ಇಸ್ರೋದಿಂದ 70 ಕಿ.ಮೀ.ಎತ್ತರದಿಂದ ಸೆರೆ ಹಿಡಿದ ಚಂದ್ರನ ಚಿತ್ರಗಳ ಬಿಡುಗಡೆ

Source: Vb | By I.G. Bhatkali | Published on 23rd August 2023, 6:15 AM | State News | National News |

ಬೆಂಗಳೂರು: ಚಂದ್ರಯಾನ-3 ಅಭಿಯಾನದ ಲ್ಯಾಂಡರ್ ಪೊಜಿಷನ್ ಡಿಟೆಕ್ಷನ್ ಕ್ಯಾಮರಾ (ಎಲ್‌ಪಿಡಿಸಿ) ಆ.19ರಂದು ಸುಮಾರು 70 ಕಿ.ಮೀ. ಎತ್ತರದಿಂದ ಸೆರೆ ಹಿಡಿದಿದ್ದ ಚಂದ್ರನ ಚಿತ್ರಗಳನ್ನು ಇಸ್ರೋ ಮಂಗಳವಾರ ಬಿಡುಗಡೆಗೊಳಿಸಿದೆ.

ನಿಗದಿಯಾಗಿರುವಂತೆ ಅಭಿಯಾನದ ಲ್ಯಾಂಡರ್ ಮೊಡ್ಯುಲ್ ಬುಧವಾರ ಚಂದ್ರನ ಮೇಲೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಲ್ಯಾಂಡರ್ ತನ್ನಲ್ಲಿ ಅಳವಡಿಸಲಾಗಿರುವ ಮೂನ್ ರೆಫರೆನ್ಸ್ ಮ್ಯಾಪ್‌ನೊಂದಿಗೆ ತಾಳೆ ಹಾಕುವ ಮೂಲಕ ತನ್ನ ಸ್ಥಾನ (ಅಕ್ಷಾಂಶ ಮತ್ತು ರೇಖಾಂಶ)ವನ್ನು ನಿರ್ಧರಿಸಲು ಈ ಚಿತ್ರಗಳು ನೆರವಾಗುತ್ತವೆ ಎಂದು ಇಸ್ರೋ ತಿಳಿಸಿದೆ.

ಲ್ಯಾಂಡರ್ ಹಝಾರ್ಡ್ ಡಿಟೆಕ್ಷನ್ ಆ್ಯಂಡ್ ಅವಾಯನ್ಸ್ ಕ್ಯಾಮರಾ (ಎಲ್‌ಎಚ್‌ಡಿಎಸಿ) ಸೆರೆಹಿಡಿದಿದ್ದ ಚಂದ್ರನ ದೂರದ ಪ್ರದೇಶದ ಚಿತ್ರಗಳನ್ನು ಇಸ್ರೋ ಸೋಮವಾರ ಬಿಡುಗಡೆಗೊಳಿಸಿತ್ತು.

ಲ್ಯಾಂಡರ್ ಇಳಿಯಲು ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸುರಕ್ಷಿತ ಪ್ರದೇಶವನ್ನು ಪತ್ತೆ ಹಚ್ಚಲು ನೆರವಾಗುವ ಈ ಕ್ಯಾಮರಾವನ್ನು ಇಸ್ರೋದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿರುವ ಅಹ್ಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (ಎಸ್‌ಎಸಿ) ಅಭಿವೃದ್ಧಿಗೊಳಿಸಿದೆ. ಇಸ್ರೋದ ಪ್ರಕಾರ ಚಂದ್ರಯಾನ-3ರ ಅಭಿಯಾನದ ಗುರಿಗಳನ್ನು ಸಾಧಿಸಲು ಎಲ್‌ಎಚ್‌ಡಿಎಸಿಯಂತಹ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದೆ. ಜು.14ರಂದು ಉಡಾವಣೆಗೊಂಡ ಚಂದ್ರಯಾನ-3 ಚಂದ್ರನ ಮೇಲೈಯಲ್ಲಿ ಸುರಕ್ಷಿತ ಇಳಿಯುವಿಕೆ ಮತ್ತು ಪರ್ಯಟನ ಸಾಮರ್ಥ್ಯವನ್ನು ಸಾಬೀತುಗೊಳಿಸಲು ಚಂದ್ರಯಾನ-2ರ ಅನುಸರಣಾ ಅಭಿಯಾನವಾಗಿದೆ.

