ಬೆಂಗಳೂರು: ಜನಸ್ನೇಹಿ ಆಡಳಿತಕ್ಕಾಗಿ ಜನಸೇವಕ, ಜನಸಂದನ; ಜ.26ರಿಂದ ರಾಜ್ಯಾದ್ಯಂತ ವಿಸ್ತರಣೆ

Source: VB | By I.G. Bhatkali | Published on 2nd November 2021, 12:06 PM | State News |

ಬೆಂಗಳೂರು: 'ಜನಸೇವಕ ಹಾಗೂ ಜನಸ್ಪಂದನ' ಕಾರ್ಯಕ್ರಮಗಳಿಂದ ಜನಸ್ನೇಹಿ ಆಡಳಿತ ಸಾಧ್ಯ. ಜನರ ಮನೆಬಾಗಿಲಿಗೆ ಸರಕಾರದ ಸೇವೆ ಒದಗಿಸುವ ನೂತನ ಯೋಜನೆಗಳನ್ನು ಜನವರಿ 26ರಿಂದ  ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಸೋಮವಾರ ವಿಧಾನಸೌಧದ ಪೂರ್ವದ್ವಾರದ ಆವರಣದಲ್ಲಿ 'ಜನಸೇವಕ' ಮನೆಬಾಗಿಲಿಗೆ ಸರಕಾರದ ಸೇವೆಗಳು, 'ಜನಸ್ಪಂದನ' ಏಕೀಕೃತ ಸಾರ್ವಜನಿಕ ಕುಂದು-ಕೊರತೆ ನಿವಾರಣಾ ವ್ಯವಸ್ಥೆ-1902 ಸಹಾಯವಾಣಿ, ಮೊಬೈಲ್ ಆ್ಯಪ್ ಹಾಗೂ ವೆಬ್ ಪೋರ್ಟಲ್‌ಗಳು ಮತ್ತು ಸಾರಿಗೆ ಇಲಾಖೆಯ 30 ಆನ್‌ಲೈನ್ ಸೇವೆಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಕರ್ನಾಟಕದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದೆ. ನಮ್ಮ ಕರ್ತವ್ಯ ಜವಾಬ್ದಾರಿ, ಉತ್ತರದಾಯಿತ್ವದ ಬಗ್ಗೆ ಆಡಳಿತ ನಡೆಸುವವರಲ್ಲಿ ಸ್ಪಷ್ಟತೆ ಇದ್ದಾಗ ಮಾತ್ರ ಜನಹಿತ, ಜನಸ್ನೇಹಿ ಆಡಳಿತ ಸಾಧ್ಯವಾಗುತ್ತದೆ. ಅಧಿಕಾರಿಶಾಹಿ, ವಿಳಂಬ ಧೋರಣೆಯ ಮುಖಾಂತರ ತಳಹಂತದಲ್ಲಿ ನಾಗರಿಕರ ಸೇವೆ ಮರೀಚಿಕೆಯಾಗುವುದನ್ನು ತಪ್ಪಿಸಲು ಹಾಗೂ ಸರಕಾರದ ಸೇವೆಯನ್ನು ಸರಳವಾಗಿ ತಲುಪಿಸಲು ಸರಕಾರ ಜನರ ಬಾಗಿಲಿಗೆ ಆಡಳಿತವನ್ನು ಒಯ್ಯುವ ಕೆಲಸ ಮಾಡುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ಜನರ ಬಳಿ ಆಡಳಿತ ಮತ್ತು ಅಭಿವೃದ್ಧಿ: ಜನಸೇವಕ ಕಾರ್ಯಕ್ರಮದ ಮೂಲಕ ಜನ ಹೆಚ್ಚಾಗಿ ಬಳಸುವ ಸರಕಾರದ ಸೇವೆಗಳನ್ನು ಸಕಾಲ ಯೋಜನೆಯಡಿ ಜಾರಿಗೊಳಿಸಲಾಗಿದೆ. ಜನರ ಬಳಿ ಆಡಳಿತ, ಅಭಿವೃದ್ಧಿ ಆಗಬೇಕು. ಇದು ಸರಕಾರದ ಧೈಯ. ಆಡಳಿತದಲ್ಲಿ ಸುಧಾರಣೆ, ಜನಪರ, ಬಡವರಪರ ನಮ್ಮ ಆಡಳಿತ ಇರಲಿದೆ ಎಂದರು.

