ಭಟ್ಕಳದಲ್ಲಿ ಹೆಚ್ಚುತ್ತಿರುವ ಕೊರೋನಾ; ಆತಂಕ ಬೇಡ; ಜಾಗೃತೆ ವಹಿಸಿ-ತಂಝೀಮ್

Source: sonews | By Staff Correspondent | Published on 7th July 2020, 7:31 PM | Coastal News | Don't Miss |

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಇತ್ತಿಚೆಗೆ ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದಾಗಿ ಜನರು ಆತಂಕಿತರಾಗುತ್ತಿರುವುದು ಸಾಮಾನ್ಯ. ಆದರೆ ಇದಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ. ಜಾಗೃತೆ ವಹಿಸುವುದು ಅವಶ್ಯಕವಾಗಿ ಎಂದು ತಂಝೀಮ್ ಸಂಸ್ಥೆಯ ಮುಖಂಡ ಡಾ.ಎಂ.ಎಂ.ಹನೀಫ್ ಶಬಾಬ್ ಹೇಳಿದರು.

ಅವರು ಮಂಗಳವಾರ ತಂಝಿಮ್ ಕಾರ್ಯಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾವೀಗ ಕೊರೋನದ ತೃತೀಯಾ ಹಂತಕ್ಕೆ ಕಾಲಿಟ್ಟಿದ್ದೇವೆ. ಮೊದಲ ಹಾಗೂ ಎರಡನೇ ಹಂತವನ್ನು ನಾನು ಅತ್ಯಂತ ಯಶಸ್ವಿಯಾಗಿ ನಿಯಂತ್ರಿಸಿದ್ದೇವೆ. ಈಗ ಮೂರನೇ ಹಂತದಲ್ಲಿ ಲಾಕ್ಡೌನ್ ತೆರವುಗೊಂಡಿದ್ದು ಒಬ್ಬರು ಇನ್ನೊಬ್ಬರ ಸಂಪರ್ಕದಿಂದಾಗಿ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕಾಗಿ ಲಾಕ್ಡೌನ್ ಮಾತ್ರ ಪರಿಹಾರವಲ್ಲ. ನಾವು ನಮ್ಮನ್ನು ತಡೆಹಿಡಿದುಕೊಳ್ಳುವುದರ ಮೂಲಕ ಇದನ್ನು ನಿಯಂತ್ರಿಸಬಹುದು. ಎಲ್ಲ ರೋಗಗಳಂತೆ ಕೊರೋನಾ ಸೋಂಕಿನೊಂದಿಗೆ ನಾವು ಬದುಕುವುದನ್ನು ಕಲಿತುಕೊಳ್ಳಬೇಕಾಗಿದೆ. ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಓಡಾಡುತ್ತಿದ್ದಾರೆ ಮೊದಲು ಇದರ ಮೇಲೆ ನಿಯಂತ್ರಣ ಸಾಧಿಸಬೇಕಾಗಿದೆ ಎಂದು ಅವರು ಕರೆ ನೀಡಿದ ಅವರು ಇತ್ತಿಚೆಗೆ ನಮ್ಮಲ್ಲಿ ಸಾವು ಕೂಡ ಸಂಭವಿಸುತ್ತಿವೆ. ಆದ್ದರಿಂದಲೇ ಜನರು ಭಯ ಪಡುತ್ತಿರುವುದು ಸಜಹವಾಗಿದೆ. ಆದರೆ ನಾವು ಭಯಪಡಬೇಕಾಗಿರುವುದು ಸಾವಿಗಾಗಿ ಅಲ್ಲ. ನಮ್ಮಿಂದ ಇತರರಿಗೆ ಈ ರೋಗ ಹರಡಬಾರದೆಂದು ಮಾತ್ರ ಭಯಪಡಬೇಕಾಗಿದೆ ಎಂದರು.

ತಂಝೀಮ್ ಸಂಸ್ಥೆಯ ಇನ್ನೋರ್ವ ಮುಖಂಡ ನ್ಯಾಯಾವಾದಿ ಸೈಯ್ಯದ್ ಇಮ್ರಾನ್ ಲಂಕಾ ಮಾತನಾಡಿ, ಮಾರ್ಚ್ ತಿಂಗಳಲ್ಲಿ ನಮ್ಮಲ್ಲಿ ಒಂಬತ್ತು ಪ್ರಕರಣ ದಾಖಲಾಗಿತ್ತು. ಎಪ್ರಿಲ್ ಮೊದಲ ವಾರದಲ್ಲಿ ೪೦ ಪ್ರಕರಣಗಳು, ಜುಲೈ ಮೊದಲ ವಾರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವುದರ ಮೂಲಕ ನಾವೀಗ ತೃತೀಯ ಹಂತವನ್ನು ತಲುಪಿದಂತಾಗಿದೆ. ಈ ನಿಟ್ಟಿನಲ್ಲಿ ತಂಝೀಮ್ ಸಂಸ್ಥೆಯು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದೊಂದಿಗೆ ಜನರಲ್ಲಿ ಸಂಪೂರ್ಣ ಜಾಗೃತಿಯನ್ನು ಮೂಡಿಸುವಲ್ಲಿ ಸಕ್ರೀಯವಾಗಿದೆ. ಸಾರ್ವಜನಿಕರ ಹಾಗು ಆಡಳಿತದ ಬೆಂಬಲದೊಂದಿಗೆ ನಾವು ಎರಡನೇ ಹಂತದ ಕೊರೋನವನ್ನು ಗೆದ್ದಿದ್ದೇವೆ. ಈಗ ಮೂರನೇ ಹಂತವನ್ನು ಕೂಡ ಜಯಿಸಬೇಕಾಗಿದೆ ಇದಕ್ಕಾಗಿ ಲಾಕ್ಡೌನ್ ಪರಿಹಾರವಾಗಿರದೆ ಪ್ರತಿಯೊಬ್ಬರು ಅತ್ಯಂತ ಜವಾಬ್ದಾರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ವರ್ತಿಸಿ ಕೊರೊನಾವನ್ನು ಮೆಟ್ಟಿನಿಲ್ಲಬೇಕಾಗಿದೆ ಎಂದರು. ನಮ್ಮ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮದಾಗಿದ್ದು ಇದು ಜೀವನ ಮತ್ತು ಆರೋಗ್ಯದ ಪ್ರಶ್ನೆಯಾಗಿದ್ದು ಕೆವಲ ಆತಂಕ ಮತ್ತು ಗಾಬರಿ ಪಡುವುದರಿಂದ ಇದರ ನಿಯಂತ್ರಣ ಸಾಧ್ಯವಿಲ್ಲ. ಪ್ರತಿಯೊಬ್ಬರು ಹೊಣೆಗಾರಿಕೆ ಪ್ರಜ್ಞೆಯಿಂದ ವರ್ತಿಸುವುದುರ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು, ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೊಳಪಡಿಸಿಕೊಳ್ಳುವುದರ ಮೂಲಕ ತಮ್ಮ ಸಾಮಾಜಿಕ ಪ್ರಜ್ಞೆಯನ್ನು ಮೆರೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವಾಝ್ ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...