ಸಮಾಜಮುಖಿ ಕಾರ್ಯಗಳಲ್ಲಿ ಸಾಧನೆ ಮಾಡಿದ ಮುರ್ಡೇಶ್ವರ ಲಯನ್ಸ್ ಕ್ಲಬ್

Source: so news | By MV Bhatkal | Published on 18th June 2019, 10:37 PM | Coastal News | Don't Miss |

ಭಟ್ಕಳ:ಮುರ್ಡೇಶ್ವರ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೊಳಪಟ್ಟು ಸಮಾಜಮುಖಿ ಸೇವಾ ಕಾರ್ಯಮಾಡಿ ಯಶಸ್ವಿಯಾಗಿದೆ ಎಂದು ಬೆಂಗಳೂರಿನ 317ಎ ಎಲ್.ಸಿ.ಆಯ್ ಡಿಸ್ಟ್ರಿಕ್ಟ್ ಚೇರ್‍ಮನ್ ಅಶೋಕ್‍ಕುಮಾರ್ ಹೇಳಿದರು. 
ಅವರು ಮುರ್ಡೇಶ್ವರದ ಶ್ರೀ ವಿನಾಯಕ ರೆಸಿಡೆನ್ಸಿಯ ಸಭಾಂಗಣದಲ್ಲಿ ಕ್ಲಬ್‍ನ ನೂತನ ಪದಾಧಿಕಾರಿಗಳ  ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಮುರ್ಡೇಶ್ವರ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ರಾಮದಾಸ ಶೇಟ್, ಕಾರ್ಯದರ್ಶಿಗಳಾಗಿ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾಗಿ ಜಗದೀಶ ಜೈನ್‍ರವರಿಗೆ ಪ್ರಮಾಣವಚನ ಬೋಧಿಸಲಾಯಿತು.
ಪ್ರಥಮ ಉಪಾಧ್ಯಕ್ಷರಾಗಿ ಗೌರೀಶ ನಾಯ್ಕ, ದ್ವಿತೀಯ ಉಪಾಧ್ಯಕ್ಷರಾಗಿ ಬಸ್ತ್ಯಾಂವ್ ಡಿಕೋಸ್ತಾ, ಸದಸ್ಯತ್ವ ಅಭಿಯಾನ ಸಮಿತಿಯ ಅಧ್ಯಕ್ಷರಾಗಿ ಕಿರಣ ಮಾನಕಾಮೆ, ಕ್ಲಬ್ ಸಮನ್ವಯಾಧಿಕಾರಿಯಾಗಿ ನಾಗರಾಜ ಭಟ್, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಮಂಜುನಾಥ ದೇವಾಡಿಗ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಡಾ.ಹರಿಪ್ರಸಾದ ಕಿಣಿ, ಲಯನ್ ಟೇಮರ್ ಆಗಿ ಶಿವಾನಂದ ದೈಮನೆ, ಲಯನ್ ಟೇಲ್ ಟ್ವಿಸ್ಟರ್ ಆಗಿ ಕೃಷ್ಣ ಬಿ ಹೆಗಡೆ ನಿರ್ದೇಶಕರುಗಳಾಗಿ ಡಾ.ಮಂಜುನಾಥ ಶೆಟ್ಟಿ, ಡಾ.ವಾದಿರಾಜ ಭಟ್, ಸುಬ್ರಾಯ ನಾಯ್ಕ, ಮಂಜುನಾಥ ನಾಯ್ಕ, ವಿಶ್ವನಾಥ ಕಾಮತ, ದಯಾನಂದ ಮೆಣಸಿನಮನೆ, ತಿಲಕ್ ರಾವ್, ಕಿರಣ ಕಾಯ್ಕಿಣಿ, ವಿಶ್ವನಾಥ ಮಡಿವಾಳ, ನಮೃತಾ ರಾವ್, ಪೂರ್ಣಿಮಾ ಕರ್ಕಿಕರ್‍ರವರನ್ನು ನಿಯುಕ್ತಿಗೊಳಿಸಲಾಯಿತು.
ಮುಖ್ಯ ಅತಿಥಿಗಳಾದ ಗೋವಾದ ಎಮ್.ಜೆ.ಎಫ್ ಲಯನ್ ಮೋತಿಲಾಲ್ ವೆರ್ಣೇಕರ್‍ರವರು ಕ್ಲಬ್‍ಗೆ ಡಾ. ಮನೋಜ್ ಆಚಾರ್ಯ ಹಾಗೂ ಪಾಂಡುರಂಗ ಅಳ್ವೆಗದ್ದೆ ಎಂಬ ಇಬ್ಬರು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದರು. ನಿಕಟಪೂರ್ವ ಅಧ್ಯಕ್ಷರಾದ ನಾಗರಾಜ ಭಟ್‍ರವರು ನೂತನ ಅಧ್ಯಕ್ಷರಾದ ರಾಮದಾಸ ಶೇಟ್‍ರವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರು ಮಾತನಾಡಿ ಕ್ಲಬ್‍ನ ಎಲ್ಲಾ ಸದಸ್ಯರ ಸಹಯೋಗದೊಂದಿಗೆ ಹಲವಾರು ಸೇವಾ ಕಾರ್ಯಗಳೊಂದಿಗೆ ಸಮಾಜಮುಖಿ ಕೆಲಸ ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.
ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ ಲಯನ್ ವರ್ಷದ ಸಮಗ್ರ ವರದಿಯನ್ನು ಮಂಡಿಸಿದರು. ನಾಗರಾಜ ಭಟ್ ಸ್ವಾಗತಿಸಿದರು. ಕೋಶಾಧ್ಯಕ್ಷರಾದ ಜಗದೀಶ ಜೈನ್ ವಂದಿಸಿದರು. ಹಿರಿಯ ಲಯನ್ ಸದಸ್ಯಾದ ಎಮ್.ವಿ ಹೆಗಡೆ, ಕೆ.ಬಿ ಹೆಗಡೆ ಹಾಗೂ ಪೂರ್ಣಿಮಾ ಕರ್ಕಿಕರ್ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕಿಗೆ ಪಿಯುಸಿಯಲ್ಲಿ ಪ್ರಥಮ ಬಂದ ಅಪೇಕ್ಷಾ ಮುರ್ಡೇಶ್ವರ, ಚೈತ್ರಾ ಮಹಾಲೆ, ಈರಣ್ಣ ದೋಶಾಗೆರಾ, ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಬಂದ ಚೈತಾಲಿ ಮೊಗೇರ ಹಾಗೂ ಲಯನ್ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು.


   

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...