ಆಡಳಿತ ಸುಧಾರಣೆ ಸಮಿತಿಯ ಶಿಫಾರಸ್ಸಿನ ಅನ್ವಯ ಉತ್ತಮ ಆಡಳಿತಕ್ಕಾಗಿ ಹಲವಾರು ಸೇವೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಸೇವೆಗಳಿಂದ ಜನರ ಸಮಯ ಉಳಿಯುತ್ತದೆ. ಭ್ರಷ್ಟಾಚಾರ ನಿಲ್ಲುತ್ತದೆ. ನಾಗರಿಕರು ತಮ್ಮ ಸಮಯವನ್ನು ಕ್ರಿಯಾತ್ಮಕವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ರಾಜ್ಯದ ಜನ ಶ್ರೀಮಂತರಾದರೆ, ಅವರ ಜೀವನ ಮಟ್ಟ, ಆದಾಯ ಸುಧಾರಣೆ, ಆರೋಗ್ಯ ಮಟ್ಟ ಉತ್ತಮ ಶಿಕ್ಷಣ, ಉದ್ಯೋಗ ಸೃಷ್ಟಿ ಎಲ್ಲವೂ ಸುಧಾರಿಸುತ್ತದೆ. ಅಧಿಕಾರ, ಆಡಳಿತ ಎಂದರೆ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಎಂದು ಅವರು ತಿಳಿಸಿದರು

ತಲಾವಾರು ಆದಾಯ ಹೆಚ್ಚಾಗಬೇಕು: ರಾಜ್ಯ ತಲಾವಾರು ಆದಾಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇವಲ ಶೇ.35ರಷ್ಟು ಜನ ಮಾತ್ರ ರಾಜ್ಯದ ಆದಾಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾದರೆ ರಾಜ್ಯದ ಆದಾಯವೂ ಹೆಚ್ಚಾಗುತ್ತದೆ. ಈ ಚಿಂತನೆ ನಮ್ಮ ಸರಕಾರದ್ದು ಎಂದು ಬೊಮ್ಮಾಯಿ ತಿಳಿಸಿದರು.

30 ಸಂಪರ್ಕ ರಹಿತ ಆನ್‌ಲೈನ್ ಸೇವೆ: 60 ಲಕ್ಷ ಜನರು ಸಾರಿಗೆ ಕಚೇರಿಗೆ ಎಡತಾಕುವುದನ್ನು ತಪ್ಪಿಸಲು ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರಮುಖ 10 ಕಾರು, ಸ್ಕೂಟರ್ ಮಾರುವ ಸಂಸ್ಥೆಗಳಿಗೆ ವಾಹನ ನೋಂದಣಿ ಮಾಡಿಕೊಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಆಹಾರವಿತರಣೆ, ಬಿಬಿಎಂಪಿ ಯಾವುದೆ ಪ್ರಮಾಣಪತ್ರ, ಮಾಸಾಶನ, ಆಧಾರ ಕಾರ್ಡ್ 56 ಸೇವೆ, ಕುಂದುಕೊರತೆ ನಿವಾರಣಾ ವ್ಯವಸ್ಥೆ, 1902 ಸಹಾಯವಾಣಿ, ಮೊಬೈಲ್ ಆ್ಯಪ್ ಪ್ರಾರಂಭಿಸಲಾಗಿದೆ. 4.11 ಲಕ್ಷ ಹೊಸ ಪಡಿತರ ಕಾರ್ಡಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...