ಮಕ್ಕಳ ಲಸಿಕಾ ಕೊಠಡಿ ಉದ್ಘಾಟನೆ: ಸೇವೆಗೆ ಮಂಚೂಣಿಯಲ್ಲಿ ಭಟ್ಕಳದ ಸರ್ಕಾರಿ ಆಸ್ಪತ್ರೆ

Source: SO NEWS | By MV Bhatkal | Published on 17th October 2021, 12:16 AM | Coastal News | Don't Miss |

ಭಟ್ಕಳ:ಭಟ್ಕಳ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶ್ರೀ ನಾಗಯಕ್ಷೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ಮಕ್ಕಳ ಕೊಠಡಿಯನ್ನು ಸಹಾಯಕ ಆಯುಕ್ತ ಮಮತಾದೇವಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಉತ್ತಮ ಸೇವೆ ನೀಡುವಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆ ಮಂಚೂಣಿಯಲ್ಲಿದೆ. ಅಡಿಗಲ್ಲು ಹಾಕಿದ 
ಮೂರೇ ತಿಂಗಳಲ್ಲಿ ಮಕ್ಕಳ ಲಸಿಕಾ ಕೊಠಡಿ ಪೂರ್ಣಗಳಿಸಿ ಲೋಕಾರ್ಪಣೆಗೊಳಿಸಿರುವುದು ಸಂತಸ ತಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನಷ್ಟು ಸೇವೆಯ ಜೊತೆಗೆ ಹೆಚ್ಚಿನ ಹಾಸಿಗೆಗಳ ಸೌಲಭ್ಯ ಕಲ್ಪಿಸಿ ಆಸ್ಪತ್ರೆ ಮೇಲ್ದರ್ಜೆಗೇರಿಸುವಲ್ಲಿ ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಮೂಲಕ ಪ್ರಯತ್ನಿಸಲಾಗುವುದು ಎಂದರು.
ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ತಮ್ಮಟ್ರಸ್ಟ್‌ ವತಿಯಿಂದ ಆಸ್ಪತ್ರೆಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿಯ ಅಗತ್ಯ ಔಷಧಗಳನ್ನು ನೀಡುವುದಾಗಿ ಭರವಸೆ ನೀಡಿದರು.
ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣಾ ನಾಯ್ಕ  ಆಸರಕೇರಿ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆ ಉತ್ತಮವಾಗಿ ಸ್ಪಂದಿಸುತ್ತಿದೆ. ಎಲ್ಲದರಲ್ಲೂ ತಪ್ಪು ಹುಡಕುವುದು ಸರಿಯಲ್ಲ. ಉತ್ತಮ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷ ಪರ್ವೇಜ್‌ ಕಾಶಿಮಜಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಿಂದ ಅನೇಕ ಜನರಿಗೆ ಅನುಕೂಲವಾಗಿದೆ. ದಾನ ಮಾಡುವುದಕ್ಕೆ ಅನೇಕ ದಾನಿಗಳು ಭಟ್ಕಳದಲ್ಲಿದ್ದಾರೆ. ಆದರೆ ದಾನ ತೆಗೆದುಕೊಳುವ ನಿಜವಾಗಿ ಅಗತ್ಯವಿರುವವರನ್ನು ಹುಡುಕುವುದು ಕಷ್ಟ, ಆದರೆ ತಾಲೂಕು ಆಸ್ಪತ್ರೆಗೆ ದಾನ ಮಾಡಿದರೆ ಅದು ಎಲ್ಲರಿಗೂ ತಲುಪುತ್ತದೆ ಎನ್ನುವ ವಿಶ್ವಾಸ ಜನರಲ್ಲಿ ಬ೦ದಿದೆ ಎಂದರು. ಬೆಂಗಳೂರಿನ ಚಾರ್ಟಡ್್ರ ಅಕೌಂಟೆಂಟ್ ರಘು ಪಿಕಳ ಮಾತನಾಡಿದರು. ವೇದಿಕೆಯಲ್ಲಿ ಜಿಎಸ್‌ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ್, ಉದ್ಯಮಿ ಮ೦ಜುನಾಥ ಪ್ರಭು ಬೆಂಗಳೂರು ಉಪಸ್ಥಿತರಿದ್ದರು.
ರಾಮದಾಸ ಪ್ರಭು ಅವರನ್ನು ಸರ್ಕಾರಿ ಆಸ್ಪತ್ರೆಯ ಪರವಾಗಿ ಸನ್ಮಾನಿಸಲಾಯಿತು.
ಶ್ರೀನಾಗಯಕ್ಷೆ ಧರ್ಮಾರ್ಥಟ್ರಸ್ಟ್‌ನಿಂದಸರಕಾರಿ ಆಸ್ಪತ್ರೆಯ
ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಗಲಿರುಳು ಸೇವೆ ಸಲ್ಲಿಸಿದ ವೈದ್ಯರಾದ ಡಾ. ಸವಿತಾ ಕಾಮತ, ಡಾ. ಸಂಶನೂರು, ಡಾ. ಸತೀಶ, ಡಾ. ಸುರಕ್ಷಿತ ಶೆಟ್ಟಿ, ಡಾ.ಕಮಲಾ, ಡಾ. ಅರುಣ, ಹಾಗೂ ಸಕಾಲದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಗಣಪತಿ ಕಾಮತ, ಅಚ್ಯುತ್ ಕಾಮತ ಅವರನ್ನು ಶ್ರೀ ನಾಗಯಕ್ಷೇ ಚಾರಿಟೆಬಲ್ ಟ್ರಸ್ಟ್ ವತಿಯಿಂದ  ಸನ್ಮಾನಿಸಲಾಯಿತು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಡಾ.ಸವಿತಾಕಾಮತ್‌ ಪ್ರಸ್ತಾವಿಕ ಮಾತನಾಡಿದರು. ವೈದ್ಯ ಅರ್ಚನಾ ಶೇಟ್ ಪ್ರಾರ್ಥಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಡಾ. ಸುಬ್ರಹ್ಮಣ್ಯ ಹೆಗಡೆ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...