ಟಿಕ್‍ ಟಾಕ್‍ನಲ್ಲಿ ಸ್ಟಂಟ್ ವೇಳ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಕುಮಾರ್ ಸಾವು..!

Source: so news | By MV Bhatkal | Published on 23rd June 2019, 5:57 PM | State News | Don't Miss |

ಬೆಂಗಳೂರು:ಟಿಕ್‍ಟಾಕ್‍ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ತುಮಕೂರ ಯುವಕ ಕುಮಾರ್ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಕಳೆದ ಗುರುವಾರ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ ಟಿಕ್‍ಟಾಕ್‍ಗಾಗಿ ಸಿನಿಮಾ ರೀತಿಯ ಸ್ಟಂಟ್ ಮಾಡಲು ಹೋದ ಸಮಯದಲ್ಲಿ ನಡೆದ ಅವಘಡದಲ್ಲಿ ತನ್ನ ಕುತ್ತಿಗೆ ಮೂಳೆಯನ್ನು ಮುರಿದುಕೊಂಡಿದ್ದನು.
ಅಂದಿನಿಂದಲೂ ತುಮಕೂರಿನ ಸ್ಥಳೀಯ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಆರ್ಕೆಸ್ಟ್ರಾವೊಂದರಲ್ಲಿ ಡ್ಯಾನ್ಸರ್ ಕಂ ಸಿಂಗರ್ ಆಗಿರುವ ಕುಮಾರ್ ಎಂಬ ಯುವಕ ವಿಭಿನ್ನವಾಗಿ ಗಮನ ಸೆಳೆಯಲು ರಿವರ್ಸ್ ಜಂಪ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡಿದ್ದನು.
ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡುವಾಗ ಸಾಹಸದ ಬ್ಯಾಕ್ ಜಂಪ್ ಮಾಡಲು ಹೋದಾಗ ಕತ್ತು, ಬೆನ್ನು, ಕಾಳಿನ ಮೂಳೆಯನ್ನು ಮುರಿದುಕೊಂಡ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಟಿಕ್‍ಟಾಕ್‍ಗೆ ಬಹು ಆಕರ್ಷಿತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಾಡಿರುವ ವಿಡಿಯೋವನ್ನು ಹರಿಬಿಡುತ್ತಾರೆ.
ಈ ಭರದಲ್ಲಿ ವಿವಿಧ ರೀತಿಯ ಸಾಹಸಗಳನ್ನು ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಿರುವ ಪ್ರಕರಣಗಳು ದಿನದಿಂದ ದಿನ ಹೆಚ್ಚಾಗುತ್ತಿದೆ. ಕುಮಾರ್‍ನ ದುರಂತ ಅಂತ್ಯ ನೋಡಿಯಾದರೂ ಇಂತಹ ದುಸ್ಸಾಹಸಕ್ಕೆ ಯುವಪಡೆ ಕೈ ಹಾಕದಿರಲಿ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...