ಬೋರ್ವೆಲ್ ಒಳಗೆ ಬಿದ್ದ ಕಾರ್ಮಿಕ : ನಿರಂತರ ಕಾರ್ಯಾಚರಣೆ

Source: so news | Published on 17th February 2020, 6:43 AM | Coastal News | Don't Miss |

 

ಕುಂದಾಪುರ; ಕಾಮಗಾರಿ ವೇಳೆ ಭೂಮಿ ಕುಸಿದ ಪರಿಣಾಮ ತೆರೆದ ಕೊಳವೆಯೊಳಗೆ ಕಾರ್ಮಿಕ ಬಿದ್ದು ಸಿಕ್ಕಿಹಾಕಿಕೊಂಡ ಘಟನೆ ಕುಂದಾಪುರ ತಾಲೂಕಿನ ಮರವಂತೆ ಎಂಬಲ್ಲಿ ನಡೆದಿದೆ. ಬೋರ್ ವೆಲ್ ಕೊಳೆಯೊಳಗೆ ಸಿಕ್ಕಿಹಾಕಿಕೊಂಡ ಯಕ್ತಿಯನ್ನು ಉಪ್ಪುಂದ ಫಿಶರೀಸ್ ಜನತಾ ಕಾಲೋನಿಯ ನಿವಾಸಿ ಸುಬ್ಬ ಖಾರ್ವಿ ಎಂಬುವರ ಪುತ್ರ ರೋಹಿತ್ ಖಾರ್ವಿ (35) ಎಂದು ತಿಳಿದು ಬಂದಿದೆ.

ಬೈಂದೂರು ತಾಲೂಕಿನ ಮರವಂತೆ ಎಂಬಲ್ಲಿ ಹ್ಯಾಂಡ್ ಪಂಪ್ ಬಳಸಲು ಕೊಳವೆ ಬಾವಿ ನಿರ್ಮಿಸಲಾಗುತ್ತಿತ್ತು. ಇದಕ್ಕಾಗಿ ಸಾಮಾನ್ಯ ಕೊಳವೆ ಬಾವಿಗಿಂತ ಸ್ವಲ್ಪ ಅಗಲವಾದ ಬಾವಿ ತೋಡಲಾಗುತ್ತಿತ್ತು. ಇದರ ಒಳಗೆ ಕೊಳವೆ ಅಳಡಿಸಲಾಗುತ್ತಿತ್ತು. ಇದೇ ಸಂದರ್ಭ ಮರವಂತೆಯಲ್ಲಿ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಕಾರ್ಮಿಕನಾಗಿದ್ದ ರೋಹಿತ್ ಖಾರ್ವಿ ಬೋರ್ ವೆಲ್ ಕೊರೆಯುವ ಸ್ಥಳಕ್ಕೆ ಬಂದಿದ್ದ ಎನ್ನಲಾಗಿದೆ. ದುರ್ದೈವವಶಾತ್ ಅದೇ ಸಂದರ್ಭ ಕೊಳವೆ ಬಾವಿಯ ಸುತ್ತಲಿನ ಜಾಗ ಕುಸಿದಿದೆ ಎನ್ನಲಾಗಿದ್ದು, ನಿಯಂತ್ರಣ ಕಳೆದಕೊಂಡ ರೋಹಿತ್ ಸುಮಾರು 15 ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ ಎಂದು ತಿಳೀದು ಬಂದಿದೆ. 

ತಕ್ಷಣ ಅಗ್ನಿಶಾಮಕದಳ, ವೈದ್ಯರು ಸ್ಥಳಕ್ಕೆ ಆಗಮಿಸಿದ್ದು, ರೋಹಿತ್ ಖಾರ್ವಿಯನ್ನು ಮೇಲೆತ್ತಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...