ ಒಡ್ಡಿತು. ಗುಂಪನ್ನು ಚದುರಿಸಲು ಕ್ಷಿಪ್ರ ಕಾರ್ಯ ಪಡೆ ಹಾಗೂ ರಾಜ್ಯ ಪೊಲೀಸ್ ಸಿಬ್ಬಂದಿ ಹಲವು ಸುತ್ತು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರತಿಭಟನಾಕಾರರು ಇಂಫಾಲದಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷೆ ಅಧಿಕಾರಿಮಾಯುನ್ ಶಾರದಾ ದೇವಿ ಹಾಗೂ ಬಿಜೆಪಿ ಶಾಸಕ ಸೋರೈಸಮ್ ಕೆಬಿ ಅವರ ನಿವಾಸಗಳಿಗೆ ಕೂಡ ಮುತ್ತಿಗೆ ಹಾಕಲು ನಿರ್ಧರಿಸಿದ್ದರು ಎಂದು ಅವರು ಹೇಳಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...