ಅದಾನಿ ಗುಂಪಿನಿಂದ ವಿವರಣೆ ಕೇಳುತ್ತೇವೆ: ಎಲ್‌ಐಸಿ

Source: Vb | By I.G. Bhatkali | Published on 11th February 2023, 4:03 PM | National News |

ಹೊಸದಿಲ್ಲಿ: ಅದಾನಿ ಗುಂಪಿನ ಶೇರುಗಳ ಕುಸಿತ ಮತ್ತು ಈ ಬಿಕ್ಕಟ್ಟನ್ನು ನಿಭಾಯಿಸಲು ಅದು ಹೊಂದಿರುವ ಯೋಜನೆಯ ಬಗ್ಗೆ ತಾನು ವಿವರಣೆ ಕೇಳುವುದಾಗಿ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಗುರುವಾರ ಹೇಳಿದೆ.

ಅದಾನಿ ಗುಂಪಿನ ಕಂಪೆನಿಗಳಲ್ಲಿ ಎಲ್ಐಸಿ ಹೊಂದಿರುವ ಶೇರುಗಳ ಪ್ರಮಾಣ 2020 ಸೆಪ್ಟೆಂಬರ್ ಬಳಿಕ 10 ಪಟ್ಟು ಹೆಚ್ಚಾಗಿದೆ. ಅದಾನಿ ಗುಂಪಿನ ಕಂಪೆನಿಗಳಲ್ಲಿ ಇಡೀ ವಿಮಾ ಉದ್ದಿಮೆ ಮಾಡಿರುವ ಹೂಡಿಕೆಗಳ ಪೈಕಿ 98 ಶೇಕಡಕ್ಕೂ ಅಧಿಕ ಸರಕಾರಿ ಒಡೆತನದ ಎಲ್‌ಐಸಿಯದ್ದೇ ಆಗಿದೆ.

ಅದಾನಿ ಗುಂಪು ಕೃತಕವಾಗಿ ಬೆಲೆ ಹೆಚ್ಚಿಸಲಾದ ತನ್ನ ಶೇರುಗಳನ್ನು ಅಡವಿಟ್ಟು ಅಗಾಧ ಪ್ರಮಾಣದ ಸಾಲಗಳನ್ನು ಪಡೆದುಕೊಂಡಿದೆ ಮತ್ತು ಅದು ತಪ್ಪು ಲೆಕ್ಕಗಳನ್ನು ಕೊಡುತ್ತಿದೆ ಎಂಬುದಾಗಿ ಜನವರಿ 24ರಂದು ಅಮೆರಿಕದ ಹಿಂಡನ್ ಬರ್ಗ್ ರಿಸರ್ಚ್ ಕಂಪೆನಿಯ ವರದಿಯೊ೦ದು ಆರೋಪಿಸಿದ ಬಳಿಕ ಗುಂಪಿನ ಶೇರುಗಳು ಅಗಾಧ ಪ್ರಮಾಣದಲ್ಲಿ ಕುಸಿದಿವೆ. ಅದು ಈವರೆಗೆ ತನ್ನ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 9 ಲಕ್ಷ ಕೋಟಿ ರೂ.ಯನ್ನು ಕಳೆದುಕೊಂಡಿದೆ ಎನ್ನಲಾಗಿದೆ.

ಎಲ್‌ಐಸಿಯು ಶೀಘ್ರದಲ್ಲೇ ಅದಾನಿ ಗುಂಪನ್ನು ಸಂಪರ್ಕಿಸುವುದು ಎಂದು ಅದರ ಅಧ್ಯಕ್ಷ ಎಮ್.ಆರ್. ಕುಮಾರ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

“ಶೇರು ಮಾರುಕಟ್ಟೆಯಲ್ಲಿ ಮತ್ತು ಅದಾನಿ ಗುಂಪಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಲು ಬಯಸುತ್ತೇವೆ. ಅವರು ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ತಿಳಿಯಲು ನಾವು ಶೀಘ್ರದಲ್ಲೇ ಅವರನ್ನು ಸಂಪರ್ಕಿಸುತ್ತೇವೆ” ಎಂದು ಅವರು ನುಡಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...