ಕಾರವಾರ: ಬಾಡ ಗ್ರಾಮದ ಶಿವಾಜಿ ಬಾಲಕಿಯರ ಪ್ರೌಢಶಾಲೆಯ ಸುವರ್ಣ  ಮಹೋತ್ಸವ

Source: so english | By Arshad Koppa | Published on 22nd December 2016, 8:19 AM | Coastal News | Guest Editorial | Don't Miss |

ಕಾರವಾರ, ಡಿ. ೨೧: ರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಆದ ಕಾರವಾರದ ಬಾಡ ಗ್ರಾಮದಲ್ಲಿ ಸ್ವತಂತ್ರ ಪೂರ್ವದಲ್ಲಿ ಶ್ರೀಯುತ ಶಂಕರ ಬಾಬಿ ಸಾವಂತ ಹಾಗೂ ಕೊಂಕಣ, ಮರಾಠ ಸಮಾಜದ ಗಣ್ಯ ವ್ಯಕ್ತಿಗಳು ಸೇರಿ ಬಡವರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರಿಗೆ ಶಿಕ್ಷಣ ನೀಡುವ ದೃಷ್ಟಿಯಿಂದ 16-10-1945 ರಲ್ಲಿ ಶ್ರೀ ಶಿವಾಜಿ, ಮರಾಠ ಇಂಗ್ಲೀಷ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯ ಉದ್ಘಾಟನೆಯನ್ನು  ಕ್ಯಾಪ್ಟನ ವಿ. ನಂಜಪ್ಪ ಕಲೆಕ್ಟರ್ ಆಫ್ ಕೆನರಾ ಇವರು ನೆರವೇರಿಸಿದರು. ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀ ದತ್ತಾ ಸುಬ್ಬಾ ನಾಯ್ಕ ಕಾರ್ಯ ನಿರ್ವಹಿಸಿದ್ದು, ತದನಂತರ ಶ್ರೀ ಸಕಾರಾಮ ದತ್ತಾ ಗಾಂವಕರ ಹಾಗೂ ಶ್ರೀ  ಶ್ರೀಪಾದ ದತ್ತಾ ಗಾಂವಕರ ಇವರು ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

ಶಿವಾಜಿ ಶಿಕ್ಷಣ ಸಂಸ್ಥೆಯು ಅಭಿವೃದ್ಧಿ ಹೊಂದಲು ಶ್ರೀ ಪುರುಷೋತ್ತಮ ಜಿ. ನಾಯ್ಕ, ಶ್ರೀ ಗಣೇಶ  ಎಸ್ ಸಾವಂತ,  ಶ್ರೀ ರಾಮಾ ಎಸ್. ಸಾವಂತ, ಶ್ರೀ ಬಿಕ್ರು ಕೆ. ನಾಯ್ಕ,                 ಶ್ರೀ ಪುರುಷೋತ್ತಮ ಪಿ. ಸಾವಂತ, ಶ್ರೀ ಡಿ. ಜಿ. ಸಾವಂತ, ಶ್ರೀ ವಿ. ಬಿ. ದೇಸಾಯಿ ಹಾಗೂ ಶ್ರೀ ಕೆ. ಎಸ್. ಪವಾರ ರವರು ಶ್ರಮ ವಹಿಸಿದ್ದಾರೆ.                                                                                  
    1965 ರ ಕೇದ್ರ ಸರ್ಕಾರದ ಆದೇಶದ ಮೇರೆಗೆ 1966 ಮೇ 21 ರಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶ್ರೀ ಶಿವಾಜಿ ಬಾಲಕಿಯರ ಪ್ರೌಢಶಾಲೆ  ಬಾಡ ಕಾರವಾರ ಎಂದು ಪ್ರಾರಂಭಿಸಲಾಯಿತು. ಈ ಶಾಲೆಯ ಮುಖ್ಯೋಪಧ್ಯಾಯರಾಗಿ ಶ್ರೀ ಜೆ. ಜಿ ಪರೋಳೆಕರ್, ಶ್ರೀ ಎಲ್. ಪಿ. ದೇಶಬಂಡಾರಿ, ಶ್ರೀಮತಿ ಎಸ್. ಎಸ್. ಕಾಮತ, ಶ್ರೀ ಟಿ. ಜಿ. ನಾಯ್ಕ, ಶ್ರೀ ಎಮ. ಎಸ್ ನಾಯ್ಕ, ಶ್ರೀಮತಿ ಎಸ್. ಕೆ. ರಾಣೆ ಕಾರ್ಯ ನಿರ್ವಹಿಸಿದ್ದು ಪ್ರಸ್ತುತವಾಗಿ ಶ್ರೀಮತಿ ಚಂದ್ರಮತಿ ಎನ್ ನಾಯಕ ಕಾರ್ಯ ನಿರ್ವಹಿಸುತಿದ್ದಾರೆ.
    ಇವರ ನೇತ್ರತ್ವದಲ್ಲಿ 23-12-2016 ರಂದು ಶಿವಾಜಿ ಬಾಲಕಿಯರ ಪ್ರೌಢಶಾಲೆಯ ಸುವರ್ಣ ಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.
    ಈ ಹಿಂದಿನ 50 ವರ್ಷಗಳಲ್ಲಿ ಶಿಕ್ಷಣ, ಕ್ರೀಡೆ, ಸಾಂಸ್ಕ್ರತಿಕ ಹಾಗೂ ವಿಜ್ಞಾನ ಚಟುವಟಿಕೆಯಲ್ಲಿ ಶಾಲಾ ಬಾಲಕಿಯರು ಮುಂಚುಣ ಯಲ್ಲಿದ್ದು ಶಾಲೆಯ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದು ಜಿಲ್ಲೆಯಲ್ಲಿಯೇ  ಪ್ರತಿಷ್ಠಿತ ಶಾಲೆಯಾಗಿ ಮುಂದುವರೆಯುತ್ತಿದೆ.

