ಭಟ್ಕಳ ವೆಲ್ಫೇರ್ ಆಸ್ಪತ್ರೆಯಲ್ಲಿ ಏಪ್ರಿಲ್ 2ನೇ ವಾರದಿಂದ ಡಯಾಲಿಸೀಸ್ ಕೇಂದ್ರ ಕಾರ್ಯಾರಂಭ

Source: S O News service | By I.G. Bhatkali | Published on 9th March 2021, 9:44 AM | Coastal News | Don't Miss |

ಭಟ್ಕಳ: ಇಂಡಿಯನ್ ನವಾಯತ್ ಫೋರಮ್ (ಐಎನ್‍ಎಫ್) ಮತ್ತು ಕೇರಳ ಮೂಲದ ಸರಕಾರೇತರ ಸಂಸ್ಥೆ `ಥನಲ್' ಸಹಭಾಗಿತ್ವದಲ್ಲಿ ಏಪ್ರಿಲ್ 2ನೇ ವಾರದಿಂದ ಭಟ್ಕಳ ವೆಲ್ಫೇರ್ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಐಎನ್‍ಎಫ್ ಪ್ರಧಾನ ಕಾರ್ಯದರ್ಶಿ ಮಾಝ್ ಜುಕಾಕೋ ಹೇಳಿದರು.

ಅವರು ಇಲ್ಲಿನ ರಾಯಲ್ ಓಕ್ ಹೊಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 9 ಯಂತ್ರಗಳನ್ನು ಅಳವಡಿಸಲು ಅನುಕೂಲವಾಗುವಂತೆ ಡಯಾಲಿಸೀಸ್ ಕೇಂದ್ರವನ್ನು

ಆರಂಭಿಕ ಹಂತದಲ್ಲಿ 4 ಯಂತ್ರಗಳು ಕಾರ್ಯ ನಿರ್ವಹಿಸಲಿವೆ. ನುರಿತ ಡಯಾಲಿಸೀಸ್ ಟೆಕ್ನಿಶಿಯನ್‍ಗಳನ್ನು ನಿಯೋಜಿಸಲಾಗುತ್ತದೆ. ಜನರ ಬೇಡಿಕೆಗಳ ಅನುಸಾರವಾಗಿ ಮುಂದಿನ ಹಂತದಲ್ಲಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು 

ಸಿದ್ಧಗೊಳಿಸಲಾಗುತ್ತಿದ್ದು, ಆರಂಭಿಕ ಹಂತದಲ್ಲಿ 4 ಯಂತ್ರಗಳು ಕಾರ್ಯ ನಿರ್ವಹಿಸಲಿವೆ. ನುರಿತ ಡಯಾಲಿಸೀಸ್ ಟೆಕ್ನಿಶಿಯನ್‍ಗಳನ್ನು ನಿಯೋಜಿಸಲಾಗುತ್ತದೆ. ಜನರ ಬೇಡಿಕೆಗಳ ಅನುಸಾರವಾಗಿ ಮುಂದಿನ ಹಂತದಲ್ಲಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು.

ಕಿಡ್ನಿ ಸಂಬಂಧಿ ರೋಗಗಳ ತಪಾಸಣೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರನ್ನು ನಿಯೋಜಿಸುವ ಬಗ್ಗೆ ಪ್ರಯತ್ನ ನಡೆದಿದೆ. ಡಯಾಲಿಸೀಸ್ ಅಗತ್ಯ ಇರುವ ರೋಗಿಗಳು ಈಗಿನಿಂದಲೇ ತಮ್ಮ ಹೆಸರನ್ನು ವೆಲ್ಫೇರ್ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು.

ಡಯಾಲಿಸಿಸ್ ಕೇಂದ್ರದಲ್ಲಿ ಸ್ಲಾಟ್ ಕಾಯ್ದಿರಿಸಲು, ರೋಗಿಗಳು ವೆಲ್ಫೇರ್ ಆಸ್ಪತ್ರೆಗೆ 9019330977 ಗೆ ಕರೆ ಮಾಡಿ ಡಯಾಲಿಸಿಸ್‌ಗೆ ನೋಂದಾಯಿಸಿ ನಮೂದಿಸಬಹುದು.

ಸೈಫಾನ್  ಶಿಂಗೇರಿ, ಇಮ್ತಿಯಾಜ್ ದಾಮ್ದಾ, ಹಾಶಿಮ್  ಮೋತೇಶಮ್, ಗುಫ್ರಾನ್ ಲಂಕಾ, ತಲ್ಹಾ ಅಕ್ರೆಮಿ, ಹಾರೀಸ್ ಶಾಬಂದ್ರಿ ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...