ದ.ಕ. ಜಿಲ್ಲೆಯಲ್ಲಿ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ಆರಂಭ

Source: Vb | By I.G. Bhatkali | Published on 14th August 2023, 10:42 AM | Coastal News | State News |

ಮಂಗಳೂರು: ಕ್ರಿಮಿನಲ್ ಪ್ರಕರಣಗಳ ಆರೋಪಿಗಳು ತಮ್ಮ ಪರ ವಾದಿಸಲು ವಕೀಲರನ್ನು ನೇಮಿಸಿಕೊಳ್ಳುವ ಸಲುವಾಗಿ 'ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್'ನ ನೆರವು ಪಡೆಯಬಹುದಾಗಿದ್ದು, ದ.ಕ. ಜಿಲ್ಲೆಯಲ್ಲಿ ಈ ಕೌನ್ಸಿಲ್ ಆರಂಭಗೊಂಡಿವೆ.

ವಕೀಲರನ್ನು ನೇಮಿಸಿಕೊಳ್ಳಲು ಆರ್ಥಿಕವಾಗಿ ಅಶಕ್ತರಾದವರಿಗೆ ಉಚಿತ ಕಾನೂನು ನೆರವು ನೀಡುವುದಕ್ಕಾಗಿ ಈ ಕೌನ್ಸಿಲ್ ಕಾರ್ಯಾಚರಿಸಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನು ಸೇವೆಗಳ ಪ್ರಾಧಿಕಾರದ ಅಂಗವಾಗಿ ಈ ಕೌನ್ಸಿಲ್ ಕಾರ್ಯನಿರ್ವಹಿಸುತ್ತಿದೆ. ದೂರುದಾರ (ಸಂತ್ರಸ್ತ) ಮತ್ತು ಆರೋಪಿಯು ಈ ಕೌನ್ಸಿಲ್‌ನ ನೆರವು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿವೆ.

ಆರೋಪಿಯ ಬಂಧನ ಪೂರ್ವ ಪ್ರಕ್ರಿಯೆಗಳಿಂದ ಅಪೀಲು ಹಂತದವರೆಗೂ ಈ ಕೌನ್ಸಿಲ್‌ನಲ್ಲಿ ಉಚಿತ ನೆರವು ಲಭ್ಯವಿದೆ. ಜಿಲ್ಲಾ ಮಟ್ಟದಲ್ಲಿ ಚೀಫ್ ಲೀಗಲ್ ಏಯ್ ಡಿಫೆನ್ಸ್ ಕೌನ್ಸಿಲ್, ಡೆಪ್ಯುಟಿ ಲೀಗಲ್ ಏಲ್ಡ್ ಡಿಫೆನ್ಸ್ ಕೌನ್ಸಿಲ್ ಮತ್ತು ಅಸಿಸ್ಟೆಂಟ್ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್‌ಗಳಿರುತ್ತಾರೆ.

ಭಿಕ್ಷುಕರು, ಮಹಿಳೆಯರು, ಮಕ್ಕಳು, ಮಾನಸಿಕ ಅಸ್ವಸ್ಥರು, ಪರಿಶಿಷ್ಟ ಜಾತಿ/ಪಂಗಡದವರು, ಕೈಗಾರಿಕಾ ದುರಂತದ ಸಂತ್ರಸ್ತರು, ಕಸ್ಟಡಿಯಲ್ಲಿರುವವರು, ಮಾನವ ಕಳ್ಳಸಾಗಣಿಕೆಗೆ ಒಳಗಾದವರು, ವಿಪತ್ತುಗಳಿಂದ ತೊಂದರೆಗೊಳಗಾದವರು, ವಾರ್ಷಿಕ 2 ಲಕ್ಷ ರೂ. ಗಳಿಗಿ ಂತ ಕಡಿಮೆ ಆದಾಯ ಹೊಂದಿರುವ ಹಿರಿಯ ನಾಗರಿಕರು, ತೃತೀಯ ಲಿಂಗಿಗಳು ಹಾಗೂ ವಾರ್ಷಿಕ 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಇತರ ಸಾರ್ವಜನಿಕರು ಕೂಡ ಕೌನ್ಸೆಲ್ ಮೂಲಕ ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈವರೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಕ್ರಿಮಿನಲ್ ಪ್ರಕರಣಗಳಲ್ಲಿ ಅಶಕ್ತರಿಗೆ ನೆರವು ಒದಗಿಸಲು ನ್ಯಾಯವಾದಿಗಳನ್ನು ನಿಯೋಜಿಸಲಾಗುತ್ತಿತ್ತು. ಇದನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಬೇಕು ಎಂಬ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಡಿಫೆನ್ಸ್ ಕೌನ್ಸಿಲ್ ಆರಂಭಿಸಲಾಗಿದೆ.

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...