    ಶಿವಾಜಿ ಶಿಕ್ಷಣ ಸಂಸ್ಥೆಯು 1970 ರಲ್ಲಿ ಪದವಿ ಪೂರ್ವ ಹಾಗೂ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಿತು. 2001 ರಲ್ಲಿ ರಾಜ್ಯ ಸರ್ಕಾರದ ಆದೇಶದಂತೆ  ಶಿವಾಜಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಹಾಗೂ ಶಿವಾಜಿ ಕಲಾ ವಾಣ ಜ್ಯ ಹಾಗೂ ಬಿ. ಸಿ. ಎ ಮಹಾವಿದ್ಯಾಲಯಗಳಾಗಿ ಮಾರ್ಪಡಿಸಲಾಯಿತು. ಇದೇ ಶೈಕ್ಷಣ ಕ ವರ್ಷದಲ್ಲಿ ಕಾರವಾರದ ಹಣಕೋಣ ಗ್ರಾಮದಲ್ಲಿ ಸಾಂತೇರಿ ವಿದ್ಯಾಲಯ  ಪ್ರೌಢಶಾಲೆಯನ್ನು ಪ್ರಾರಂಭಿಸಿದರು.

    ಶಿವಾಜಿ ಶಿಕ್ಷಣ ಸಂಸ್ಥೆಯು 1972 ರಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯವನ್ನು ಪ್ರಾರಂಭಿಸಿತು. ತದನಂತರ 2006 ರಲ್ಲಿ ಶಿವಾಜಿ ಡಿ. ಇಡ್  ಮಹಾವಿದ್ಯಾಲಯವನ್ನು ಪ್ರಾರಂಭಿಸಿಲಾಯಿತು.    2006 ರಲ್ಲಿ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಪ್ರಾರಂಭಿಸಿದರು.

    ಇಂದು ಶಿವಾಜಿ ಶಿಕ್ಷಣ ಸಂಸ್ಥೆಯು ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬಡವರಿಗೆ, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕಡಿಮೆ ವ್ಯಯದಲ್ಲಿ ಹೆಚ್ಚಿನ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ.

    ಪ್ರಸ್ತುತವಾಗಿ ಶಿವಾಜಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ ಶ್ರೀ ಎಸ್. ಪಿ. ದೇಸಾಯಿ, ಹಾಗೂ ಶಿಕ್ಷಣ  ಸಂಸ್ಥೆಯ ಏಳಿಗೆಗಾಗಿ ಹಗಲು ರಾತ್ರಿ  ಶ್ರಮಿಸುತ್ತಿರುವ ಕಾರ್ಯದರ್ಶಿಗಳಾದ ಶ್ರೀ ಪಿ. ಪಿ. ಸಾವಂತ, ಖಜಾಂಚಿಗಳಾದ ಶ್ರೀ  ಎಮ್. ಬಿ. ನಾಯ್ಕ  ಸಹ ಕಾರ್ಯದರ್ಶಿಗಳಾದ  ಶ್ರೀ ವಿ. ಎಮ್. ಪವಾರ್ ಹಾಗೂ  ಸದಸ್ಯರಾದ ಶ್ರೀ  ಬಿ. ಬಿ  ರಾಣೆ,  ಶ್ರೀ ಪಿ. ಎಸ್. ರಾಣೆ, ಶ್ರೀ ಕೆ. ಜಿ. ಗಾಂವಕರ, ಶ್ರೀ  ಕೆ.ಪಿ. ನಾಯ್ಕ  ಶ್ರೀ ಎನ್. ಎನ್. ರಾಣೆ, ಶ್ರೀ  ಎಸ್. ಡಿ. ಪವಾರ , ಶ್ರೀ ಎಲ್. ಟಿ. ಸಾವಂತ  ರವರು ಕಾರ್ಯನಿರ್ವಹಿಸುತ್ತಿದ್ದಾರೆ.

    ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ  ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸೇವೆಯಲ್ಲಿದ್ದು ಸಂಸ್ಥೆಯ ಹೆಸರನ್ನು ಪಸರಿಸುತ್ತಿದ್ದಾರೆ.

    ಈ ಶಿಕ್ಷಣ ಸಂಸ್ಥೆಯು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ  ಪ್ರಗತಿಯನ್ನು ಸಾಧಿಸಲೆಂದು ಸ್ಥಳೀಯ ದೇವರಾದ  ಮಹಾದೇವರಲ್ಲಿ ತಮ್ಮೆಲ್ಲರ ವತಿಯಿಂದ ಪ್ರಾರ್ಥಿಸುತ್ತೇನೆ.


ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...