ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ; ವಿವಿಧ ಕೋರ್ಸ್‌ಗಳ  ಪ್ರವೇಶಕ್ಕೆ ಅರ್ಜಿ ಆಹ್ವಾನ

Source: sonews | By Staff Correspondent | Published on 25th September 2018, 11:10 PM | Coastal News |

ಕಾರವಾರ: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯಕ್ಕೆ 2018-19ನೇ ಶೈಕ್ಷಣಿಕ ಸಾಲಿನಿಂದ  2022-23ನೇ ಸಾಲಿನವರೆಗೆ  ಯುಜಿಸಿಯಿಂದ ಮಾನ್ಯತೆ ದೊರೆತ್ತಿದ್ದು, ಪ್ರಸ್ತುತ ಸಾಲಿಗೆ ಬ.ಎ, ಬಿ.ಕಾಂ,ಬಿ.ಲಿಬ್, ಎಂ.ಎ ಕನ್ನಡ, ಇಂಗ್ಲೀಷ, ಹಿಂದಿ, ಉರ್ದು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಕಾಂ, ಎಂ.ಲಿಬ್.ಐ.ಎಸ್‍ಸ್ಸಿ ಮತ್ತು ಎಂ.ಎಸ್ಸಿ ಪರಿಸರ ವಿಜ್ಞಾನ ಕೋರ್ಸಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 200  ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ 1 ಕೋನೆಯ ದಿನವಾಗಿರುತ್ತದೆ.  

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆ ಶುಲ್ಕ ರೂ 300, ಕೌಶಲ್ಯಾಭಿವೃದ್ದಿ ತರಬೇತಿ ಶುಲ್ಕ ರೂ. 500 ಮತ್ತು ದಂಡ ಶುಲ್ಕ 200 ಸೇರಿ ಒಟ್ಟು 1000 ರೂ  ಮಾತ್ರ  ಪಾವತಿಸತಕ್ಕದ್ದು, ಹಾಗೂ ಬಿ.ಪಿ.ಎಲ್. ಕಾರ್ಡ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಬೋಧನಾ ಶುಲ್ಕದಲ್ಲಿ ಶೇ.25% ರಷ್ಟು ವಿನಾಯತಿಯನ್ನು  ಪಡೆಯಬಹುದಾಗಿರುತ್ತದೆ. 

ಭರ್ತಿ ಮಾಡಿದ ಅರ್ಜಿಯನ್ನು ಕ.ರಾ.ಮು.ವಿ ಕಾರವಾರ ಪ್ರಾದೇಶಿಕ ಕೇಂದ್ರದಲ್ಲಿ ಸಲ್ಲಿಸಿದರೆ ಸ್ಥಳದಲ್ಲಿಯೇ ಸಿದ್ದಪಾಠ ಹಾಗೂ ಗುರುತಿನ ಚೀಟಿಯನ್ನು ವಿತರಿಸುವ ಮೂಲಕ ಪ್ರವೇಶಾತಿಯನ್ನು ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಕರಾಮುವಿ ಪ್ರಾದೇಶಿಕ ಕೇಂದ್ರ ಮೊದಲನೆ ಮಹಡಿ ಯು.ಎಸ್.ಎಸ್.ಕೆ.ವಿ ಹಳೆ ಕಟ್ಟಡ ಸವಿತ ಹೋಟೇಲ್ ಹತ್ತಿರ ಕಾರವಾರ ಮೊ.ಸಂಖ್ಯೆ 9986458055, 8971618663 ಮತ್ತು 8660201362 ಸಂಪರ್ಕಿಸಬಹುದಾಗಿದೆ. 

 

ಸೆ.26 ರಂದು ತಾಲೂಕು ಮಟ್ಟದ ವೈದ್ಯಕೀಯ ಮೌಲ್ಯಾಂಕನ ಶಿಬಿರ 

ಕಾರವಾರ  :,ಜಿಲ್ಲಾ ಪಂಚಾಯತ , ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾರವಾರ  ಇವರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಕಾರವಾರ ಗುರುಭವನದಲ್ಲಿ ಕಾರವಾರ ತಾಲೂಕು ಮಟ್ಟದ ವೈದ್ಯಕೀಯ ಮೌಲ್ಯಾಂಕ ಶಿಬಿರ ಉದ್ಘಾಟನಾ ಸಮಾರಂಭ ನಡೆಯಲಿದೆ.

ಶಾಸಕಿ ರೂಪಾಲಿ ಎಸ್.ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಎಸ್. ನಾಯ್ಕ ಅದ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ ಸದಸ್ಯೆ ಶಾಂತಾ ಬಾಂದೇಕರ ಹಾಗೂ ಇನ್ನಿತರ ಗಣ್ಯ ವ್ಕ್ಯಕ್ತಿಗಳು ಭಾಗವಹಿಸಲಿದ್ದಾರೆ.
 

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...