ದೌರ್ಜನ್ಯ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ: ಅತಿಕ್ರಮಣಕಾರರಿಂದ ಡಿಸಿಎಫ್ ಕಚೇರಿಗೆ ಮುತ್ತಿಗೆ

Source: so news | By MV Bhatkal | Published on 26th May 2019, 11:05 AM | Coastal News | Don't Miss |

 

ಶಿರಸಿ: ಅರಣ್ಯ ಅತಿಕ್ರಮಣಕಾರರ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಕಾನಸೂರು ಬಾಳೆಕೈ ಗೀತಾ ನಾಯ್ಕ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ, ಅರಣ್ಯ ಅತಿಕ್ರಮಣಕಾರರು ಶನಿವಾರ ಇಲ್ಲಿ ಡಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಿದರು.
ಅತಿಕ್ರಮಣದಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಹೋರಾಟಗಾರ್ತಿ ಸುಕ್ರಿ ಗೌಡ ಭಾಗವಹಿಸಿ
ದ್ದರು. ಡಿಸಿಎಫ್ ಕಚೇರಿ ಎದುರು ರಸ್ತೆಯಲ್ಲಿ ನಿಂತಿದ್ದ ಅತಿಕ್ರಮಣಕಾರರು, ಕಚೇರಿ ಒಳಪ್ರವೇಶಿಸಿಲು ಯತ್ನಿಸಿದಾಗ, ಸಿಪಿಐ ಬಿ. ಗಿರೀಶ ನೇತೃತ್ವದಲ್ಲಿ ಪೊಲೀಸರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಭಟ್ಕಳದ ರಾಮಾ ಮೊಗೇರ ಮಾತನಾಡಿ‘ಶೇ 80ರಷ್ಟು ಅರಣ್ಯವಿರುವ ಜಿಲ್ಲೆಯಲ್ಲಿ ನಾವು ಸಣ್ಣ ಅತಿಕ್ರಮಣ ಮಾಡಿ ಬದುಕುವುದು ಅನಿ
ವಾರ್ಯ. ಅತಿಕ್ರಮಣದಲ್ಲಿ ಬದುಕದೇ ಅರಣ್ಯ ಇಲಾಖೆ ಕಚೇರಿಗೆ ಬಂದು ಉಳಿಯಲು ಸಾಧ್ಯವಾ ? ಅಧಿಕಾರಿಗಳು ಮನುಷ್ಯತ್ವ ಹೊಂದಿರಬೇಕು.ಗುಡಿಸಲು ಕಟ್ಟಿಕೊಂಡಿ ರುವವರನ್ನು ಎಬ್ಬಿಸುವುದು ಅಧಿಕಾರ ಶಾಹಿ ಅಡಳಿತವನ್ನು ತೋರಿಸುತ್ತದೆ’ ಎಂದರು.ಶೋಭಾ ನಾಯ್ಕ ಮಾತನಾಡಿ,‘ಒಂದೂವರೆ ವರ್ಷದಿಂದ ಗೀತಾ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ.ದೊಡ್ಡ ಅತಿಕ್ರಮಣದಾರರಿಗೆ ಏನೂ ಮಾಡದ ಇಲಾಖೆ, ಬದುಕಿಗಾಗಿ ಅತಿಕ್ರಮಿಸಿ
ದವರ ಮೇಲೆ ಕ್ರಮ ಕೈಗೊಳ್ಳುತ್ತದೆ.ಪ್ರತಿಯೊಬ್ಬರಿಗೂ ಒಂದೇ ನ್ಯಾಯ ಇರಬೇಕು. ಸಾವಿರಾರು ಸಂಖ್ಯೆಯಲ್ಲಿರುವ ಅತಿಕ್ರಮಣಕಾರರು ರೊಚ್ಚಿಗೆದ್ದರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಷ್ಟ ಎದುರಾಗಬಹುದು’ಎಂದರು.

ಗೀತಾ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿದ ಫಾರೆಸ್ಟ್ ಮತ್ತು ಗಾರ್ಡ್‌ ಅನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ದರು. ಸ್ಥಳಕ್ಕೆ ಬಂದ ಡಿಸಿಎಫ್ ಎಸ್.ಜಿ.ಹೆಗಡೆ ಅವರು ‘ದೌರ್ಜನ್ಯ ನಡೆಸಿದ ಸಿಬ್ಬಂದಿ ವಿಚಾರಣೆ ನಡೆಸಿ, ವರ್ಗಾವಣೆ ಮಾಡಲಾಗುವುದು. ಕಾನೂನು ಮೀರಿ ಯಾರ ಮೇಲೆಯೂ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ಕುಮಟಾದ ಮಂಜು ಮರಾಠಿ ಮಾತನಾಡಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...