5 ಲಕ್ಷಕ್ಕೂ ಅಧಿಕ ಮತದಾರರು ಪಟ್ಟಿಯಿಂದ ಹೊರಗೆ; ವಿವಿಧ ಪಕ್ಷಗಳ ಮುಖಂಡರಿಂದ ಗಂಭೀರ ಆರೋಪ; ಉತ್ತರ ಕನ್ನಡದಲ್ಲಿ 92000• ಉಡುಪಿ ಜಿಲ್ಲೆಯಲ್ಲಿ 1 ಲಕ್ಷ ಮತದಾರರಿಗೆ ಕೊಕ್

Source: Vb | By I.G. Bhatkali | Published on 4th December 2022, 2:01 PM | State News |

ಬೆಂಗಳೂರು: ಸರಕಾರೇತರ ಸಂಸ್ಥೆ 'ಚಿಲುಮೆ' ಶಾಮೀಲಾಗಿರುವ ಬೆಂಗಳೂ ರಿನ ಮತದಾರರ ಪಟ್ಟಿ ಪರಿಷ್ಕರಣೆ ಹಗ ರಣ ಹೊರಬಿದ್ದ ಬೆನ್ನಿಗೇ, ಇದೀಗ ರಾಜ್ಯಾ ದ್ಯಂತ 5 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟರು ವುದು ಬೆಳಕಿಗೆ ಬಂದಿದೆ.

ಬೆಂಗಳೂರು, ಮೈಸೂರು, ಉತ್ತರ ಕನ್ನಡ, ಉಡುಪಿ ಕುಂದಾಪುರ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ 5 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಕೈ ಬಿಡಲಾಗಿದೆ ಎಂದು ವಿವಿಧ ಪಕಗಳ ಮುಖಂಡರು ದಾಖಲೆಗಳ ಸಹಿತ ಆರೋಪಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮತದಾರರ ಹೆಸರು ಕಾಣೆಯಾಗಿರುವ ಆರೋಪಗಳು ತೀವ್ರಗೊಳ್ಳುತ್ತಿದ್ದಂತೆಯೇ 'ಈ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ, ಆದ ಲೋಪಗಳನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ' ಎಂದು ಮುಖ್ಯಮಂತ್ರಿ ಬೊಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಜೆಪಿ ಅರವಿಂದ ಬೆಲ್ಲದ್ ಕೂಡ, ಹೆಸರುಗಳು ಶಾಸಕರಾಗಿರುವ ಮತದಾರರ ಕಾಣೆಯಾಗಿರುವುದು నిజ ಎಂದು ಧಾರವಾಡದಲ್ಲಿ ಸುದ್ದಿಗಾರರ ಮುಂದೆ ಒಪ್ಪಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 92,516 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣನಾಯ್ಕ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಸುದ್ದಿಗಾರರ ಮುಂದೆ ದಾಖಲೆಗಳನ್ನು ಬಿಡುಗಡೆ ಮಾಡಿರುವ ಅವರು, ಕಾರವಾರ ಕ್ಷೇತ್ರವೊಂದರಲ್ಲೇ 19,758 ಮಂದಿ ಮತದಾರರ ಹೆಸರನ್ನು ಅಳಿಸಲಾಗಿದೆ. ಭಟ್ಕಳದಲ್ಲಿ 18,396 ಮತದಾರರು, ಕುಮಟಾದಲ್ಲಿ 15,375, ಶಿರಸಿಯಲ್ಲಿ 13,624, ಹಳಿಯಾಳದಲ್ಲಿ 13,537 ಮತ್ತು ಯಲ್ಲಾಪುರದಲ್ಲಿ 11,826 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಮತದಾರರ ಮಾಹಿತಿ ಕಳವು ಪ್ರಕರಣ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ನನ್ನ ಪ್ರಕಾರ ರಾಮನಗರ, ಮಂಡ್ಯ, ಕಲಬುರಗಿ ಮತ್ತು ಇತರ ಜಿಲ್ಲೆಗಳಿಗೂ ವ್ಯಾಪಿಸಿದೆ. ನನ್ನ ಕ್ಷೇತ್ರದಲ್ಲಿ 16 ಸಾವಿರ ಮತಗಳನ್ನು ಕೈ ಬಿಡಲಾಗಿದೆ. ಇವರು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಉಡುಪಿ ಜಿಲ್ಲೆಯ ಒಂದು ಲಕ್ಷ ಮತದಾರರು ಕಾಣೆ: ಉಡುಪಿ ಜಿಲ್ಲೆಯ ಒಟ್ಟು 12 ಲಕ್ಷ ಮತದಾರರಲ್ಲಿ ಸುಮಾರು ಒಂದು ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು ಆರೋಪಿಸಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2018 ರಿಂದ ಈವರೆಗಿನ ಪರಿಷ್ಕೃತ ಮತದಾರರ ಪಟ್ಟಿಯಿಂದ ಅಂದಾಜು 19,000ಕ್ಕೂ ಅಧಿಕ ಮತದಾರರನ್ನು ತೆಗೆದು ಹಾಕುವ ಹಾಗೂ ಸಂಬಂಧವೇ ಇಲ್ಲದ ಗ್ರಾಮಗಳಿಗೆ ಬದಲಾವಣೆ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಈ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಒತ್ತಾಯಿಸಿದ್ದಾರೆ. ಒಂದೊಂದು ಬೂತ್‌ನಲ್ಲಿ 50-60 ಮತದಾರರ ಹೆಸರು ಬದಲಾವಣೆ ಯಾಗಿದೆ. ಮತದಾರರ ಪಟ್ಟಿಯಲ್ಲಿ ಮೃತರ ಹೆಸರನ್ನು ಕೈಬಿಡುವ ಬದಲು ಜೀವಂತ ಇದ್ದವರನ್ನು ಕೈಬಿಡಲಾಗಿದೆ. ನಿರ್ದಿಷ್ಟ ಜಾತಿ ಮತದಾರರ ಹೆಸರನ್ನು ಅವರ ವಾಸ್ತವ್ಯ ಗ್ರಾಮದ ಮತದಾರರ ಪಟ್ಟಿಯಿಂದತೆಗೆದು, ಸಂಬಂಧವೇ ಇಲ್ಲದ ಗ್ರಾಮಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 1,45,908 ಮತದಾರರಿಗೆ ಕತ್ತರಿ:
“ಮೈಸೂರು ಜಿಲ್ಲೆಯಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 1,45,908 ಮತದಾರರ ಹೆಸರನ್ನು ಕಾರಣವಿಲ್ಲದೇ ಕೈಬಿಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದ್ದಾರೆ. “ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. ಚಾಮರಾಜ ಕ್ಷೇತ್ರ 16,242, ನರಸಿಂಹಾಜ18,007, ವರುಣಾ 11,987, ಕೆ.ಆರ್.ನಗರ 10,604, ಹುಣಸೂರು 10,220, ಪಿರಿಯಾಪಟ್ಟಣ 8,570, ನಂಜನಗೂಡು 11,724 ಮತದಾರರನ್ನು ಪಟ್ಟಿಯಿಂದ ತೆಗೆದಿದ್ದಾರೆ'' ಎಂದು ಅವರು ಆರೋಪಿಸಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...