ಬರಪರಿಹಾರ: 324 ಕೋ.ರೂ. ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರಕಾರ

Source: Vb | By I.G. Bhatkali | Published on 4th November 2023, 10:10 AM | State News |

ಬೆಂಗಳೂರು: ರಾಜ್ಯ ಸರಕಾರವು 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿ‌ಎಫ್)ಯಡಿಯಲ್ಲಿ 324 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆಗೊಳಿಸಿ ಆದೇಶಿಸಿದೆ.

ಬೆಂಗಳೂರು ನಗರ-7.50 ಕೋಟಿ ರೂ., ಬೆಂಗಳೂರು ಗ್ರಾಮಾಂತರ-6 ಕೋಟಿ ರೂ., ರಾಮನಗರ-7.50 ಕೋಟಿ ರೂ., ಕೋಲಾರ-9 ಕೋಟಿ ರೂ., ಚಿಕ್ಕಬಳ್ಳಾಪುರ-9 ಕೋಟಿ ರೂ., ತುಮಕೂರು-15 ಕೋಟಿ ರೂ., ಚಿತ್ರದುರ್ಗ-9 ಕೋಟಿ ರೂ., ದಾವಣಗೆರೆ-9 ಕೋಟಿ ರೂ., ಚಾಮರಾಜನಗರ-7.50 ಕೋಟಿ  ರೂ., ಮೈಸೂರು-13.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಮಂಡ್ಯ10.5 ಕೋಟಿ ರೂ. ಬಳ್ಳಾರಿ-7.50 ಕೋಟಿ ರೂ., ಕೊಪಳ-10.50 ಕೋಟಿ ರೂ., ರಾಯಚೂರು-9 ಕೋಟಿ ರೂ., ಕಲಬುರಗಿ-16.50 ಕೋಟಿ ರೂ., ಬೀದರ್-4.50 ಕೋಟಿ ರೂ., ಬೆಳಗಾವಿ-22.50 ಕೋಟಿ ರೂ., ಬಾಗಲಕೋಟೆ-13.50 ಕೋಟಿ ರೂ., ವಿಜಯಪುರ-18 ಕೋಟಿ ರೂ.. ಗದಗ-10.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಹಾವೇರಿ-12 ಕೋಟಿ ರೂ., ಧಾರವಾಡ-12 ಕೋಟಿ ರೂ., ಶಿವಮೊಗ್ಗ-10.50 ಕೋಟಿ ರೂ., ಹಾಸನ-12 ಕೋಟಿ ರೂ., ಚಿಕ್ಕಮಗಳೂರು-12 ಕೋಟಿ ರೂ., ಕೊಡಗು-7.50 ಕೋಟಿ ರೂ., ದಕ್ಷಿಣ ಕನ್ನಡ-3 ಕೋಟಿ ರೂ., ಉಡುಪಿ-4.50 ಕೋಟಿ ರೂ., ಉತ್ತರ ಕನ್ನಡ-16.50 ಕೋಟಿ ರೂ., ಯಾದಗಿರಿ-9 ಕೋಟಿ ರೂ. ಹಾಗೂ ವಿಜಯನಗರ ಜಿಲ್ಲೆಗೆ 9 ಕೋಟಿ ರೂ. ಸೇರಿದಂತೆ ಒಟ್ಟು 324 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪೇಯಿಸ್ ರಶೀದಿ ಮೂಲಕ ಡ್ರಾ ಮಾಡಿ ತಮ್ಮ ಡಿಡಿಆರ್ ಎಫ್ ಪಿಡಿ ಖಾತೆಗೆ ಜಮಾ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...