ಕದಂಬ ನೌಕಾ ನೆಲೆ ಅಧಿಕಾರಿಗಳಿಂದ ಸರ್ಕಾರಿ ಶಾಲೆ ನವೀಕರಣ

Source: sonews | By Staff Correspondent | Published on 28th March 2018, 6:03 PM | Coastal News | Don't Miss |

ಕಾರಾವಾರ: ಭಾರತೀಯ ನೌಕಾದಳ ಕದಂಬ ನೌಕಾ ನೆಲೆಯ ಅಧಿಕಾರಿಗಳು ಸಾಮಾಜಿಕ ಕಾರ್ಯಕ್ರಮದಡಿ ತಾಲ್ಲೂಕಿನ ಚಿತ್ತಾಕುಲ ದೇವಬಾಗ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ನವೀಕರಣಗೊಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಸಾಮಾಜಿಕ ಕಾರ್ಯಕ್ರಮದಡಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ನಿರ್ಮಿಸುವು ಉದ್ದೇಶದಿಂದ ನೌಕಾನೆಲೆ ಅಧಿಕಾರಿಗಳು ಶ್ರಮದಾನ ಕಾರ್ಯಕ್ರಮ ಮೂಲಕ ಶಾಲೆಯ ದುರಸ್ಥಿಯನ್ನು ಸರಿ ಪಡಿಸಿಸಲು ಸಹಕರಿಸಿದ್ದಾರೆ.

ಸುಮಾರು 2.9 ಲಕ್ಷ ಹಣವನ್ನು ಅಧಿಕಾರಿವರ್ಗ, ಸಿಬ್ಬಂದಿ, ಹಾಗೂ ಕುಟುಂಬಸ್ಥರ ಸಹಾಯದಿಂದ ಶಾಲೆಯ ಮೇಲ್ಚಾವಣೆ, ಕಂಪೌಂಡ, ಬಣ್ಣ, ಟ್ಯೂಬ್ ಲೈಟ್ , ಲೈಬ್ರರಿ, ನೀರಿನ ಟ್ಯಾಂಕ್ ಪ್ಯಾನ್, ಹೀಗೆ ಇತರ ಸಾಮಗಿಗಳನ್ನು ನೀಡುವುದರ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ನೌಕಾದಳದ ಎಡ್ಮೀರಲ್ ಜನರಲ್ ಕೆ.ಜಿ ಕುಮಾರ ಅವರು ಬುಧವಾರ ಶಾಲೆಗೆ ಭೇಟಿ ನೀಡಿದ ಬಳಿಕ ಸುದಿಗಾರರೊಂದಿಗೆ ಮಾತನಾಡಿ ಪ್ರತಿ ವರ್ಷದಂತೆ ಈ ಶಾಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೋಳ್ಳಲಾದ ಸಂದರ್ಭದಲ್ಲಿ  ಈ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಪಣ ತೊಟ್ಟು ಜನೆವರಿ 22 ರಂದು ನವೀಕರಣದ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ನೌಕಾ ನೆಲೆ ಅಧಿಕಾರಿಗಳು, ಸಿಬ್ಬಂಧಿ ವರ್ಗದವರು ಸ್ವತಃ ತಾವೇ ನಿಂತು ಶಾಲೆಯ ದುರಸ್ಥಿ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಇದು ನಮಗೆ ಹೆಮ್ಮೆ ಮತ್ತು ಹರ್ಷ ತರುವಂತಹ ವಿಷಯವಾಗಿದೆ ಎಂದು ಹೇಳಿದರು. 

ಶಾಲೆಯಯಲ್ಲಿ ಒಟ್ಟು 133 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಗೆ ನೀಡಿದ ಸೌಕರ್ಯ ಹಾಗೂ ಹೊಸ ರೂಪದಿಂದ  ಮಕ್ಕಳ ಭವಿಷ್ಯ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನೂಕೂಲಕರವಾಗಲಿದೆ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಸಾರ್ವಜನಿಲ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಕೆ ಪ್ರಕಾಶ ಸೇರಿದಂತೆ ನೌಕಾ ನೆಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.  

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...