ಚಂದ್ರಯಾನ -3: ಇಂದು ಸಾಧ್ಯವಾಗದೇ ಇದ್ದರೆ ಆ.27ರಂದು ಸಾಫ್ಟ್ ಲ್ಯಾಂಡಿಂಗ್: ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ ಲ್ಯಾಂಡರ್' ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡ್ ಆಗಲಿದ್ದು, ಲ್ಯಾಂಡರ್ ಮೊಡ್ಯುಲ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕೂಲ ವಾತಾವರಣ ಎದುರಾದರೆ ಲ್ಯಾಂಡಿಂಗ್ ಅನ್ನು ಆಗಸ್ಟ್ 27ಕ್ಕೆ ಮುಂದೂಡಲಾಗುವುದು ಎಂದು ಇಸ್ರೋದ ಅಹಮದಾಬಾದ್‌ ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನ ನಿರ್ದೇಶಕ ನಿಲೇಶ್ ಎಂ. ದೇಸಾಯಿ ತಿಳಿಸಿದ್ದಾರೆ.

ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಲ್ಯಾಂಡರ್ ಮೊಡ್ಯುಲ್‌ನ ಸ್ಥಿತಿ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಯಾವುದೇ ಅಂಶ ಅನುಕೂಲಕರವಾಗಿಲ್ಲ ಎಂದು ಕಂಡು ಬಂದರೆ 'ವಿಕ್ರಮ್ ಲ್ಯಾಂಡರ್' ಅನ್ನು ಆಗಸ್ಟ್ 27ರಂದು ಚಂದ್ರನ ಮೇಲೆ ಇಳಿಸಲಿದ್ದೇವೆ ಎಂದು ದೇಸಾಯಿ ಹೇಳಿದ್ದಾರೆ.

ಲ್ಯಾಂಡರ್ ಆಗಸ್ಟ್ 23ರಂದು ಸಂಜೆ 6:04ರ ವೇಳೆಗೆ 30 ಕಿ.ಮೀ. ಎತ್ತರದಿಂದ ಚಂದ್ರನ ಮೇಲೆಯಲ್ಲಿ ಇಳಿಯಲು ಪ್ರಯತ್ನಿಸಲಿದೆ. ಆ ಸಂದರ್ಭ ಅದರ ವೇಗ ಸೆಕೆಂಡಿಗೆ 1.68 ಕಿ.ಮೀ. ಇರಲಿದೆ. ಈ ಸಂದರ್ಭ ಅದರ ವೇಗವನ್ನು ಕಡಿಮೆ ಮಾಡುವ ಬಗ್ಗೆ ನಾವು ಗಮನ ಕೇಂದ್ರೀಕರಿಸಿದ್ದೇವೆ. ಯಾಕೆಂದರೆ, ಚಂದ್ರನ ಗುರುತ್ವಾಕರ್ಷಣ ಬಲ ಕೂಡ ಅದರ ಪಾತ್ರವನ್ನು ನಿರ್ವಹಿಸಲಿದೆ. ಒಂದು ವೇಳೆ ನಮಗೆ ಈ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದರೆ, ಅದು ಚಂದ್ರನ ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ” ಎಂದು ಅವರು ತಿಳಿಸಿದ್ದಾರೆ.

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ನಿಖರವಾದ ಸಿದ್ಧತೆಗಳು ಹಾಗೂ ಇದುವರೆಗಿನ ಬಾಹ್ಯಾಕಾಶ ನೌಕೆಯ ಸುಗಮ ಪ್ರಗತಿಯಿಂದಾಗಿ ವಿಷನ್ ಯಶಸ್ಸಿನ ಬಗ್ಗೆ ಸೋಮವಾರ ವಿಶ್ವಾಸ ವೈಕ್ತಪಡಿಸಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...