ಮಣಿಪುರ ಹಿಂಸಾಚಾರ; 'ಮೈತೈ' ಜನರನ್ನು ರಕಿಸಿ; ಮಿಜೋರಾಮ್‌ಗೆ ಮಣಿಪುರ ಮುಖ್ಯಮಂತ್ರಿ ಮನವಿ

Source: Vb | By I.G. Bhatkali | Published on 21st June 2023, 1:15 AM | National News |

ಇಂಫಾಲ: ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರವಿವಾರ ಮಿಜೋರಾಮ್ ಮುಖ್ಯಮಂತ್ರಿ ರೋರಮ್ ತಂಗಾ ಜೊತೆಗೆ ಮಾತನಾಡಿ, ಮಿಜೋರಾಮ್‌ನಲ್ಲಿ ವಾಸಿಸುತ್ತಿರುವ ಮೈತೈ ಸಮುದಾಯದ ಜನರಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.

ಮಿಜೋರಾಮ್ ಮುಖ್ಯಮಂತ್ರಿಯೊಂದಿಗೆ ಫೋನ್‌ನಲ್ಲಿ ಮಾತನಾಡಿರುವ ಬಗ್ಗೆ ಮಣಿಪುರ ಮುಖ್ಯಮಂತ್ರಿ ಟ್ವಿಟ್ ಮಾಡಿದ್ದಾರೆ. ಆದರೆ, ಕುಕಿ ಸಮುದಾಯದ ಜನರಿಗೂ ರಕ್ಷಣೆ ನೀಡುವಂತೆ ತಾನು ಮನಿವಿ ಮಾಡಿದ್ದೇನೆಯೇ ಎನ್ನುವುದನ್ನು ಅವರು ತಿಳಿಸಿಲ್ಲ.

ಮಣಿಪುರದಲ್ಲಿ ಮೈತೈ ಮತ್ತು ಕುಕಿ ಬುಡಕಟ್ಟು ಜನರು ಸಂಘರ್ಷದಲ್ಲಿ ತೊಡಗಿದ್ದು, ರಾಜ್ಯವು ಮೇ 3ರಿಂದ ಹೊತ್ತಿ ಉರಿಯುತ್ತಿದೆ. ಹಿಂಸಾಚಾರದಲ್ಲಿ ಈವರೆಗೆ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಮತ್ತು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ. ಮಿಜೋರಾಮ್‌ನಲ್ಲಿ, ಮೈತೈ ಮತ್ತು ಕುಕಿ ಎರಡೂ ಸಮುದಾಯಗಳಿಗೆ ಸೇರಿದ ಜನರು ಸಾಕಷ್ಟು ಸಂಖ್ಯೆಯಲ್ಲಿ ಮಿಜೋರಾಮ್‌ನಲ್ಲಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭಗೊಂಡ ಬಳಿಕ, ಕುಕಿ ಸಮುದಾಯದ ಸುಮಾರು 10,000 ಜನರು ಮಿಜೋರಾಮ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಮಿಜೋರಾಮ್ ಮುಖ್ಯಮಂತ್ರಿ ಝರಾಮ್ ತಂಗ ರವಿವಾರ ಟ್ವಿಟ್ ಮಾಡಿ, ನನ್ನ ಸರಕಾರ, ಜನರು ಮತ್ತು ಸರಕಾರೇತರ ಸಂಘಟನೆಗಳು ಮೈತೈ ಜನರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂದು ಹೇಳಿದರು.

ಹಾಗಾಗಿ, ಮಿಜೋರಾಮ್‌ನಲ್ಲಿ ವಾಸಿಸುತ್ತಿರುವ ಮೈತೈ ಸಮು ದಾಯದ ಜನರ ಬಗ್ಗೆ, ಅವರು ಮಿಜೋರಾಮ್‌ನಲ್ಲಿ ಇರುವವರೆಗೂ ನೀವು ಯಾವುದೇ ಚಿಂತೆ ಮಾಡಬೇಕಾಗಿಲ್ಲ. ನಾವು ಅವರ ಸುರಕ್ಷತೆ ಮತ್ತು ಭದ್ರತೆಯನ್ನು ನೋಡಿಕೊಳ್ಳುತ್ತೇವೆ” ಎಂದು ಅವರು ಬರೆದಿದ್ದಾರೆ. ರವಿವಾರ ರಾತ್ರಿ ಹೊಸ ದಾಗಿ ನಡೆದ ಹಿಂಸಾಚಾರದಲ್ಲಿ, ಪಶ್ಚಿಮ ಇಂಫಾಲ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕ ರೊಬ್ಬರು ಗಾಯಗೊಂಡಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದಕ್ಕಾಗಿ ಪ್ರಧಾನಿ ಮೋದಿಯನ್ನು ಪ್ರತಿಪಕ್ಷಗಳು ಟೀಕಿಸಿವೆ.

ಬಿಜೆಪಿ ಶಾಸಕರು ದಿಲ್ಲಿಯಲ್ಲಿ: ಈ ನಡುವೆ, ಮಣಿಪುರದ ಮೈತೈ ಸಮುದಾಯಕ್ಕೆ ಸೇರಿದ ಡಝನ್‌ಗಟ್ಟಳೆ ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವುದಕ್ಕಾಗಿ ಕಳೆದ ಎರಡು ಮೂರು ದಿನಗಳಿಂದ ರಾಷ್ಟ್ರ ರಾಜಧಾನಿಗೆ ಹೋಗಿದ್ದಾರೆ. ಮಣಿಪುರ ಮುಖ್ಯಮಂತ್ರಿಯೂ ಈ ವಾರ ಹೊಸದಿಲ್ಲಿಗೆ ಹೋಗುವ ನಿರೀಕ್ಷೆಯಿದೆ.

ರಾಷ್ಟಪತಿ ಆಡಳಿತ ಹೇರುವಂತೆ ಮನವಿ: ಈ ನಡುವೆ, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಮಿಜೋರಾಮ್‌ನ ಏಕೈಕ ರಾಜ್ಯಸಭಾ ಸದಸ್ಯ ಹಾಗೂ ಆಡಳಿತಾರೂಢ ಮಿಝೇ ನ್ಯಾಶನಲ್ ಫ್ರೆಂಟ್‌ನ ಸದಸ್ಯ ಕೆ. ವನ್ತವೇನ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

“ಹಿಂಸಾಚಾರವು ಅತ್ಯಂತ ಸುದೀರ್ಘಾವಧಿಗೆ ಮುಂದುವರಿಯುತ್ತಿದೆ. ಬಿರೇನ್ ಸಿಂಗ್ ಸರಕಾರವನ್ನು ಕೆಳಗಿಳಿ ಸಲು ಇದೀಗ ಸರಿಯಾದ ಸಮಯ” ಎಂದು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು ಅಭಿಪ್ರಾಯಪಟ್ಟಿದ್ದಾರೆ. “ಕೇಂದ್ರ ಸರಕಾರವು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕು. ರಾಜ್ಯದ ಕಾನೂನು ಮತ್ತು ವ್ಯವಸ್ಥೆಯ ಉಸ್ತುವಾರಿ ಯನ್ನು ಕೇಂದ್ರೀಯ ಪಡೆಗಳು ವಹಿಸ ಬೇಕು” ಎಂದು ಅವರು ಹೇಳಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...